ನಟ ಸಂಜಯ್ ದತ್ ಅವರು ಕೆಜಿಎಫ್ ಸಿನಿಮಾ ನಂತರ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಅದು ಯಾವಮಟ್ಟಕ್ಕೆಂದರೆ, ಒಂದೇ ವಾರದ ಅಂತರದಲ್ಲಿ ಅವರ ಮೂರು ಸಿನಿಮಾಗಳು ತೆರೆಕಾಣುತ್ತಿರುವುದೇ ಅದಕ್ಕೆ ಸಾಕ್ಷಿ. ಹೌದು, ಈ ಒಂದು ವಾರದಲ್ಲಿ ಮೂರು ಬಾರಿ ಚಿತ್ರಮಂದಿರದಲ್ಲಿ ಅವರು ಮಿಂಚಲಿದ್ದಾರೆ.
ಏಪ್ರಿಲ್ 30ರಂದು ಕೆಡಿ ರಿಲೀಸ್
ಸ್ಯಾಂಡಲ್‌ವುಡ್‌ನ ಬಿಗ್ ಬಜೆಟ್ ಸಿನಿಮಾ ʻಕೆಡಿʼಯಲ್ಲಿ ಧಕ್ ದೇವ ಎಂಬ ಪಾತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವು ಏಪ್ರಿಲ್ 30ರಂದು ತೆರೆಕಂಡಿದೆ. ಕೆಜಿಎಫ್ ನಂತರ ಪುನಃ ಕನ್ನಡಕ್ಕೆ ಕೆಡಿ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ ಸಂಜಯ್ ದತ್. ದೇವ ಪಾತ್ರದ ಮೂಲಕ ಅಬ್ಬರಿಸಿದ್ದಾರೆ.
ಮೇ 1ರಂದು ರಾಜಾ ಶಿವಾಜಿಯಲ್ಲಿ ದರ್ಶನ
ಕೆಡಿ ತೆರಕಂಡ ಮಾರನೇ ದಿನ ಅಂದರೆ, ಮೇ 1ರಂದು ʻರಾಜಾ ಶಿವಾಜಿʼ ಸಿನಿಮಾದಲ್ಲಿ ಸಂಜಯ್ ದತ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅಫ್ಜಲ್ ಖಾನ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ʻರಾಜಾ ಶಿವಾಜಿʼ ಸಿನಿಮಾವು ಮರಾಠಿ ಚಿತ್ರವಾಗಿದ್ದು, ಹಿಂದಿಯಲ್ಲೂ ತೆರೆಕಂಡಿದೆ.
ಮೇ 8ಕ್ಕೆ ಮತ್ತೊಂದು ಸಿನಿಮಾ ರಿಲೀಸ್
ಈ ಎರಡು ಸಿನಿಮಾಗಳ ಮೂಲಕ ಬ್ಯಾಕ್ ಟು ಬ್ಯಾಕ್ ದರ್ಶನ ನೀಡಿರುವ ಸಂಜಯ್ ದತ್, ಇದೀಗ ಮೇ 8ರಂದು ಮತ್ತೊಂದು ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಹೌದು, ಮೇ 8ರಂದು ʻಆಖ್ರಿ ಸವಾಲ್ʼ ಎಂಬ ಸಿನಿಮಾದಲ್ಲಿ ಪ್ರೊ.ಗೋಪಾಲ್ ನಾಡಕರ್ಣಿ ಪಾತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಂಡಿದ್ದು, ಒಂದು ವಾರದ ಅಂತರದಲ್ಲಿ ಮೂರನೇ ಬಾರಿಗೆ ಚಿತ್ರಮಂದಿರಗಳಿಗೆ ಕಾಲಿಡಲಿದ್ದಾರೆ.
Sanjay Dutt: ಜೋಡಿ ಕೊಲೆ ಹಂತಕ ನಟ ಸಂಜಯ್ ದತ್ ಕುತ್ತಿಗೆಗೆ ಬ್ಲೇಡ್ ಇಟ್ಟಿದ್ನಂತೆ!
67ನೇ ವಯಸ್ಸಿನಲ್ಲೂ ಸಂಜಯ್ ದತ್ ಹವಾ
ಸಂಜಯ್ ದತ್ ಅವರು ಕೆಲ ವರ್ಷಗಳ ಹಿಂದೆ ಕ್ಯಾನ್ಸರ್ ಕಾಯಿಲೆಯಿಂದ ಚೇತರಿಸಿಕೊಂಡಿದ್ದರು. ಅವರಿಗೆ ಈಗ 67 ವರ್ಷ. ಈ ವಯಸ್ಸಿನಲ್ಲೂ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ʻದಿ ರಾಜಾ ಸಾಬ್ʼ ಸಿನಿಮಾದ ಮೂಲಕ ಅಬ್ಬರಿಸಿದ್ದ ಸಂಜಯ್ ದತ್, ಆನಂತರ ʻಧುರಂಧರ್ 2ʼ ಸಿನಿಮಾದ ಹೊಸ ದಾಖಲೆ ಬರೆದಿದ್ದರು. ಬಹುತೇಕ ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ದೇಶಕರಿಗೆ ಸಂಜಯ್ ದತ್ ನೆಚ್ಚಿನ ನಟರಾಗಿದ್ದಾರೆ.