ನಟಿ ಕಾವ್ಯ ಗೌಡ ಮತ್ತು ಅವರ ಪತಿ ಸೋಮಶೇಖರ್ ಮೇಲೆ ಹಲ್ಲೆ ನಡೆದಿದ್ದು, ಸದ್ಯ ಆಸ್ಪತ್ರೆಯಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಘನಟೆ ಸಂಬಂಧ ಕಾವ್ಯ ಗೌಡ ಅವರ ಸಹೋದರಿ ಭವ್ಯಾ ಗೌಡ ಅವರು ಸೋಮಶೇಖರ್ ಸಹೋದರ ನಂದೀಶ್, ಪ್ರೇಮಾ ಮತ್ತು ರವಿಕುಮಾರ್ ವಿರುದ್ಧ ದೂರು ನೀಡಿದ್ದಾರೆ. ಈ ಮಧ್ಯೆ ಪ್ರೇಮಾ ಅವರು ಕಾವ್ಯ ಗೌಡ ಮತ್ತು ಸೋಮಶೇಖರ್ ಮೇಲೆಯೇ ಹಲವು ಆರೋಪಗಳನ್ನು ಮಾಡಿರುವುದಲ್ಲದೇ, ದೂರನ್ನು ಕೂಡ ನೀಡಿದ್ದಾರೆ.
ಪ್ರೇಮಾ ನೀಡಿದ ಹೇಳಿಕೆ ಏನು?
ರಾಮಮೂರ್ತಿನಗರ ಠಾಣೆ ಬಳಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪ್ರೇಮಾ ಅವರು, "ನಮ್ಮ ಮಾವನ ಮನೆಯಲ್ಲಿ ನಾವೆಲ್ಲಾ ಇದ್ದೇವೆ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋ ಸೋಮಶೇಖರ್ ಅವರದ್ದು. ಆತ ನನ್ನ ತಂಗಿ ಮೇಲೆ ಹಲ್ಲೆ ಮಾಡಿರೋದು. ಮನೆಗಾಗಿ ಕಾವ್ಯ ಗೌಡ ಈ ರೀತಿ ಕಿರಿಕ್ ಮಾಡುತ್ತಿದ್ದಾರೆ. ಇದೆಲ್ಲ ನಮ್ಮ ಮಾವನ ಗಮನಕ್ಕೆ ತಂದಿದ್ದೇವೆ. ಅವರು ಕೂಡ ಬುದ್ಧಿ ಮಾತು ಹೇಳಿ ಕಳುಹಿಸಿದ್ದರು. ನಾನು ಸಂಬಂಧದಲ್ಲೇ ಮದುವೆ ಆಗಿರುವುದು. ಹಾಗಾಗಿ, ಮಾವನ ಮಾತಿಗೆ ನಾನು ತಲೆ ಬಾಗಿದ್ದೇನೆ" ಎಂದು ಪ್ರೇಮಾ ಹೇಳಿದ್ದಾರೆ.
ʻರಾಧಾ ರಮಣʼ ನಟಿ ಕಾವ್ಯ ಗೌಡ ಮೇಲೆ ಗಂಭೀರ ಹಲ್ಲೆ, ಪತಿಗೆ ಇರಿತ! ಪೊಲೀಸ್ FIR ಕಾಪಿಯಲ್ಲಿ ಏನಿದೆ?
ಇದು ನಮ್ಮ ಮನೆ ಹೊರಗೆ ಹೋಗಿ ಎಂದು ಹೇಳಿದ್ದಾರೆ
"ನಾನು ತಾಳ್ಮೆಯಿಂದಲೇ ಇದ್ದೆ. ಆದರೆ ಇವತ್ತು ಲಿಮಿಟ್ ಮೀರಿದೆ. ಮನೆಯ ಕೆಳ ಮಹಡಿಯಲ್ಲಿ ನಮ್ಮ ಮಾವ ವಾಸವಾಗಿದ್ದಾರೆ. ನಾವು ಮೊದಲ ಮಹಡಿಯಲ್ಲಿ ಇದ್ದೇವೆ. ಎರಡನೇ ಮಹಡಿಯಲ್ಲಿ ಕಾವ್ಯ ಗೌಡ ಇದ್ದಾರೆ. ಅವರವರ ಮನೆಯಲ್ಲಿ ಇರಬೇಕು ಎಂದು ಮಾವನವರು ಹೇಳಿದ್ದಾರೆ. ಕಾವ್ಯ ಗೌಡ ಮನೆಯ ಅಡುಗೆ ಸಹಾಯಕಿ ನಮ್ಮ ಕಿಚನ್‌ಗೆ ಬಂದಿದ್ದರು. ನಾನು, "ಯಾಕಮ್ಮ ಇಲ್ಲಿಗೆ ಬಂದಿದ್ದೀಯಾ" ಎಂದು ಕೇಳಿದ್ದೆ. ಆಗ ಆ ಹುಡುಗಿ ಹಾಗೇ ವಾಪಸ್ ಹೋಗಿದ್ದಳು. ನಂತರ ಕಾವ್ಯ ಬಂದು ಗಲಾಟೆ ಮಾಡಿದ್ದಾಳೆ. ಇದು ನಮ್ಮ ಮನೆ, ಎಲ್ಲರೂ ಹೊರಗೆ ಹೋಗಿ ಎಂದು ಹೇಳಿ ಗಲಾಟೆ ಮಾಡಿದ್ದಾರೆ" ಎಂದು ಪ್ರೇಮಾ ಹೇಳಿದ್ದಾರೆ.
ನನಗೂ ಮನೆ ಮೇಲೆ ಹಕ್ಕು ಇದೆ
"ಆ ಮನೆ ನಮ್ಮ ಮಾವ ಕಟ್ಟಿಸಿದ್ದು. ಅವಳಷ್ಟೇ ಹಕ್ಕು ನನಗೂ ಇದೆ. ಬಾವ ಎಂದು ನೋಡದೆ ನಂದೀಶ್ ಅವರನ್ನ ಟ್ರಿಗರ್ ಮಾಡಿದ್ದಾರೆ. ಸೋಮಶೇಖರ್ ಕೂಡ ಬಂದು ಗಲಾಟೆ ಮಾಡಿದ್ದಾರೆ. ಆ ಮನೆ ನಮ್ಮದು ಅಲ್ಲ. ನಮ್ಮ ಮಾವನ ಮನೆ, ಪ್ರೀತಿಯಿಂದ ನಮ್ಮ ಮನೆ ಎಂದು ಹೇಳಿಕೊಳ್ಳುತ್ತೇವೆ. ನಮ್ಮ ಮನೆ ಗೃಹಪ್ರವೇಶವಾಗಿ ಎರಡೂವರೆ ವರ್ಷ ಆಗಿದೆ. ಮನೆಯಿಂದ ಹೊರಹಾಕಲು ಸಣ್ಣ ವಿಚಾರಕ್ಕೂ ಗಲಾಟೆ ಮಾಡುತ್ತಾಳೆ. ನಾನು ಇಲ್ಲದಿರುವಾಗ ನಮ್ಮ ಮನೆಗೆಲ್ಲಾ ಬಂದು ಬೀಗ ಕದ್ದಿದ್ದಾರೆ. ಮನೆಗೆ ಬಂದು ಫೋಟೋಶೂಟ್ ಮಾಡಿದ್ದಾರೆ. ಕೆಲ ವಸ್ತುಗಳನ್ನು ಕದ್ದಿದ್ದಾರೆ. ನಟಿ ಆಗಿರೋದ್ರಿಂದ ಹೀಗೆ ಹೇಳಿದರೆ ಎಲ್ಲರೂ ನಂಬುತ್ತಾರೆ ಎಂದು ಹೀಗೆಲ್ಲ ಮಾಡುತ್ತಿದ್ದಾಳೆ" ಎಂದು ಪ್ರೇಮಾ ಹೇಳಿದ್ದಾರೆ.
ಮರ್ಯಾದೆಗಾಗಿ ಇಷ್ಟು ದಿನ ಸುಮ್ಮನಿದ್ದೆ
"ನಮ್ಮ ಮೇಲೆ ಹಲ್ಲೆ ಮಾಡಿದ್ದಕ್ಕೆ ಕೇಳಲು ನಮ್ಮ ತಂದೆ ಬಂದಿದ್ದರು. ಅದಕ್ಕೆ ನಮ್ಮ ಅಪ್ಪನ ಮೇಲೆಯೇ ಕೆಟ್ಟ ಆರೋಪ ಮಾಡುತ್ತಿದ್ದಾರೆ. ಪ್ಯಾಂಟ್ ಎಲ್ಲಾ ತೆಗೆದು ಸೋಮಶೇಖರ್ ಅಸಹ್ಯವಾಗಿ ವರ್ತಿಸಿದ್ದಾರೆ. ಕಾವ್ಯ ಸಹೋದರಿ ಭವ್ಯಾ ಗೌಡ ನನ್ನ ಪತಿ ಮೇಲೆ ಹಲ್ಲೆ ಮಾಡಿದ್ದಾಳೆ. ನನ್ನ ತಾಳಿಯನ್ನು ಕಿತ್ತು ಹಾಕಿದ್ದಾರೆ. ತಾಳಿನೇ ಸಿಗಲಿಲ್ಲ. ಕಾವ್ಯ, ಸೋಮಶೇಖರ್, ಭವ್ಯಾ ವಿರುದ್ಧ ನಾನು ದೂರು ನೀಡಿದ್ದೇನೆ. ಎಫ್ಐಆರ್ ದಾಖಲಿಸಿದ್ದೇನೆ. ನಮ್ಮ ಮಾವ ಅವರ ಮರ್ಯಾದೆಗಾಗಿ ಇಷ್ಟು ದಿನ ಸುಮ್ಮನಿದ್ದೆ. ಆದರೆ ಆಕೆ ಆರೋಪ ಮಾಡಿದ್ದರಿಂದ ಮಾತಾಡುವಂತೆ ಆಗಿದೆ. ಸೋಮಶೇಖರ್ ನನ್ನ ತಂದೆಗೆ ಕರೆ ಮಾಡಿ ಅವಾಚ್ಯವಾಗಿ ಬೈದಿದ್ದಾರೆ. ಚಾಕುವಿಂದ ಹಲ್ಲೆ ಮಾಡಿರುವ ಆರೋಪ ಸುಳ್ಳು. ತಾಳ್ಮೆಯಿಂದ ಇದ್ದಿದ್ದಕ್ಕೆ ಹೀಗೆಲ್ಲ ಮಾಡುತ್ತಿದ್ದಾರೆ" ಎಂದು ಪ್ರೇಮಾ ಹೇಳಿದ್ದಾರೆ.