ʻಬಿಗ್ ಬಾಸ್ʼ ಮನೆಯಲ್ಲಿ ಗಿಲ್ಲಿ ನಟ ಮಾಡುವ ಕಾಮಿಡಿ ಒಮ್ಮೊಮ್ಮೆ ಸ್ಪರ್ಧಿಗಳನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತದೆ. ವೀಕೆಂಡ್‌ನಲ್ಲಿ ʻಕಿಚ್ಚʼ ಸುದೀಪ್ ಕೂಡ ಸಖತ್ ಆಗಿ ಎಂಜಾಯ್ ಮಾಡುತ್ತಾರೆ. ಇದೀಗ ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಸಂಚಿಕೆಯಲ್ಲಿ ಅದು ಪುನಃ ರಿಪೀಟ್ ಆಗಿದೆ. ಗಿಲ್ಲಿ ನಟನ ಕಾಮಿಡಿಗೆ ಸುದೀಪ್ ಸಖತ್ ನಗಾಡಿದ್ದಾರೆ. ಅಂದಹಾಗೆ, ಈ ಕಾಮಿಡಿ ನಡೆಯಲೇಬೇಕು ಎಂದು ಎರಡ್ಮೂರು ದಿನಗಳ ಹಿಂದೆ ವೀಕ್ಷಕರು ಆಶಿಸಿದ್ದರು. ಅಷ್ಟಕ್ಕೂ ಏನಿದು ಕಾಮಿಡಿ?
ಅಶ್ವಿನಿ ಗೌಡ ರೀತಿ ಮಾತನಾಡಿದ್ದ ಗಿಲ್ಲಿ
ಈ ವಾರದಲ್ಲಿ ಒಮ್ಮೆ ಅಶ್ವಿನಿ ಗೌಡ ಅವರು ವೀಕೆಂಡ್‌ನಲ್ಲಿ ಸುದೀಪ್ ಎದುರು ಯಾವ ರೀತಿ ಮಾತನಾಡುತ್ತಾರೆ ಎಂಬುದುನ್ನು ರಘು ಮತ್ತು ರಿಷಾ ಎದುರು ಮಾಡಿ ತೋರಿಸಿದ್ದರು. "ಅಶ್ವಿನಿ ಅವ್ರೇ, ನೀವ್ಯಾಕೆ ಮನೆಯಿಂದ ಹೋಗುತ್ತೀನಿ" ಅಂತ ಕೇಳಿದಾಗ ಸುದೀಪ್ ಅವರು ಕೇಳಿದಾಗ, ಅದಕ್ಕೆ ಅಶ್ವಿನಿ ಗೌಡ ಏನು ಹೇಳಬಹುದು ಎಂಬುದನ್ನು ಇಮಿಟೇಟ್ ಮಾಡಿ ತೋರಿಸಿದ್ದ ಗಿಲ್ಲಿ, "ಅಣ್ಣ, ಎಲ್ಲೋ ಒಂದುಕಡೆ, ಮಾತಾಡೋ ಭರದಲ್ಲಿ ಹೇಳಿಬಿಟ್ಟೆ. ನನಗೆ ರಿಗ್ರೆಟ್ ಫೀಲ್ ಆಯ್ತು. ನನಗೆ ಬ್ಯಾಕ್ ಪೇಯ್ನ್ ಇದ್ದಿದ್ದರಿಂದ ಮನೆಯಿಂದ ಆಚೆ ಹೋಗಿ ಸರ್ಜರಿ ಮಾಡಿಸ್ಕೊಂಡು ಬರಬೇಕು ಅಂದುಕೊಂಡಿದ್ದೆ. ಆಮೇಲೆ ನನಗೆ ಅನ್ನಿಸ್ತು, ಹೌದು ನಾನ್ಯಾಕೆ ಮನೆಯಿಂದ ಹೊರಗೆ ಹೋಗಬೇಕು? ನಂದೇನು ತಪ್ಪೇ ಇಲ್ವಲ್ಲ ಅಂತ ಅನ್ನಿಸ್ತು" ಎಂದಿದ್ದರು.
BBK 12: ಅಶ್ವಿನಿ ಗೌಡ-ಜಾನ್ವಿ ಮಧ್ಯೆ ಕಿತ್ತಾಟ: ಬೇರೆ-ಬೇರೆಯಾದ ಜೋಡೆತ್ತುಗಳು
ವೀಕೆಂಡ್‌ನಲ್ಲಿ ರಿಪೀಟ್ ಆಯ್ತು ಗಿಲ್ಲಿ ಮಿಮಿಕ್ರಿ
ಗಿಲ್ಲಿ ಹೇಳಿದ ಈ ಮಾತು ಕೇಳಿ ರಘು ಮತ್ತು ರಿಷಾ ಬಿದ್ದು ಬಿದ್ದು ನಕ್ಕಿದ್ದರು. ವೀಕ್ಷಕರು ಕೂಡ ಇದನ್ನು ಬಹಳ ಎಂಜಾಯ್ ಮಾಡಿದ್ದರು. ಸುದೀಪ್ ಎದುರು ಇದು ಮತ್ತು ರಿಪೀಟ್ ಆಗಬೇಕು, ಅಶ್ವಿನಿ ಗೌಡ ಇದನ್ನು ನೋಡಬೇಕು ಎಂದು ಬಹಳಷ್ಟು ವೀಕ್ಷಕರು ಆಶಿಸಿದ್ದರು. ಸೋಶಿಯಲ್ ಮೀಡಿಯಾದಲ್ಲೂ ಗಿಲ್ಲಿಯ ಈ ಮಿಮಿಕ್ರಿ ವಿಡಿಯೋ ವೈರಲ್ ಆಗಿತ್ತು. ಇದೀಗ ವೀಕ್ಷಕರು ಆಶಿಸಿದಂತೆಯೇ ಬಿಗ್ ಬಾಸ್ ಮನೆಯ ವೀಕೆಂಡ್ ಸಂಚಿಕೆಯಲ್ಲಿ ಇದು ರಿಪೀಟ್ ಆಗಿದೆ. ಯಾವ್ಯಾವ ಸಂದರ್ಭದಲ್ಲಿ ಅಶ್ವಿನಿ ಗೌಡ ಹೇಗೆಲ್ಲಾ ವರ್ತಿಸುತ್ತಾರೆ ಎಂಬುದನ್ನು ಸುದೀಪ್ ಎದುರು ಗಿಲ್ಲಿ ಮಾಡಿ ತೋರಿಸಿದ್ದಾರೆ.
ಅಶ್ವಿನಿ ಥರ ಮಿಮಿಕ್ರಿ ಮಾಡಿದ ಗಿಲ್ಲಿ
ಸುದೀಪ್ ಎದುರು ಏನ್ ಮಾತಾಡ್ತಾರೆ ಅಶ್ವಿನಿ?
ವೀಕೆಂಡ್‌ನಲ್ಲಿ ಸುದೀಪ್ ಅವರ ಎದುರು ಅಶ್ವಿನಿ ಗೌಡ ಹೇಗೆ ಮಾತನಾಡಬಹುದು ಎಂಬುದನ್ನು ತೋರಿಸಿದ ಗಿಲ್ಲಿ ನಟ, "ಅಣ್ಣ, ನಾನು ಹೇಳೋದು ಏನೆಂದರೆ, ಸುಸಂಸ್ಕೃತವಾಗಿ, ಸುಲಲಿತವಾಗಿ ಯೋಚನೆ ಮಾಡಿದಾಗ ನಾನು ಕರೆಕ್ಟ್ ಆಗಿ ಮಾತನಾಡಿದ್ದೀನಿ. ಎಲ್ಲಿ ಎಡವಿದೆ ಎಂಬುದು ಗೊತ್ತಾಗುತ್ತಿಲ್ಲ. ತಪ್ಪು ಸಹಜ, ತಪ್ಪು ತಿದ್ದಿಕೊಂಡು ಮುಂದೆ ಹೋಗೋದು ದೊಡ್ಡದು” ಎಂದಿದ್ದಾರೆ. ಆದರೆ ವಾರದ ದಿನಗಳಲಿ ಅಶ್ವಿನಿ ಮಾತಿನ ವರಸೆ ಬೇರೆಯದೇ ಇರುತ್ತದೆಯಂತೆ. "ರಘು, ಯಾವನೋ ನೀನು? ಲೇಯ್... ನೀನು ಯಾವನೋ? ನನಗಿಂತ ಮೇಲಾ? ಹೋಗಲೋ.." ಅಂತ ಹೇಳ್ತಾರಂತೆ ಅಶ್ವಿನಿ.
BBK 12: ಅಶ್ವಿನಿ ಗೌಡಾಗೆ ಶಾಕ್ ಮೇಲೆ ಶಾಕ್: ರಘು ಆಯ್ತು ಈಗ ರಿಷಾ ಗೌಡ ಸರದಿ
ಗಿಲ್ಲಿ ನಟ ಮಾಡಿದ ಮಿಮಿಕ್ರಿಯನ್ನು ಕಂಡು ಸ್ವತಃ ಅಶ್ವಿನಿ ಗೌಡ ಕೂಡ ಎಂಜಾಯ್ ಮಾಡಿದ್ದಾರೆ.