ಬಾಲಿವುಡ್ ಕ್ಯೂಟ್ ಜೋಡಿ ಎಂದೇ ಖ್ಯಾತಿ ಪಡೆದ ವಿಕ್ಕಿ ಕೌಶಲ್ ( Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif ) ಕಳೆದ ವರ್ಷ ನವೆಂಬರ್‌ನಲ್ಲಿ ಮಗ ವಿಹಾನ್ ಕೌಶಲ್‌ನನ್ನು ಸ್ವಾಗತಿಸಿದ್ದರು . ಅಂದಿನಿಂದ ವಿಕ್ಕಿ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ತಂದೆಯಾಗಿರುವ ಖುಷಿಯ ಬಗ್ಗೆ ಹಂಚಿಕೊಂಡಿದ್ದಾರೆ. ಆದರೆ ಕತ್ರಿನಾ ಮಾತ್ರ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಮಾತೂ ಆಡಿಲ್ಲ. ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ (public appearance) ಕಾಣಿಸಿಕೊಂಡಿದ್ದಾರೆ. ಮೆಚ್ಚಿನ ನಟಿಯನ್ನು ನೋಡಿ ಫ್ಯಾನ್ಸ್ ಸಂತಸ ವ್ಯಕ್ತಪಡಿಸಿಸುತ್ತಿದ್ದಾರೆ.
ಭಾನುವಾರ, ವಿಕ್ಕಿ ಮತ್ತು ಕತ್ರಿನಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.ಇಬ್ಬರೂ ಪಾಪರಾಜಿಗಳಿಗೆ ಸಂತೋಷದಿಂದ ಪೋಸ್ ನೀಡಿದರು. ಸಖತ್ ಸ್ಟೈಲಿಶ್ ಆಗಿ ಕಾಣುತ್ತಿದ್ದರು. ವಿಕ್ಕಿ ಕಪ್ಪು ಟಿ-ಶರ್ಟ್ ಡೆನಿಮ್‌ಗಳೊಂದಿಗೆ ಕಾಣಿಸಿಕೊಂಡರೆ, ಕತ್ರಿನಾ ಓವರ್‌ಕೋಟ್ ಮತ್ತು ಕಪ್ಪು ಸನ್ಗ್ಲಾಸ್‌ನೊಂದಿಗೆ ಕಂಡಿದ್ದಾರೆ.
ಇದನ್ನೂ ಓದಿ: Shah Rukh Khan: ʼಕಿಂಗ್ʼ ಮೂವಿಯ ಈ ದೃಶ್ಯ ಲೀಕ್! ಶಾರುಖ್‌ರನ್ನು ಹೊಗಳಿದ್ದೇಕೆ ಫ್ಯಾನ್ಸ್?
ಮಗ ಎಲ್ಲಿದ್ದಾನೆ?
ಈ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ತಕ್ಷಣ, ಅಭಿಮಾನಿಗಳು ಪ್ರೀತಿಯಿಂದ ಕಮೆಂಟ್ ಮಾಡಿದ್ದಾರೆ. ಅನೇಕರು "ಗಾರ್ಜಿಯಸ್ ಮಮ್ಮಿ ಮತ್ತು ಡ್ಯಾಡಿ" ಎಂದು ಬರೆದರೆ, ಇನ್ನೊಬ್ಬರು "ವಿಹಾನ್‌ನ ಅತ್ಯಂತ ಮುದ್ದಾದ ಪೋಷಕರು" ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವು ಅಭಿಮಾನಿಗಳು ಮಗ ಎಲ್ಲಿದ್ದಾನೆ? ಅಂತ ಕಮೆಂಟ್ ಮಾಡಿದ್ದಾರೆ.
ವಿಕಿ ಮತ್ತು ಕತ್ರಿನಾ ಮೊದಲ ಬಾರಿಗೆ ಭೇಟಿಯಾದದ್ದು ಪ್ರಶಸ್ತಿ ಕಾರ್ಯಕ್ರಮವೊಂದರಲ್ಲಿ. ಈ ಜೋಡಿ 2021 ರಲ್ಲಿ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾದಲ್ಲಿ ನಡೆದ ಖಾಸಗಿ ಭವ್ಯ ಸಮಾರಂಭದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದ ಸಂದರ್ಭದಲ್ಲಿ ವಿವಾಹವಾದರು.
2025 ರಲ್ಲಿ ವಿಕ್ಕಿ ತಮ್ಮ ಛಾವಾ ಚಿತ್ರದ ಮೂಲಕ ಯಶಸ್ಸಿನ ಉತ್ತುಂಗಕ್ಕೇರಿದರು. ಛತ್ರಪತಿ ಸಂಭಾಜಿ ಮಹಾರಾಜನ ಪಾತ್ರವನ್ನು ನಿರ್ವಹಿಸಿದ ಈ ಐತಿಹಾಸಿಕ ಆಕ್ಷನ್ ಚಿತ್ರವು ವಿಶ್ವಾದ್ಯಂತ ₹ 807ಕೋಟಿ ಗಳಿಸುವ ಮೂಲಕ ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿತು. ಅವರು ಮುಂದಿನ ಬಾರಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಲವ್ & ವಾರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: Aase Serial: ರೋಹಿಣಿ ಮುಚ್ಚಿಟ್ಟ ಮಹಾ ರಹಸ್ಯದ ಅನಾವರಣ!
ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಪ್ರಸ್ತುತ ನಿರ್ಮಾಣ ಹಂತದಲ್ಲಿದೆ ಮತ್ತು ಜನವರಿ 21, 2027 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕತ್ರಿನಾ ಕೈಫ್ ಇನ್ನೂ ಯಾವುದೇ ಹೊಸ ಯೋಜನೆಯನ್ನು ಘೋಷಿಸಿಲ್ಲ.