ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕೊನೆಗೂ ರಿವೀಲ್ ಆಯ್ತು ಜ್ಯೂನಿಯರ್ ವಿಕ್ಕಿ ಕೌಶಲ್ ಹೆಸರು; ಅಭಿಮಾನಿಗಳ ಕುತೂಹಲಕ್ಕೆ ತೆರೆ

ಬಾಲಿವುಡ್ ಕ್ಯೂಟ್ ಜೋಡಿಗಳಲ್ಲಿ ಒಂದಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಇತ್ತೀಚೆ ಗಂಡು ಮಗುವನ್ನು ಬರಮಾಡಿಕೊಂಡಿದ್ದು, ಅಭಿಮಾನಿಗಳಿಗೆ ಈ ವಿಚಾರ ಸಂತಸ ತಂದಿತ್ತು. ಈ ಖುಷಿಯ ವಿಚಾರವನ್ನು ಅವರೇ ಶೇರ್ ಮಾಡಿಕೊಂಡಿದ್ದರು. ಇದೀಗ ಮಗುವಿನ ಹೆಸರು ರಿವೀಲ್‌ ಆಗಿದೆ. ಎರಡು ತಿಂಗಳ ನಂತರ ದಂಪತಿ ತಮ್ಮ ಮಗನ ಹೆಸರನ್ನು ಪೋಸ್ಟ್ ಮೂಲಕ ಬಹಿರಂಗಪಡಿಸಿದೆ.

ಬಾಲಿವುಡ್ ಜೋಡಿ ಕತ್ರಿನಾ-ವಿಕ್ಕಿ ಕೌಶಲ್‌ ಪುತ್ರನ ಹೆಸರು ರಿವೀಲ್‌

ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ -

Profile
Pushpa Kumari Jan 7, 2026 8:09 PM

ಮುಂಬೈ, ಜ. 7: ಸೆಲೆಬ್ರಿಟಿಗಳ ವೈಯಕ್ತಿಕ ಬದುಕಿನ ಬಗ್ಗೆ ಅಭಿಮಾನಿಗಳಿಗೆ ಸದಾ ಕುತೂಹಲ ಇದ್ದೇ ಇರುತ್ತದೆ. ಸೆಲೆಬ್ರಿಟಿಗಳ ಡೇಟಿಂಗ್, ಮದುವೆ, ಡಿವೋರ್ಸ್, ಮಗು ಹೀಗೆ ಅನೇಕ ವಿಚಾರಗಳು ಆಗಾಗ ಮುನ್ನಲೆಗೆ ಬರುತ್ತಲೇ ಇರುತ್ತದೆ‌‌. ಬಾಲಿವುಡ್ ಕ್ಯೂಟ್ ಜೋಡಿಗಳಲ್ಲಿ ಒಂದಾದ ಕತ್ರಿನಾ ಕೈಫ್ (Katrina Kaif) ಮತ್ತು ವಿಕಿ ಕೌಶಲ್ (Vicky Kaushal) ಇತ್ತೀಚೆಗಷ್ಟೇ ಗಂಡು ಮಗುವನ್ನು ಬರಮಾಡಿಕೊಂಡಿದ್ದು, ಅಭಿಮಾನಿಗಳಿಗೆ ಈ ವಿಚಾರ ಸಂತಸ ತಂದಿತ್ತು. ಈ ಖುಷಿಯ ವಿಚಾರವನ್ನು ಅವರೇ ಶೇರ್ ಮಾಡಿ ಕೊಂಡಿದ್ದರು. ಆದರೆ ಮಗುವಿಗೆ ಹೆಸರು ಇಟ್ಟಿರದ ಕಾರಣ ಅವರ ಫ್ಯಾನ್ಸ್‌ ಈ ಬಗ್ಗೆ ಕಾತುರದಿಂದ ಕಾಯುತ್ತಿದ್ದರು. ಈಗ ಎರಡು ತಿಂಗಳ ನಂತರ, ದಂಪತಿ ಅಂತಿಮವಾಗಿ ತಮ್ಮ ಮಗನ ಹೆಸರನ್ನು ಪೋಸ್ಟ್ ಮೂಲಕ ರಿವೀಲ್ ಮಾಡಿದೆ. ಅವರ ಅಭಿಮಾನಿಗಳು ಮತ್ತು ಸ್ಟಾರ್ ಸೆಲೆಬ್ರಿಟಿಗಳು ಪೋಸ್ಟ್‌ಗೆ ಕಮೆಂಟ್ ಮಾಡಿ ಅಭಿನಂದಿಸಿದ್ದಾರೆ.

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರಿಗೆ ಮದುವೆಯಾಗಿ ನಾಲ್ಕು ವರ್ಷವಾದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ದಂಪತಿ ಎಲ್ಲಿ ಹೋದರು ಅಭಿಮಾನಿಗಳು ಈ ಬಗ್ಗೆ ಪ್ರಶ್ನಿಸಿ ಮುಜುಗರ ತಂದಿದ್ದೂ ಇದೆ. 2025ರ ನವೆಂಬರ್ 7ರಂದು ಈ ದಂಪತಿಗೆ ಗಂಡು ಮಗು ಜನಿಸಿದ್ದು, ಈ ಖುಷಿಯ ವಿಚಾರವನ್ನು ವಿಕ್ಕಿ ಕೌಶಲ್ ಮತ್ತು ನಟಿ ಕತ್ರಿನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು‌. ಮಗು ಜನಿಸಿ ಎರಡು ತಿಂಗಳು ಸಮೀಪಿಸಿದರೂ ಮಗುವಿನ ಹೆಸರು ಮಾತ್ರ ರಿವೀಲ್ ಮಾಡಿರಲಿಲ್ಲ. ಇದೀಗ ತಮ್ಮ ಮಗುವಿಗೆ ವಿಹಾನ್ ಕೌಶಲ್ (Vihaan Kaushal) ಎಂದು ಹೆಸರಿಟ್ಟಿರುವುದಾಗಿ ಸ್ವತಃ ಅವರೇ ತಿಳಿಸಿದ್ದಾರೆ.

ಕತ್ರಿನಾ ಕೈಫ್ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್‌:

ನಟ ವಿಕ್ಕಿ ಕೌಶಲ್, ನಟಿ ಕತ್ರಿನಾ ಕೈಫ್ ತಮ್ಮ ಮಗುವಿನ ಕೈಯನ್ನು ಒಟ್ಟಿಗೆ ಇರಿಸಿ ಫೋಟೊ ತೆಗೆಸಿಕೊಂಡಿದ್ದು ಅದನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆದ ಪೋಸ್ಟ್‌ನಲ್ಲಿ ವಿಶೇಷ ಕ್ಯಾಪ್ಶನ್ ಕೂಡ ಹೈಲೈಟ್ ಆಗಿದೆ‌. ʼʼನಮ್ಮ ಜೀವನದ ಬೆಳಕಿನ ಕಿರಣ ವಿಹಾನ್ ಕೌಶಲ್...ನಮ್ಮ ಪ್ರಾರ್ಥನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಜೀವನ ಸುಂದರವಾಗಿದೆ. ನಮ್ಮ ಜಗತ್ತು ಕ್ಷಣಾರ್ಧದಲ್ಲಿ ಬದಲಾಗುತ್ತದೆ ಎನ್ನಲು ಈ ಸುಮಧುರ ಗಳಿಗೆಯೇ ಸಾಕ್ಷಿ. ಶುಭ ಕೋರಿದ್ದ ಎಲ್ಲರಿಗೂ ಕೃತಜ್ಞತೆಗಳುʼʼ ಎಂದು ಬರೆದಿದ್ದಾರೆ.

ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌

ನಟಿ ಪರಿಣಿತಿ ಚೋಪ್ರಾ ಕಮೆಂಟ್ ಮಾಡಿ ಶುಭ ಕೋರಿದ್ದಾರೆ. ನೆಟ್ಟಿಗರು ಕೂಡ ಪ್ರತಿಕ್ರಿಯಿಸಿದ್ದಾರೆ. ಕೊನೆಗೂ ನಾವು ಕಾಯುತ್ತಿದ್ದ ಗಳಿಗೆ ಬಂದಿದೆ. ವಿಹಾನ್ ಹೆಸರು ತುಂಬಾ ಮುದ್ದಾಗಿದೆ. ವಿಕ್ಕಿ ಕೌಶಲ್‌ನಂತೆ ಮುಂದೆ ಇವನೂ ಸ್ಟಾರ್ ಆಗುವ ಸಾಧ್ಯತೆ ಇದೆ. ಶುಭವಾಗಲಿ ಎಂದು ಒಬ್ಬರು ಬರೆದಿದ್ದಾರೆ.

ಕತ್ರಿನಾ ಮದುವೆಯಾದ ಬಳಿಕ ಸಿನಿಮಾ ರಂಗದಿಂದ ಸ್ವಲ್ಪ ಸ್ವಲ್ಪವೆ ದೂರ ಉಳಿದಿದ್ದಾರೆ. 2024ರಲ್ಲಿ ʼಮೇರಿ ಕ್ರಿಸ್ಮಸ್ʼ ಸಿನಿಮಾದಲ್ಲಿ ಇವರು ಕೊನೆದಾಗಿ ಕಾಣಿಸಿಕೊಂಡಿದ್ದರು. ಬಳಿಕ ಗರ್ಭಿಣಿಯಾಗಿದ್ದ ಕಾರಣಕ್ಕೆ ಸಿನಿಮಾದಿಂದ ದೂರ ಉಳಿಯಬೇಕಾಯ್ತು. ಸದ್ಯ ನಟ ವಿಕ್ಕಿ ಕೌಶಲ್ ತಮ್ಮ ಮುಂದಿನ 'ಲವ್ ಆ್ಯಂಡ್ ವಾರ್ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಇದರಲ್ಲಿ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರ 2026ರ ಮಾರ್ಚ್‌ನಲ್ಲಿ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು ಆದರೆ ಕಾರಣಾಂತರಗಳಿಂದ ಅದನ್ನು ಆಗಸ್ಟ್‌ಗೆ ಮುಂದೂಡಲಾಗಿದೆ ಎಂದು ಚಿತ್ರ ತಂಡ ತಿಳಿಸಿದೆ. ಆದರೆ ಬಿಡುಗಡೆ ದಿನಾಂಕ ಮಾತ್ರ ಇನ್ನೂ ಘೋಷಿಸಿಲ್ಲ.