ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kichcha Sudeep: ಕರ್ನಾಟಕಕ್ಕೆ ಅವಮಾನ ಮಾಡಿದ ಸ್ಥಳದಲ್ಲೇ ಕನ್ನಡ ಧ್ವಜ ಹಾರಿಸಿದ ಕಿಚ್ಚ ಸುದೀಪ್!

ಕಿಚ್ಚನಿಗೆ ಕನ್ನಡದ ಮೇಲೆ ಹೆಚ್ಚು ಅಭಿಮಾನವಿದ್ದು ಕನ್ನಡ ಪರ ಹೋರಾಟವನ್ನು ಮಾಡುತ್ತಲೇ ಬಂದಿದ್ದಾರೆ. ಕನ್ನಡ ನಾಡಿಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಅವಮಾನ ಆದರೂ ಸಹೀಸದ ಕಿಚ್ಚ ಕನ್ನಡವನ್ನು ‘ಕನ್ನಡ್’ ಎಂದು ಬಳಕೆ ಮಾಡಿದಾಗ ಪರಭಾಷಿಕರನ್ನು ತಿದ್ದಿದ್ದರು.ಈಗ ಕನ್ನಡ ಬಾವುಟಕ್ಕೆ ಅವಮಾನ ಆದ ಜಾಗದಲ್ಲೇ ಕಿಚ್ಚ ಬಾವುಟ ಹಾರಿಸುವ ಮೂಲಕ‌ ಹೆಗ್ಗಳಿಕೆಗೆ ಪಾತ್ರ ರಾಗಿದ್ದಾರೆ.

ಕಿಚ್ಚ ಸುದೀಪ್

ಬೆಂಗಳೂರು,ಜ.26: ಕನ್ನಡದ ಖ್ಯಾತ ನಟರಲ್ಲಿ ಕಿಚ್ಚ ಸುದೀಪ್ (kiccha Sudeep) ಕೂಡ ಒಬ್ಬರಾಗಿದ್ದಾರೆ. ತಾಯವ್ವ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಕಿಚ್ಚ ಸುದೀಪ್ 2001 ರಲ್ಲಿ ಬಿಡುಗಡೆಯಾದ ಹುಚ್ಚ ಚಿತ್ರದಿಂದ ನಾಯಕನಾಗಿ ಮೊದಲ ಯಶಸ್ಸನ್ನು ಕಂಡರು. ಸದ್ಯ ಹಲವು ಭಾಷೆಗಳಲ್ಲಿ ಸಿನಿಮಾ ಮಾಡುವ ಮೂಲಕ ಹಿಟ್ ಹೀರೋ ಆಗಿ ಖ್ಯಾತಿ ಗಳಿಸಿದ್ದಾರೆ. ಅದರಲ್ಲೂ ಕಿಚ್ಚನಿಗೆ ಕನ್ನಡದ ಮೇಲೆ ಹೆಚ್ಚು ಅಭಿಮಾನವಿದ್ದು ಕನ್ನಡ ಪರ ಹೋರಾಟವನ್ನು ಮಾಡುತ್ತಲೇ ಬಂದಿದ್ದಾರೆ. ಕನ್ನಡ ನಾಡಿಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಅವಮಾನ ಆದರೂ ಸಹೀಸದ ಕಿಚ್ಚ ಕನ್ನಡವನ್ನು ‘ಕನ್ನಡ್’ ಎಂದು ಬಳಕೆ ಮಾಡಿದಾಗ ಪರಭಾಷಿಕರನ್ನು ತಿದ್ದಿದ್ದರು. ಈಗ ಕನ್ನಡ ಬಾವುಟಕ್ಕೆ ಅವಮಾನ ಆದ ಜಾಗದಲ್ಲೇ ಕಿಚ್ಚ ಬಾವುಟ ಹಾರಿಸುವ ಮೂಲಕ‌ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Kiccha Sudeep: 4 ದಿನಗಳಲ್ಲಿ ʻಮಾರ್ಕ್‌ʼ ಬಾಚಿಕೊಂಡ ಹಣವೆಷ್ಟು? ಚಿತ್ರತಂಡದಿಂದಲೇ ಬಂತು ನೋಡಿ ಅಧಿಕೃತ ಮಾಹಿತಿ

ಕನ್ನಡ ಭಾಷೆಯನ್ನು ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಆರೋಪದ ನಡುವೆಯೂ ಒಂದಷ್ಟು ಜನರು ಕನ್ನಡ ಪರ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಗೂಗಲ್​ನಲ್ಲಿ ಕನ್ನಡ ಭಾಷೆಗೆ ಅವಮಾನವಾದಗಲೂ ಅನೇಕ ಸೆಲೆಬ್ರಿಟಿಗಳು ಕೂಡ ಈ ಬೆಳವಣಿಗೆ ಬಗ್ಗೆ ಸಿಡಿದೆದ್ದಿದ್ದರು. ಇತ್ತೀಚೆಗೆ ಶಬರಿಮಲೆಗೆ ಹೋಗುವ ತಮಿಳುನಾಡಿನ ಈರೋಡ್ ಬಳಿ ಕರ್ನಾಟಕದ ಮಾಲಾಧಾರಿಗಳಿಗೆ ಸಮಸ್ಯೆ ಮಾಡಲಾಗಿತ್ತು. ಕರ್ನಾಟಕದ ಬಾವುಟ ಹೊಂದಿರುವ ವಾಹನಗಳನ್ನು ಅಡ್ಡಗಟ್ಟಿ ತೆರವು ಗೊಳಿಸಲಾಗಿತ್ತು.

ಈ ರೀತಿಯ ಅವಹೇಳನಕಾರಿ ಘಟನೆಗಳು ಪದೇ ಪದೆಯಾಗಿ ನಡೆಯುತ್ತಿದೆ. ತಮಿಳಿನಾಡಿನಲ್ಲಿ ಕರ್ನಾಟಕದ ಧ್ವಜದ ಬಗ್ಗೆ ಅನೇಕರು ಖಂಡಿಸಿದ್ದರು. ಇದೀಗ ಅವಮಾನ ಆದ ಸ್ಥಳದಲ್ಲೇ ಅಭಿನಯ ಚಕ್ರವರ್ತಿ ಕಿಚ್ಚ ಬಾಸ್ ಕರ್ನಾಟಕ ಧ್ವಜವನ್ನು ಎತ್ತಿ ಹಿಡಿಯುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜನವರಿ 25ರಂದು ಕರ್ನಾಟಕ ಬುಲ್ಡೋಜರ್ಸ್ ಮತ್ತು ಭೋಜ್​​ಪುರಿ ದಬಾಂಗ್ ಮ್ಯಾಚ್ ತಮಿಳುನಾಡಿನ ಕೊಯಿಮತ್ತೂರಿನಲ್ಲಿ ನಡೆದಿದ್ದು ಮ್ಯಾಚ್ ಮುಗಿದ ಬಳಿಕ ಸುದೀಪ್ ಕರ್ನಾಟಕದ ಬಾವುಟ ಹಾರಿಸಿದ್ದಾರೆ.