Sanjay Dutt: ಜೋಡಿ ಕೊಲೆ ಹಂತಕ ನಟ ಸಂಜಯ್ ದತ್ ಕುತ್ತಿಗೆಗೆ ಬ್ಲೇಡ್ ಇಟ್ಟಿದ್ನಂತೆ!
1993ರ ಮುಂಬೈ ಬಾಂಬ್ ಸ್ಫೋಟದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಜೈಲಿನಲ್ಲಿದ್ದಾಗ ನಡೆದ ಒಂದು ಭಯಾನಕ ಘಟನೆಯನ್ನು ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋನಲ್ಲಿ ಹಂಚಿಕೊಂಡಿದ್ದಾರೆ. ಎರಡು ಕೊಲೆಗಳನ್ನು ಮಾಡಿದ್ದ ಅಪರಾಧಿಯೊಬ್ಬ ತನ್ನ ಕುತ್ತಿಗೆಗೆ ಬ್ಲೇಡ್ ಹಿಡಿದಿದ್ದ ಎಂದು ನಟ ನೆನಪಿಸಿಕೊಂಡಿದ್ದಾರೆ.

-

ಮುಂಬೈ: ಜೈಲಿನಲ್ಲಿದ್ದಾಗ ಎರಡು ಕೊಲೆ ಮಾಡಿದ ಆರೋಪಿಯೊಬ್ಬ ತನ್ನ ಕುತ್ತಿಗೆಗೆ ಬ್ಲೇಡ್ ಹಿಡಿದಿದ್ದ ಎಂದು ಬಾಲಿವುಡ್ ನಟ (bollywood actor) ಸಂಜಯ್ ದತ್ (Sanjay Dutt) ಹೇಳಿದ್ದಾರೆ. ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋನಲ್ಲಿ (The Great Indian Kapil Sharma Show) ಸಂಜಯ್ ದತ್ ಅವರು ತಮ್ಮ ಜೈಲಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. 1993ರ ಮುಂಬೈ ಬಾಂಬ್ ಸ್ಫೋಟದಲ್ಲಿ (1993 Mumbai bombings) ತನಗೆ ಆಗಿರುವ ಶಿಕ್ಷೆಯ ಅನುಭವಗಳ ಬಗ್ಗೆ ಅವರು ಹಂಚಿಕೊಂಡಿದ್ದಾರೆ. ಸಂಜಯ್ ದತ್ ತನ್ನ ಆಪ್ತ ಸ್ನೇಹಿತ ಸುನೀಲ್ ಶೆಟ್ಟಿ (Suniel Shetty) ಜೊತೆ ಕಪಿಲ್ ಶರ್ಮಾ ಶೋನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು.
ಕಪಿಲ್ ಶರ್ಮಾ ಶೋನಲ್ಲಿ ಸಂಜಯ್ ದತ್ ಅವರು 1993ರ ಮುಂಬೈ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಐದು ವರ್ಷಗಳ ಜೈಲು ಶಿಕ್ಷೆಯ ಬಗ್ಗೆ ಮಾತನಾಡಿ, ಜೀವನದ ಒಂದು ಭಯಾನಕ ಅನುಭವವನ್ನು ಹಂಚಿಕೊಂಡರು. ತಮ್ಮ ಗಡ್ಡ ಉದ್ದವಾಗಿ ಬೆಳೆದಿತ್ತು. ಜೈಲು ಅಧಿಕಾರಿಗಳು ಎರಡು ಕೊಲೆ ಮಾಡಿರುವ ಅಪರಾಧಿಯಿಂದ ಅದನ್ನು ತೆಗೆಸಲು ಕಳುಹಿಸಿದರು. ಮುಂದೆ ನಡೆದಿದ್ದು ಭಯಾನಕ ಎಂದು ಅವರು ಹೇಳಿದರು.
ಒಂದು ದಿನ ಜೈಲು ಸೂಪರಿಂಟೆಂಡೆಂಟ್ ತಮ್ಮ ಬೆಳೆದ ಗಡ್ಡವನ್ನು ನೋಡಿ ಮಿಶ್ರಾ ಎಂಬ ಕೈದಿಯನ್ನು ಗಡ್ಡ ತೆಗೆಯಲು ಕಳುಹಿಸಿದರು. ಅವನ ಬಗೆಗಿನ ಕುತೂಹಲದಿಂದ ಸಂಜಯ್ ನೀವು ಎಷ್ಟು ಸಮಯದಿಂದ ಜೈಲಿನಲ್ಲಿದ್ದೀರಿ ಎಂದು ಕೇಳಿದರು. ಅದಕ್ಕೆ ಮಿಶ್ರಾ 15 ವರ್ಷಗಳಾಗಿವೆ ಎಂದು ಉತ್ತರಿಸಿದರು.
ಆಗ ಆತ ಕೈಯಲ್ಲಿ ಹಿಡಿದಿದ್ದ ಬ್ಲೆಡ್ ತನ್ನ ಕುತ್ತಿಗೆಯ ಸಮೀಪದಲ್ಲಿತ್ತು. ಯಾಕಾಗಿ ಜೈಲು ಸೇರಬೇಕಾಯಿತು ಎಂದು ಕೇಳಿದೆ. ಅವನು 'ಡಬಲ್ ಮರ್ಡರ್' ಎಂದಾಗ ತಕ್ಷಣ ನಾನು ಅವನ ಕೈಹಿಡಿದು ನಿಲ್ಲಿಸಿದೆ. ಆ ಕ್ಷಣ ತುಂಬಾ ಭಯವಾಗಿತ್ತು ಎಂದು ಹೇಳಿದರು. ಕಾರ್ಯಕ್ರಮವೊಂದರಲ್ಲಿ ನೋವಿನ ವಿಚಾರವನ್ನು ಹಂಚಿಕೊಂಡ ಸಂಜಯ್ ದತ್, ತಮ್ಮ ಹೆತ್ತವರಾದ ಸುನಿಲ್ ದತ್ ಮತ್ತು ನರ್ಗಿಸ್ ದತ್ ಅವರನ್ನು ಕಳೆದುಕೊಂಡದ್ದನ್ನು ಹೊರತುಪಡಿಸಿ ತಮ್ಮ ಜೀವನದ ಘಟನೆಗಳ ಬಗ್ಗೆ ತನಗೆ ಯಾವುದೇ ವಿಷಾದವಿಲ್ಲ ಎಂದು ಹೇಳಿದರು.
ತಮ್ಮ ಪೋಷಕರನ್ನು ಹೆಚ್ಚಾಗಿ ಮಿಸ್ ಮಾಡಿಕೊಳ್ಳುತ್ತೇನೆ ಎಂದ ಸಂಜಯ್ ಅವರ ತಂದೆ ಸುನಿಲ್ ದತ್ 2005ರಲ್ಲಿ ತಮ್ಮ 75ನೇ ವಯಸ್ಸಿನಲ್ಲಿ ಬಾಂದ್ರಾದಲ್ಲಿ ನಿದ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರ ತಾಯಿ ನರ್ಗಿಸ್ 1981ರಲ್ಲಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ನಿಂದ ನಿಧನರಾದರು.
ಇದನ್ನೂ ಓದಿ: Prince Harry: ಯುಕೆಯಲ್ಲಿ ಪ್ರಿನ್ಸ್ ಹ್ಯಾರಿ-ತಂದೆ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾಗುವರೇ?
1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ನಟ ಸಂಜಯ್ ದತ್ ಅವರನ್ನು ದೋಷಿ ಎಂದು ತೀರ್ಮಾನಿಸಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. 1993ರ ಮುಂಬೈ ಸ್ಫೋಟದಲ್ಲಿ 257 ಮಂದಿ ಸಾವನ್ನಪ್ಪಿದ್ದು, 713 ಮಂದಿ ಗಾಯಗೊಂಡಿದ್ದರು. 2013ರ ಮೇ ತಿಂಗಳಲ್ಲಿ ಅವರನ್ನು ಯೆರ್ವಾಡಾ ಜೈಲಿಗೆ ಕಳುಹಿಸಲಾಗಿದ್ದು, ಅವರ ಉತ್ತಮ ನಡವಳಿಕೆಯಿಂದಾಗಿ 144 ದಿನಗಳ ಶಿಕ್ಷೆಯಲ್ಲಿ ವಿನಾಯಿತಿ ನೀಡಲಾಯಿತು. ಟೈಗರ್ ಶ್ರಾಫ್, ಹರ್ನಾಜ್ ಕೌರ್ ಸಂಧು ಮತ್ತು ಸೋನಮ್ ಬಜ್ವಾ ಅಭಿನಯಿಸಿರುವ ಬಾಘಿ 4ನಲ್ಲಿ ಸಂಜಯ್ ದತ್ ಇತ್ತೀಚೆಗೆ ಕಾಣಿಸಿಕೊಂಡಿದ್ದರು.