ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiara Advani: ಪೋಷಕರಾದ ಮೇಲೆ ಮೊದಲ ದೀಪಾವಳಿ; ಹೇಗಿತ್ತು ಸಿದ್ದ್‌- ಕಿಯಾರಾ ಸೆಲೆಬ್ರೇಷನ್‌

ಬಾಲಿವುಡ್ ಕ್ಯೂಟ್ ಪೇರ್ ನಲ್ಲಿ ಒಂದಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮೆಲ್ಹೋತ್ರಾ ಅವರು ದೀಪಾವಳಿ ಹಬ್ಬವನ್ನು ಸಲಬ್ರೇಟ್ ಮಾಡಿದ್ದಾರೆ. ಈ ದಂಪತಿಗೆ ಮಗು ಜನಿಸಿದ ಬಳಿಕ ಇದು ಮೊದಲ ದೀಪಾವಳಿಯಾಗಿದ್ದು ಇಬ್ಬರು ಜೊತೆಯಲ್ಲಿ ಸೇರಿ ಹಬ್ಬವನ್ನು ಸಲಬ್ರೇಟ್ ಮಾಡಿಕೊಂಡ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇಬ್ಬರು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಬಾಲಿವುಡ್ ನಟಿ ಕಿಯಾರಾ, ನಟ ಸಿದ್ಧಾರ್ಥ್ ಮನೆಯಲ್ಲಿ ದೀಪಾವಳಿ ಸಂಭ್ರಮ!

Kiara Advani and Sidharth Malhotra -

Profile Pushpa Kumari Oct 21, 2025 1:16 PM

ನವದೆಹಲಿ: ಬಾಲಿವುಡ್ ನ ಅನೇಕ ಸೆಲೆಬ್ರಿಟಿಗಳು ದೀಪಾವಳಿ ಹಬ್ಬವನ್ನು ತುಂಬಾ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಆಲಿಯಾ ಭಟ್ (Alia Bhatt), ಕರಿನಾ ಕಪೂರ್ (Kareena Kapoor Khan) ಸೇರಿದಂತೆ ಪೂರ್ ಕುಟುಂಬವು ದೀಪಾವಳಿ ಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿ ಸಿದ್ದು ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಇದೀಗ ಅದರ ಬೆನ್ನಲ್ಲೆ ಬಾಲಿವುಡ್ ಕ್ಯೂಟ್ ಪೇರ್ ನಲ್ಲಿ ಒಂದಾದ ಕಿಯಾರಾ ಅಡ್ವಾಣಿ (Kiara Advani) ಮತ್ತು ಸಿದ್ಧಾರ್ಥ್ ಮೆಲ್ಹೋತ್ರಾ (Sidharth Malhotra) ಅವರು ದೀಪಾವಳಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಈ ದಂಪತಿಗೆ ಮಗು ಜನಿಸಿದ ಬಳಿಕ ಇದು ಮೊದಲ ದೀಪಾವಳಿಯಾಗಿದ್ದು ಇಬ್ಬರು ಜೊತೆಯಲ್ಲಿ ಸೇರಿ ಹಬ್ಬವನ್ನು ಸೆಲೆಬ್ರೇಟ್ ಮಾಡಿಕೊಂಡ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇಬ್ಬರು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಅಕ್ಟೋಬರ್ 20ರಂದು ನಟಿ ಕಿಯಾರಾ ಹಾಗೂ ಅವರ ಪತಿ ಸಿದ್ಧಾರ್ಥ್ ಅವರು ದೀಪಾವಳಿ ಹಬ್ಬವನ್ನು ಆಚರಿಸಿಕೊಂಡಿದ್ದು ಬಳಿಕ ಈ ಸಂಬಂಧಿತ ವಿಡಿಯೋವನ್ನು ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಶುಭಕೋರಿ ಅದರ ಜೊತೆಗೆ ಹಾರ್ಟ್ ಎಮೋಜಿಗಳನ್ನು ಕೂಡ ಹಾಕಿ ಶೇರ್ ಮಾಡಿದ್ದಾರೆ.

ಸಿದ್ಧಾರ್ಥ್-ಕಿಯಾರ ವಿಡಿಯೋ ಇಲ್ಲಿದೆ

ವೈರಲ್ ಆದ ವೀಡಿಯೊದಲ್ಲಿ ನಟಿ ಕಿಯಾರ ಅವರು ಹಳದಿ ಬಣ್ಣದ ಅನಾರ್ಕಲಿ ಬಟ್ಟೆ ತೊಟ್ಟಿದ್ದು ಅದಕ್ಕೆ ಹೊಂದುವಂತಹ ಮೇಕಪ್ ಹಾಗೂ ಹೇರ್ ಸ್ಟೈಲ್ ಮಾಡಿದ್ದಾರೆ. ಕ್ಲಾಸಿಕ್ ಇಯರಿಂಗ್ ಮತ್ತು ಬಿಂದಿ ಅವರಿಗೆ ಟ್ರೆಡಿಶನಲ್ ಲುಕ್ ನೀಡಿದೆ. ಅಂತೆಯೇ ಸಿದ್ಧಾರ್ಥ್ ಕೂಡ ಹಳದಿ ಬಣ್ಣದ ಶೆರ್ವಾನಿ ವಿನ್ಯಾಸ ಬಟ್ಟೆ ತೊಟ್ಟು ಸ್ಟೈಲಿಶ್ ಆಗಿ ಕಂಡಿದ್ದಾರೆ. ಈ ವಿಡಿಯೋ ಹೆಚ್ಚು ಎಫೆಕ್ಟಿವ್ ಆಗಲು 'ಹ್ಯಾಪಿ ದೀಪಾವಳಿ' ಹಾಡನ್ನು ಬ್ಯಾಕ್ ಗ್ರೌಂಡ್ ಪ್ಲೇ ಎಡಿಟ್ ಮಾಡಲಾಗಿದೆ. ಸದ್ಯ ಈ ವಿಡಿಯೋಗೆ ಅಭಿಮಾನಿಗಳು ಮನಸೋತಿದ್ದಾರೆ.

ಇದನ್ನು ಓದಿ:Kannada New Movie: ವಿಭಿನ್ನ ಶೀರ್ಷಿಕೆಯ ‘4.30 - 6 ಮುಹೂರ್ತ. ನಾಲ್ವರು ಕಾಣಿಸುತ್ತಿಲ್ಲ’ ಚಿತ್ರಕ್ಕೆ ಮುಹೂರ್ತ

ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಾನಾ ತರನಾಗಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಿಯಾರಾ ಅವರು ಮಗುವಾದ ಬಳಿಕವು ಎಷ್ಟು ಸ್ಲಿಂ ಆಗಿ ಕಾಣುತ್ತಿದ್ದಾರೆ... ಯಂಗ್ ಮಮ್ಮಿ ಕಿಯಾರಾ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಹಾಕಿದ್ದಾರೆ. ಹಳದಿ ಬಣ್ಣದಲ್ಲಿ ಇಬ್ಬರು ತುಂಬಾ ಕ್ಯೂಟ್ ಆಗಿ ಕಾಣುತ್ತಿದ್ದು ನಿಮ್ಮ ಪ್ರಿನ್ಸೆಸ್ ಎಲ್ಲಿದ್ದಾರೆ? ಮಗುವನ್ನು ಕೂಡ ತೋರಿಸ ಬಹುದಿತ್ತು ಎಂದು ಮತ್ತೊಬ್ಬ ಬಳಕೆದಾರನು ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಈ ದಂಪತಿ 2021 ರಲ್ಲಿ ತೆರೆಕಂಡ ಶೇರ್ಷಾ ಸಿನಿಮಾದಲ್ಲಿ ಇಬ್ಬರು ಒಟ್ಟಾಗಿ ನಟಿಸಿದ್ದರು. ಆಗಲೆ ಅವರ ನಡುವೆ ಸ್ನೇಹ ಸಂಬಂಧ ಇತ್ತು. ಬಳಿಕ ಪ್ರೀತಿಯಾಗಿ ಇಬ್ಬರು 2023 ರಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ವಿವಾಹವಾದರು. 2025ರ ಜುಲೈ 15 ರಂದು ಸಿದ್ಧಾರ್ಥ್ ಮತ್ತು ಕಿಯಾರಾ ದಂಪ ತಿಗೆ ಹೆಣ್ಣು ಮಗು ಜನಿಸಿದ್ದು ಆ ಬಗ್ಗೆ ಅವರು ವಿಶೇಷ ಪೋಸ್ಟ್ ಒಂದನ್ನು ಸಹ ಹಂಚಿ ಕೊಂಡಿ ದ್ದರು. ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾವಾದ ವಾರ್ 2 ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಇದೇ ಸಿನಿಮಾದಲ್ಲಿ ನಟ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿ ಆರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿತ್ತು.

ಇನ್ನು ನಟ ಸಿದ್ಧಾರ್ಥ್ ಅವರು ತುಷಾರ್ ಜಲೋಟಾ ನಿರ್ದೇಶಿಸಿದ ಮತ್ತು ಮ್ಯಾಡಾಕ್ ಫಿಲ್ಮ್ಸ್ ಅಡಿಯಲ್ಲಿ ದಿನೇಶ್ ವಿಜನ್ ನಿರ್ಮಿಸಿದ ಪರಮ ಸುಂದರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಸಿದ್ಧಾರ್ಥ್ ಜೊತೆಗೆ ಜಾನ್ವಿ ಕಪೂರ್ ನಟಿಸಿದ್ದರು. ಈ ಚಿತ್ರವು ಆಗಸ್ಟ್ 29 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಈ ಸಿನಿಮಾ ಅಂದು ಕೊಂಡ ಮಟ್ಟಕ್ಕೆ ದೊಡ್ಡ ಯಶಸ್ಸು ಪಡೆಯಲಿಲ್ಲ.