Bagalakote news: ಬಾಗಲಕೋಟೆ: ಪ್ರೇಮಿ ಜತೆ ಜಗಳದಿಂದ ನೊಂದು ಯುವತಿ ಆತ್ಮಹತ್ಯೆ, ಸುದ್ದಿ ತಿಳಿದು ಪ್ರಿಯಕರನೂ ನೇಣಿಗೆ
ಮೃತ ಕಾರ್ತಿಕ್ ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಅಸಂಗಿ ಗ್ರಾಮದವನಾಗಿದ್ದು, ಪವಿತ್ರಾ ಬನಹಟ್ಟಿಯ ಕೆ ಹೆಚ್ ಡಿ ಸಿ ಕಾಲೋನಿ ನಿವಾಸಿಯಾಗಿದ್ದಾಳೆ. ನಿನ್ನೆ ಪವಿತ್ರಾ ಹಾಗೂ ಕಾರ್ತಿಕ್ ಜಗಳ ಮಾಡಿಕೊಂಡಿದ್ದರು. ಜಗಳವೇ ಕಾರಣವಾಗಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಕಾರ್ತಿಕ್, ಪವಿತ್ರಾ -
ಬಾಗಲಕೋಟೆ, ಏ.08: ಯುವ ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಸಾವಿಗೆ ಶರಣಾದ (Self harming) ಆಘಾತಕಾರಿ ಘಟನೆ ಬಾಗಲಕೋಟೆ (Bagalakote news) ಜಿಲ್ಲೆಯಲ್ಲಿ ನಡೆದಿದೆ. ರಬಕವಿ ಬನಹಟ್ಟಿ ತಾಲೂಕಿನ ಅಸಂಗಿ ಗ್ರಾಮ ಹಾಗೂ ಬನಹಟ್ಟಿ ನಗರದಲ್ಲಿ ಪ್ರೇಮಿಗಳು (lovers) ಸಾವಿಗೆ ಶರಣಾಗಿದ್ದಾರೆ. ಸಾವಿಗೀಡಾದ ಪ್ರೇಮಿಗಳನ್ನು 19 ವರ್ಷದ ಪವಿತ್ರಾ ಹಾಗೂ 20 ವರ್ಷದ ಕಾರ್ತಿಕ್ ಎಂದು ಗುರುತಿಸಲಾಗಿದೆ.
ಮೃತ ಕಾರ್ತಿಕ್ ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಅಸಂಗಿ ಗ್ರಾಮದವನಾಗಿದ್ದು, ಪವಿತ್ರಾ ಬನಹಟ್ಟಿಯ ಕೆ ಹೆಚ್ ಡಿ ಸಿ ಕಾಲೋನಿ ನಿವಾಸಿಯಾಗಿದ್ದಾಳೆ. ನಿನ್ನೆ ಪವಿತ್ರಾ ಹಾಗೂ ಕಾರ್ತಿಕ್ ಜಗಳ ಮಾಡಿಕೊಂಡಿದ್ದರು. ಪ್ರೇಮಿಯ ಜೊತೆ ಜಗಳದ ನಂತರ ಮನನೊಂದು ಪವಿತ್ರಾ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಈ ವಿಚಾರ ತಿಳಿದು ಆಘಾತಕ್ಕೀಡಾದ ಕಾರ್ತಿಕ್ ಕೂಡ ಬಳಿಕ ಸಾವಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತುಂಗಾ ನದಿಯಲ್ಲಿ ಯುವಕ ನೀರುಪಾಲು
ಶಿವಮೊಗ್ಗ: ತುಂಗಾ ನದಿಯಲ್ಲಿ (Tunga River) ಈಜಲು (Swimming) ಹೋಗಿ ಕಣ್ಮರೆಯಾಗಿದ್ದ ಯುವಕನ ಶವ ಪತ್ತೆಯಾಗಿದೆ. ಮುಳುಗು ತಜ್ಞ ಈಶ್ವರ್ ಮಲ್ಪೆ ಯುವಕನ ಶವಕ್ಕಾಗಿ ನದಿಯಲ್ಲಿ ಹುಡುಕಾಟ ನಡೆಸಿದ್ದರು. ನದಿಗೆ ಇಳಿದಿದ್ದ ಕೆಲವೇ ಅಡಿಯ ವ್ಯಾಪ್ತಿಯಲ್ಲಿ ಶವ ಪತ್ತೆಯಾಗಿದೆ. ಮೃತನನ್ನು ತೀರ್ಥಹಳ್ಳಿ (Thirthahalli) ತಾಲೂಕಿನ ಸೀಬಿನಕೆರೆ ನಿವಾಸಿ ಅಕ್ಷಯ್ (26) ಎಂದು ಗುರುತಿಸಲಾಗಿದೆ.
ಏ.7ರ ಸಂಜೆ ಕಲ್ಲು ಬಂಡೆ ಮೇಲೆ ಮೊಬೈಲ್, ಚಪ್ಪಲಿ, ಬಟ್ಟೆಯನ್ನು ಇಟ್ಟು ಈಜಲು ಹೋಗಿ ಕಣ್ಮರೆಯಾಗಿದ್ದ. ಯುವಕನ ಶವವನ್ನು ತೀರ್ಥಹಳ್ಳಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Chikkamagaluru News: ಎನ್.ಆರ್.ಪುರದಲ್ಲಿ ಸೇತುವೆ ಮೇಲಿಂದ ಹೊಳೆಗೆ ಹಾರಿ ನರ್ಸ್ ಆತ್ಮಹತ್ಯೆ