ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara Chapter 1 Trailer: ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದ ʼಕಾಂತಾರ ಚಾಪ್ಟರ್‌ 1ʼ ಟ್ರೈಲರ್‌; ರಿಲೀಸ್‌ ಕೆಲ ಹೊತ್ತಲ್ಲೇ 4 ಕೋಟಿ ವ್ಯೂವ್ಸ್‌

Kantara Chapter 1: ʼಕಾಂತಾರ ಚಾಪ್ಟರ್‌ 1ʼ ಚಿತ್ರದ ಬಹುನಿರೀಕ್ಷಿತ ಟ್ರೈಲರ್‌ ಕೊನೆಗೂ ರಿಲೀಸ್‌ ಆಗಿದೆ. ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಸಿನಿಮಾ ತಂಡ ಮುನ್ನುಡಿಯಾಗಿ ಟ್ರೈಲರ್‌ ಬಿಡುಗಡೆ ಮಾಡಿದೆ. ವಿವಿಧ ಭಾಷೆಗಳಲ್ಲಿ ಟ್ರೈಲರ್‌ ಮೂಡಿ ಬಂದಿದ್ದು, ದಾಖಲೆಯ ವೀಕ್ಷಣೆ ಕಂಡಿದೆ.

ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದ ʼಕಾಂತಾರ ಚಾಪ್ಟರ್‌ 1ʼ ಟ್ರೈಲರ್‌

-

Ramesh B Ramesh B Sep 22, 2025 7:51 PM

ಬೆಂಗಳೂರು: ಜಾಗತಿಕ ಸಿನಿಪ್ರಿಯರ ಕುತೂಹಲ ಕೆರಳಿಸಿದ ʼಕಾಂತಾರ ಚಾಪ್ಟರ್‌ 1ʼ ಚಿತ್ರದ ಟ್ರೈಲರ್‌ (Kantara Chapter 1 Trailer) ಕೊನೆಗೂ ರಿಲೀಸ್‌ ಆಗಿದೆ. ಅಕ್ಟೋಬರ್‌ 2ರಂದು ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು, ಇದೀಗ ರಿಲೀಸ್‌ ಆಗಿರುವ ಟ್ರೈಲರ್‌ ನಿರೀಕ್ಷೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸಫಲವಾಗಿದೆ. ವಿವಿಧ ಭಾಷೆಗಳಲ್ಲಿ ಮೂಡಿ ಬಂದಿರುವ ಟ್ರೈಲರ್‌ ಇದೀಗ ಯೂಟ್ಯೂಬ್‌ನಲ್ಲಿ ದಾಖಲೆ ಬರೆದಿದೆ. ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್‌ನಲ್ಲಿ ಬರೋಬ್ಬರಿ 40 ಮಿಲಿಯನ್‌ (4 ಕೋಟಿ) ವೀಕ್ಷಣೆ ಕಂಡಿದೆ. ಆ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಇತಿಹಾಸ ಬರೆಯಲು ಸಜ್ಜಾಗಿದೆ.

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ʼಕಾಂತಾರ ಚಾಪ್ಟರ್‌ 1ʼ 2022ರಲ್ಲಿ ತೆರೆಕಂಡ ʼಕಾಂತಾರʼ ಸಿನಿಮಾದ ಪ್ರೀಕ್ವೆಲ್‌. ಇದೇ ಕಾರಣಕ್ಕೆ 3 ವರ್ಷಗಳ ಹಿಂದೆ ಘೋಷಣೆಯಾದಾಗಲೇ ಭಾರಿ ಕುತೂಹಲ ಮೂಡಿಸಿತ್ತು. ʼಕಾಂತಾರʼದಲ್ಲಿ ತುಳುನಾಡ ವಿಶಿಷ್ಟ ಭೂತಾರಾಧನೆಯನ್ನು ಪರಿಚಯಿಸಿದ್ದ ರಿಷಬ್‌ ಶೆಟ್ಟಿ ಪ್ರೇಕ್ಷಕರನ್ನು ಹೊಸದೊಂದು ಲೋಕಕ್ಕೆ ಕೊಂಡೊಯ್ದಿದ್ದರು. ಸ್ಯಾಂಡಲ್‌ವುಡ್‌ನ ಸಿದ್ಧಸೂತ್ರಗಳಿಂದ ಭಿನ್ನವಾಗಿ ಕಥೆಯನ್ನು ಕಟ್ಟಿಕೊಟ್ಟು ಯಶಸ್ವಿಯಾಗಿದ್ದರು. ಅದೇ ಕಾರಣಕ್ಕೆ ಆರಂಭದಿಂದಲೇ ಪ್ರೀಕ್ವೆಲ್‌ ಗಮನ ಸೆಳೆದಿತ್ತು.

ಇದೇ ವೇಗದಲ್ಲಿ ಸಾಗಿದರೆ ʼಕಾಂತಾರ ಚಾಪ್ಟರ್‌ 1ʼ 24 ಗಂಟೆಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಭಾರತದ ಟ್ರೈಲರ್‌ ಎನಿಸಿಕೊಳ್ಳಲಿದೆ ಎನ್ನುವ ಲೆಕ್ಕಾಚಾರ ಆರಂಭವಾಗಿದೆ. ಸದ್ಯ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ತೆಲುಗಿನ ʼಸಲಾರ್‌ʼ ಇದ್ದರೆ, ದ್ವಿತೀಯ ಸ್ಥಾನದಲ್ಲಿ ಕನ್ನಡದ ಹೆಮ್ಮೆಯ ʼಕೆಜಿಎಫ್‌ 2ʼ ಇದೆ. ರಿಲೀಸ್‌ ಆಗಿ ಕೆಲವೇ ಗಂಟೆಗಳಲ್ಲಿ ʼಕಾಂತಾರ ಚಾಪ್ಟರ್‌ 1ʼ ಟ್ರೈಲರ್‌ ವ್ಯೂವ್ಸ್‌ ಕೋಟಿ ದಾಟಿದ ಹಿನ್ನೆಲೆಯಲ್ಲಿ ದಾಖಲೆ ನಿರ್ಮಿಸುವ ಸಾಧ್ಯತೆ ದಟ್ಟವಾಗಿದೆ.

ʼಕಾಂತಾರ ಚಾಪ್ಟರ್‌ 1ʼ ಚಿತ್ರದ ಟ್ರೈಲರ್‌ ಇಲ್ಲಿದೆ:



24 ಗಂಟೆಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಕಂಡ ಭಾರತೀಯ ಚಿತ್ರಗಳ ಟ್ರೈಲರ್‌

ʼಸಲಾರ್‌ʼ-113.2 ಮಿಲಿಯನ್‌

ʼಕೆಜಿಎಫ್‌ ಚಾಪ್ಟರ್‌ 2ʼ-106.5 ಮಿಲಿಯನ್‌

ʼಪುಷ್ಪ 2ʼ-102 ಮಿಲಿಯನ್‌

ʼಆದಿಪುರುಷ್‌ʼ-74 ಮಿಲಿಯನ್‌

ʼಸಲಾರ್‌ʼ-72.2 ಮಿಲಿಯನ್‌

ʼಅನಿಮಲ್‌ʼ-71.4 ಮಿಲಿಯನ್‌

ʼಡಂಕಿʼ- 58.5 ಮಿಲಿಯನ್‌

ʼರಾಧೆ ಶ್ಯಾಮ್‌ʼ-57.5 ಮಿಲಿಯನ್‌

ʼಜವಾನ್‌ʼ-55 ಮಿಲಿಯನ್‌

ʼಸಿಂಗಂ ಅಗೈನ್‌ʼ-51.95

ವಿಶೇಷ ಎಂದರೆ ಮೊದಲ 5 ಸ್ಥಾನಗಳಲ್ಲಿ ದಕ್ಷಿಣ ಭಾರತದ ಚಿತ್ರಗಳೇ ಇವೇ. ಅಲ್ಲದೆ ಮೊದಲೆರಡು ಸ್ಥಾನದಲ್ಲಿರುವುದು (ʼಸಲಾರ್‌ʼ, ʼಕೆಜಿಎಫ್‌ ಚಾಪ್ಟರ್‌ 2ʼ) ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ, ಪ್ರಶಾಂತ್‌ ನೀಲ್‌ ನಿರ್ದೇಶನದ ಸಿನಿಮಾ.

ಕುತೂಹಲದ ಮೂಟೆ ಬಿಚ್ಚಿಟ್ಟ ರಿಷಬ್‌ ಶೆಟ್ಟಿ

ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ 1ʼ ಚಿತ್ರದ ಶೂಟಿಂಗ್‌ ಆರಂಭಿಸಿದಾಗ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ತಾವು ನಟಿಸುವುದನ್ನು ಹೊರತುಪಡಿಸಿ ಬೇರೆ ಯಾವೆಲ್ಲ ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದನ್ನೂ ತಿಳಿಸಿರಲಿಲ್ಲ. ಇತ್ತೀಚೆಗೆ ಒಂದೊಂದೇ ಪೋಸ್ಟರ್‌ ರಿಲೀಸ್‌ ಮಾಡಿ ಪಾತ್ರವರ್ಗವನ್ನು ಪರಿಚಯಿಸಿದ್ದರು. ಚಿತ್ರದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್‌ ಕಾಣಿಸಿಕೊಂಡಿದ್ದು, ಮುಖ್ಯ ಪಾತ್ರಗಳಲ್ಲಿ ಗುಲ್ಶನ್‌ ದೇವಯ್ಯ, ರಾಕೇಶ್‌ ಪೂಜಾರಿ, ಪ್ರಕಾಶ್‌ ತುಮ್ಮಿನಾಡ್‌ ಮತ್ತಿತರರು ಅಭಿನಯಿಸಿದ್ದಾರೆ.