ಬೆಂಗಳೂರಿನಲ್ಲಿ ಉದಯೋನ್ಮುಖ ರಂಗಭೂಮಿ ರಂಗಭೂಮಿ ಹಾಗೂ ಕಿರುತೆರೆಯ ಭರವಸೆಯ ನಟರಾಗಿದ್ದ ಮುರಳಿ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಸಾರಕ್ಕಿ ಕೆರೆ ಸಮೀಪದ ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಘಟನೆಯು ಅವರ ಆಪ್ತರಿಗೆ, ಸ್ನೇಹಿತರಿಗೆ ಆಘಾತವನ್ನು ಉಂಟುಮಾಡಿದೆ.
ಏನಿದು ಘಟನೆ?
ಕಲೆಯನ್ನೇ ಉಸಿರಾಗಿಸಿಕೊಂಡಿದ್ದ ಮುರಳಿ, ಕಳೆದ ಹಲವು ವರ್ಷಗಳಿಂದ ಕನ್ನಡ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಕೇವಲ ನಾಟಕಗಳಷ್ಟೇ ಅಲ್ಲದೆ, ಕಿರುಚಿತ್ರಗಳಲ್ಲಿಯೂ ನಟಿಸುವ ಮೂಲಕ ತಮ್ಮ ನಟನಾ ಕೌಶಲ್ಯದಿಂದ ಗುರುತಿಸಿಕೊಂಡಿದ್ದರು. ಆದರೆ ಅವರು ಈಗ ಆತ್ಮಹತ್ಯೆ ಮಾಡಿಕೊಂಡಿರುವುದು ಆಘಾತವನ್ನು ಉಂಟು ಮಾಡಿದೆ. ಇಂದು ಸಾರಕ್ಕಿ ಬಳಿ ಅವರ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಜೆ.ಪಿ. ನಗರ ಠಾಣೆಯ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ತನಿಖೆ ಕೈಗೊಂಡಿದ್ದಾರೆ.
Self Harming: ಯುವ ವೈದ್ಯೆ ಆತ್ಮಹತ್ಯೆ, ಅಂಗೈಯ ಡೆತ್‌ನೋಟ್‌ನಲ್ಲಿತ್ತು ಆತ್ಮಹತ್ಯೆಯ ರಹಸ್ಯ
ಸಾವಿಗೆ ಕಾರಣವೇನು?
ಅತ್ಯಂತ ಉತ್ಸಾಹಭರಿತ ವ್ಯಕ್ತಿತ್ವದ ಮುರಳಿ ಅವರ ಈ ಹಠಾತ್ ನಿರ್ಧಾರಕ್ಕೆ ಕಾರಣವೇನು ಎಂಬುದು ಸದ್ಯಕ್ಕೆ ಪ್ರಶ್ನೆಯಾಗಿ ಉಳಿದಿದೆ. ವೃತ್ತಿಜೀವನದ ಸಂಕಷ್ಟವೋ ಅಥವಾ ವೈಯಕ್ತಿಕ ಸಮಸ್ಯೆಯೋ ಎಂಬ ಬಗ್ಗೆ ಮಾಹಿತಿ ಇಲ್ಲ. ಮುರಳಿ ಆತ್ಮಹತ್ಯೆ ಬಗ್ಗೆ ಸ್ನೇಹಿತರು ಹಾಗೂ ಸಹ ಕಲಾವಿದರು ಆಘಾತ ವ್ಯಕ್ತಪಡಿಸಿದ್ದಾರೆ. ಮೃತದೇಹದ ಬಳಿ ಯಾವುದೇ ಡೆತ್‌ನೋಟ್ ಲಭ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ. ಮುರಳಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರಂಗಭೂಮಿ ಕಲಾವಿದರು ಕಂಬನಿ ಮಿಡಿದಿದ್ದಾರೆ.
Bagalakote news: ಬಾಗಲಕೋಟೆ: ಪ್ರೇಮಿ ಜತೆ ಜಗಳದಿಂದ ನೊಂದು ಯುವತಿ ಆತ್ಮಹತ್ಯೆ, ಸುದ್ದಿ ತಿಳಿದು ಪ್ರಿಯಕರನೂ ನೇಣಿಗೆ
"ಒಬ್ಬ ಪ್ರತಿಭಾವಂತ ಕಲಾವಿದನನ್ನು ನಾವು ಕಳೆದುಕೊಂಡಿದ್ದೇವೆ. ಜೀವನದ ಸವಾಲುಗಳನ್ನು ಎದುರಿಸುವ ಬದಲು ಅವರು ಸಾವಿಗೆ ಶರಣಾಗಿದ್ದು ಅತ್ಯಂತ ನೋವಿನ ಸಂಗತಿ" ಎಂದು ಅವರ ಆಪ್ತರು ವಿಷಾದಿಸಿದ್ದಾರೆ. ಪೊಲೀಸರು ಮುರಳಿ ಅವರ ಮೊಬೈಲ್ ಕರೆಗಳ ವಿವರ ಹಾಗೂ ಅವರ ಆಪ್ತ ವಲಯವನ್ನು ವಿಚಾರಣೆ ನಡೆಸುತ್ತಿದ್ದು, ಸಾವಿನ ಹಿಂದಿನ ಕಾರಣ ಶೀಘ್ರವೇ ಹೊರಬರುವ ನಿರೀಕ್ಷೆಯಿದೆ.
ಮುರಳಿ ಸಾವಿಗೆ ಸಂತಾಪ
ಕಂಬನಿ ಮಿಡಿದ ಆಪ್ತರು
ಮುರಳಿ ಅವರ ಆಪ್ತರಾದ ನಟ ವೆಂಕಟೇಶ್ ಪ್ರಸಾದ್ ಅವರು, "ಇಷ್ಟು ಸಣ್ಣ ವಯಸ್ಸಿನ, ಸುಂದರ ಮುಖದ ರಂಗಭೂಮಿ ಗೆಳೆಯ ...ಇಂದು ಬೆಳಿಗ್ಗೆ ನಮ್ಮೆಲ್ಲರನ್ನೂ ಬಿಟ್ಟು ಹೊರಟ.. ತಾನೇ ತನ್ನ ದಾರಿಯಲ್ಲಿ... ಒಂದು ನಿಮಿಷ ನಮ್ಮಲ್ಲಿ ಯಾರಿಗಾದರೂ ತನ್ನ ನೋವು ಹೇಳಿಕೊಂಡಿದ್ದರೆ ಏನಾದರೂ ಪರಿಹಾರ ಮಾಡಬಹುದಿತ್ತು.. ನಮಗೂ ಅವನ ನೋವೇನಿತ್ತು ಅರ್ಥವಾಗದೇ ಹೋಯಿತು.. ಈ ಪಾಪ ಪ್ರಜ್ಞೆ ಕೊನೆಯವರೆಗೂ ಕಾಡದೇ ಬಿಡದು... ಹೋಗಿ ಬಾ ಮುರಳಿ" ಎಂದು ಬರೆದುಕೊಂಡಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರು ಮುರಳಿ ಸಾವಿಗೆ ಕಂಬನಿ ಮಿಡಿದಿದ್ದು, "ರಂಗಶಂಕರದ ಬಳಿ ಎದುರಿಗೆ ಸಿಕ್ಕಾಗ , ಹಾಯ್ ಹೇಳುತ್ತಿದ್ದ ನಗುವೊಂದು ತನ್ನನ್ನು ತಾನು ಅಂತ್ಯಗೊಳಿಸಿಕೊಂಡಿದೆ, ಆ ನಗುವಿನ ಹಿಂದಿನ ನೋವು ಅವರಿಗೆ ಗೊತ್ತಿರುತ್ತದೆ, ಆದರೆ ಅವರ ಈ ಸಡನ್ ಎಂಡ್, ಬದುಕಿರುವವರಿಗೆ ನೀಡುವ ದುಃಖ ದೀರ್ಘವಾದುದು, ಏನು ಹೇಳುವುದೋ ಗೊತ್ತಾಗ್ತಿಲ್ಲ" ಎಂದು ಹೇಳಿದ್ದಾರೆ.