ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರವಾಗುತ್ತಿರುವ ‘ಕರ್ಣ’ ಧಾರಾವಾಹಿ (Karna Serial) ಸದ್ಯ ಕನ್ನಡ ಕಿರುತೆರೆಯಲ್ಲಿ ಲೀಡಿಂಗ್‌ನಲ್ಲಿದೆ. ಕಿರಣ್ ರಾಜ್, ಭವ್ಯಾ ಗೌಡ, ನಮ್ರತಾ ಗೌಡ ನಟನೆಯ ‘ಕರ್ಣ’ ಸೀರಿಯಲ್ ಈ ವಾರವೂ ನಂಬರ್ 1 ಸ್ಥಾನ ಪಡೆದಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕರ್ಣ' ಧಾರಾವಾಹಿ ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ರಮೇಶ್ನ ಕುತಂತ್ರದಿಂದ 'ಕರ್ಣ' ಧಾರಾವಾಹಿಯ ನಾಯಕ ಕರ್ಣ ಜೈಲು ಸೇರಿದ್ದಾನೆ. ಡೇಟ್ ಬಾರ್ ಆಗಿರೋ ಮೆಡಿಸಿನ್ ಕೊಟ್ಟ ಕಾರಣ, ಮಕ್ಕಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕರ್ಣ ಬಲಿಪಶುವಾಗಿದ್ದಾನೆ. ಇನ್ನೊಂದು ಕಡೆ ಕರ್ಣನ ಮೇಲೆ ನಿತ್ಯಾಗೆ (Nithya) ಲೈಟ್ ಆಗಿಯೇ ಪ್ರೀತಿ ಶುರುವಾದಂತಿದೆ.
ಮೊದಲ ಬಾರಿಗೆ ಮಾಡಿದ ಕಾಫಿ
ನಿತ್ಯಾ ತನ್ನ ಕೈಯಾರೇ ಕರ್ಣನಿಂದ ಕಾಫಿ ಮಾಡಿಕೊಟ್ಟಿದ್ದಳು. ಇದು ಅವಳ ಜೀವನದಲ್ಲಿ ಮಾಡಿರೋ ಮೊದಲ ಕಾಫಿಯಾಗಿತ್ತು. ನಿತ್ಯಾಳಿಗೆ ಅವಳು ಮೊದಲ ಬಾರಿಗೆ ಮಾಡಿದ ಕಾಫಿಯನ್ನು ಕರ್ಣ ಹೊಗಳಿದ್ದನ್ನು ನೋಡಿ ಎಲ್ಲೋ ಕಳೆದುಹೋದಳು ನಿತ್ಯಾ.ನಿತ್ಯಾಳಿಗೆ ಕಾಫಿ ಮಾಡಲು ಬರದೇ ಇರುವ ಕಾರಣದಿಂದ ಮನೆಯ ಕೆಲಸದಾಕೆ ಹೇಳಿಕೊಟ್ಟಿರುವ ಸಿಂಪಲ್ ಟ್ರಿಕ್ಸ್ ಇದಾಗಿದೆ.
ಇದನ್ನೂ ಓದಿ: Kichcha Sudeep: ರಾಜಮೌಳಿಯ ‘ವಾರಣಾಸಿ’ ಸಿನಿಮಾದಲ್ಲಿ ಸುದೀಪ್? ಪಾತ್ರ ಏನು?
ಒಟ್ಟಾರೆ ನಿಧಿ ಲವ್ ಮಾಡ್ತಿರೋ ವಿಚಾರ ನಿತ್ಯಾಗೆ ಇನ್ನೂ ಗೊತ್ತಿಲ್ಲ. ಒಂದು ವೇಳೆ ನಿತ್ಯಾಗೆ ಕರ್ಣ ಮೇಲೆ ಪ್ರೀತಿ ಆದರೆ ನಿಧಿ ಕಥೆ ಏನು ಎಂಬುದೇ ವೀಕ್ಷಕರಲ್ಲಿ ಕುತೂಹಲ.
ಕರ್ಣ ತೋರುವ ಕಾಳಜಿಗೆ ಇದಾಗಲೇ ನಿತ್ಯಾಳಿಗೆ ಕರ್ಣನ ಮೇಲೆ ಅರಿವೇ ಇಲ್ಲದಂತೆ ಲವ್ ಶುರುವಾಗಿದೆ. ಅಷ್ಟಕ್ಕೂ ಅವಳಿಗೆ ಕರ್ಣ ತನ್ನ ತಂಗಿಯನ್ನೇ ಪ್ರೀತಿಸ್ತಾ ಇರೋ ವಿಷ್ಯ ಗೊತ್ತೇ ಇಲ್ವಲ್ಲಾ.ಯಾವತ್ತೂ ಕರ್ಣ ಮತ್ತು ನಿಧಿ ಒಂದಾಗಬೇಕು. ಕಥೆ ದಾರಿ ತಪ್ಪಬಾರದು ಎಂದು ಕಮೆಂಟ್ಗಳಲ್ಲಿ ನೆಟ್ಟಿಗರು ಹೇಳುತ್ತಿದ್ದಾರೆ.
ಸಖತ್ ಚಮಕ್
ಕರ್ಣ ಈಗ ಮೊದಲಿನಂತಿಲ್ಲ, ಅಪ್ಪನ ಮೋಸಾಟ ಅವನ ಗಮನಕ್ಕೆ ಬಂದಿದೆ. ಸಖತ್ ಚಮಕ್ ಕೊಡ್ತಾ ಇದ್ದಾನೆ ಕರ್ಣ. ಕರ್ಣ ತನ್ನ ಚಾಣಾಕ್ಷತನದಿಂದ ಸಂಜಯ್ ಮಾಡಿದ್ದ ಪ್ರತಿಯೊಂದು ಮೋಸವನ್ನೂ ಸಾಕ್ಷಿ ಸಮೇತ ಹಿಡಿದಿದ್ದಾನೆ.
ನಿಧಿ ಪರೀಕ್ಷೆಯಲ್ಲಿ ಸೋಲಲಿ ಎಂದು ಸಂಜಯ ಹೊಂಚು ಹಾಕಿದ್ದನು. ಆದರೆ ನಿಧಿಯ ಗೆಲುವಿನಿಂದ ಸಂಜಯನ ಪ್ಲಾನ್‌ಗಳು ಉಲ್ಟಾ ಹೊಡೆದಿವೆ. ಸಂಜಯನ ಅಹಂಕಾರಕ್ಕೆ ಈ ಬಾರಿ ಸರಿಯಾದ ಏಟು ಬಿದ್ದಿದೆ. ಸತ್ಯ ಮತ್ತು ಪ್ರಾಮಾಣಿಕತೆಗೆ ಕೊನೆಗೂ ಜಯ ಸಿಕ್ಕಿದೆ.
ಇದನ್ನೂ ಓದಿ: Second Case Of Seetharam : ತಮಿಳಿನಲ್ಲಿಯೂ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ರಿಲೀಸ್: ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ ಸಾಥ್
ಸಂಜಯನ ಕುತಂತ್ರಗಳು ನಿಧಿಯ ಹಠದ ಮುಂದೆ ಮಂಕಾಗಿವೆ. ಸಂಜಯ ಮುಂದಿನ ದಿನಗಳಲ್ಲಿ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದು ದೊಡ್ಡ ಕುತೂಹಲ ಮೂಡಿಸಿದೆ.