ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻನಮ್ಮ ಖಾಸಗಿತನವನ್ನು ಗೌರವಿಸಿ, ನಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿʼ; ಡಿವೋರ್ಸ್‌ ಬಗ್ಗೆ ಕೊನೆಗೂ ಮೌನಮುರಿದ ಮೌನಿ ರಾಯ್!‌

'ಕೆಜಿಎಫ್' ಚಿತ್ರದ ಮೂಲಕ ಕನ್ನಡಿಗರಿಗೂ ಪರಿಚಿತರಾದ ಬಾಲಿವುಡ್ ನಟಿ ಮೌನಿ ರಾಯ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದರ ಬಗ್ಗೆ ಸುದ್ದಿಯಾಗಿತ್ತು. ಇದೀಗ ಅವರು ಪತಿ ಸೂರಜ್ ನಂಬಿಯಾರ್ ಅವರಿಂದ ವಿಚ್ಛೇದನ ಪಡೆಯುತ್ತಿರುವುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಜೊತೆಗೆ ಮಾಧ್ಯಮಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಕೆಜಿಎಫ್‌ ಸಿನಿಮಾ ಖ್ಯಾತಿಯ ಬಾಲಿವುಡ್ ನಟಿ ಮೌನಿ ರಾಯ್‌ ಹಾಗೂ ಉದ್ಯಮಿ ಸೂರಜ್ ನಂಬಿಯಾರ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ಇಬ್ಬರು ಬೇರೆಯಾಗುತ್ತಿದ್ದಾರೆ ಎಂಬ ವದಂತಿಗಳು ಈಚೆಗೆ ಸದ್ದು ಮಾಡುತ್ತಿವೆ. ಈಗಾಗಲೇ ಈ ಜೋಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದು, ಈ ಸುದ್ದಿಯ ಇನ್ನಷ್ಟು ಪುಷ್ಠಿ ಒದಗಿಸಿದ್ದವು. ಇದೀಗ ಸ್ವತಃ ಮೌನಿ ರಾಯ್‌ ವಿಚ್ಛೇದನ ಸುದ್ದಿಯನ್ನು ಕನ್ಫರ್ಮ್‌ ಮಾಡಿದ್ದು, ಜೊತೆಗೆ ಒಂದು ವಿಶೇಷ ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ. ಅದೇನು? ಮುಂದೆ ಓದಿ.

ನಾವು ಬೇರ್ಪಡಲು ನಿರ್ಧರಿಸಿದ್ದೇವೆ

"ಕೆಲವು ಮಾಧ್ಯಮಗಳು ನಮ್ಮ ವೈಯಕ್ತಿಕ ಜೀವನದ ಬಗ್ಗೆ ಅನಗತ್ಯವಾಗಿ ಮತ್ತು ಅತಿಕ್ರಮಣಕಾರಿಯಾಗಿ ನೀಡುತ್ತಿರುವ ಗಮನವನ್ನು ಕಂಡು ನಮಗೆ ಬೇಸರವಾಗಿದೆ. ನಾವು ಪರಸ್ಪರ ಬೇರ್ಪಡಲು ನಿರ್ಧರಿಸಿದ್ದೇವೆ ಎಂದು ತಿಳಿಸಲು ಬಯಸುತ್ತೇವೆ. ಈ ವಿಚಾರಗಳನ್ನು ಖಾಸಗಿಯಾಗಿ ಮತ್ತು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ನಮಗೆ ಅಗತ್ಯವಿರುವ ಸಮಯವನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ" ಎಂದು ಮೌನಿ ರಾಯ್‌ ತಿಳಿಸಿದ್ದಾರೆ.

Mouni Roy: ಮೌನಿ ರಾಯ್‌ಗೆ ವೃದ್ಧರಿಂದ ಕಿರುಕುಳ; ಬೇಸರ ಹೊರಹಾಕಿದ ನಟಿ

ವೈಯಕ್ತಿಕ ಜೀವನದ ವೈಭವೀಕರಣ

"ನಮ್ಮ ಸಂಬಂಧದ ವಾಸ್ತವಕ್ಕೆ ಸಂಬಂಧವಿಲ್ಲದ ಕಾಲ್ಪನಿಕ ಕಥೆಗಳು ಮತ್ತು ಹಸಿ ಸುಳ್ಳುಗಳನ್ನು ಹರಡುವ ಮೂಲಕ ನಮ್ಮ ವೈಯಕ್ತಿಕ ಜೀವನವನ್ನು ವೈಭವೀಕರಿಸುವ ಪ್ರಯತ್ನಗಳು ನಡೆದಿವೆ. ಬದಲಾಗುತ್ತಿರುವ ವೈಯಕ್ತಿಕ ಆದ್ಯತೆಗಳ ಬಗ್ಗೆ ಆಳವಾಗಿ ಆಲೋಚಿಸಿದ ನಂತರವೇ ಪರಸ್ಪರ ಗೌರವ ಮತ್ತು ತಿಳುವಳಿಕೆಯೊಂದಿಗೆ ನಾವು ಬೇರ್ಪಡಲು ಪರಸ್ಪರ ಒಪ್ಪಿಗೆಯಿಂದ ನಿರ್ಧರಿಸಿದ್ದೇವೆ" ಎಂದು ಮೌನಿ ರಾಯ್‌ ಮತ್ತು ಅವರ ಮಾಜಿ ಪತಿ ಸೂರಜ್ ತಿಳಿಸಿದ್ದಾರೆ.‌

Mouni Roy: ಗೋಲ್ಡನ್‌ ಕಲರ್‌ ಸೀರೆಯಲ್ಲಿ ಮಿಂಚಿದ ಬೆಂಗಾಲಿ ಬೆಡಗಿ ಮೌನಿ ರಾಯ್‌; ಫೋಟೋಸ್‌ ನೋಡಿ

ನಮ್ಮ ಸ್ನೇಹವನ್ನು ಗೌರವಿಸಲು ಪ್ರಯತ್ನಿಸುತ್ತೇವೆ

"ಈ ಹಂತದಲ್ಲಿ, ನಾವು ಈ ಪರಿಸ್ಥಿತಿಯನ್ನು ವಿವೇಕಯುತವಾಗಿ ಮತ್ತು ಖಾಸಗಿಯಾಗಿ ನಿಭಾಯಿಸುವತ್ತ ಗಮನಹರಿಸಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಸ್ನೇಹವನ್ನು ಗೌರವಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ತಿಳುವಳಿಕೆ, ನಮ್ಮ ಖಾಸಗಿತನಕ್ಕೆ ನೀವು ನೀಡುವ ಗೌರವ ಮತ್ತು ಈ ಸಮಯದಲ್ಲಿ ನಮಗೆ ನೀಡುತ್ತಿರುವ ನಿರಂತರ ಬೆಂಬಲವನ್ನು ನಾವು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇವೆ" ಎಂದು ಮೌನಿ ರಾಯ್‌ ತಿಳಿಸಿದ್ದಾರೆ. ಈ ಪೋಸ್ಟ್‌ ಅನ್ನು ಅವರ ಮಾಜಿ ಪತಿ ಸೂರಜ್‌ ನಂಬಿಯಾರ್‌ ಕೂಡ ಹಂಚಿಕೊಂಡಿದ್ದಾರೆ.

ನಟಿ ಮೌನಿ ರಾಯ್‌ ಅವರ ಪೋಸ್ಟ್‌



ಯಾವುದೇ ಸುಳ್ಳು ಸುದ್ದಿಗಳನ್ನ ಹಬ್ಬಿಸಬೇಡಿ

"ದಯವಿಟ್ಟು ನಮ್ಮ ಖಾಸಗಿತನ ಮತ್ತು ಗೌರವವನ್ನು ನೀಡಬೇಕೆಂದು ಹಾಗೂ ನನ್ನ ಅಥವಾ ಸೂರಜ್ ಬಗ್ಗೆ ಯಾವುದೇ ಸುಳ್ಳು ಸುದ್ದಿಗಳನ್ನ ಹಬ್ಬಿಸಬಾರದೆಂದು ಎಲ್ಲರಲ್ಲೂ ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇನೆ. ಈ ಕಷ್ಟದ ಸಮಯದಲ್ಲಿ ನೀವೆಲ್ಲರೂ ನಮಗೆ ಖಾಸಗಿತನವನ್ನು ನೀಡುತ್ತೀರಿ ಎಂದು ಭಾವಿಸುತ್ತೇನೆ. ದಯವಿಟ್ಟು ಇದನ್ನು ನಿಲ್ಲಿಸಿ ಎಂದು ಎಲ್ಲಾ ಮಾಧ್ಯಮ ಸಂಸ್ಥೆಗಳಲ್ಲಿ ವಿನಮ್ರ ವಿನಂತಿ ಮಾಡಿಕೊಳ್ಳುತ್ತಿದ್ದೇನೆ" ಎಂದು ಮೌನಿ ರಾಯ್‌ ಮನವಿ ಮಾಡಿಕೊಂಡಿದ್ದಾರೆ.