ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ʻಬಿಗ್‌ ಬಾಸ್‌ ಮನೆಯಲ್ಲಿರುವ ಗಂಡಸರು ಸತ್ತ ಹೆಣದ ಥರ ಇರ್ತಾರೆʼ; ಜಾಹ್ನವಿ ಮಾತಿಗೆ ʻಕಿಚ್ಚʼ ಸುದೀಪ್‌ ಶಾಕ್‌!

BBK 12: 'ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ' ಸಂಚಿಕೆಯಲ್ಲಿ ಜಾಹ್ನವಿ ಅವರು ಬಿಗ್‌ ಬಾಸ್ ಮನೆಯಲ್ಲಿರುವ ಗಂಡು ಮಕ್ಕಳ ಬಗ್ಗೆ ನೀಡಿದ ಹೇಳಿಕೆಗೆ ಕಿಚ್ಚ ಸುದೀಪ್ ಶಾಕ್‌ ಆಗಿದ್ದಾರೆ ಮತ್ತು ಬಿದ್ದು ಬಿದ್ದು ನಕ್ಕಿದ್ದಾರೆ. "ಈ ಮನೆಯಲ್ಲಿ ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು" ಎಂದು ಸುದೀಪ್‌ ಹೇಳಿದ್ದರು. ಅದಕ್ಕೆ ಜಾಹ್ನವಿ ಮಾಡಿದ ಕಾಮೆಂಟ್ ಎಲ್ಲರನ್ನೂ ನಕ್ಕು ನಗಿಸಿದೆ ಮತ್ತು ಅಚ್ಚರಿಯನ್ನು ಉಂಟು ಮಾಡಿದೆ.

ಬಿಗ್‌ ಬಾಸ್‌ ಮನೆಯಲ್ಲಿ ಸದ್ಯ 15 ಮಂದಿ ಇದ್ದಾರೆ. ಅದರಲ್ಲಿ ಮಹಿಳೆಯರದ್ದೇ ಮೇಲುಗೈ ಇದೆಯಾ? ಯಾಕೆಂದರೆ, ಇಂತಹದ್ದೊಂದು ಅನುಮಾನ ಸುದೀಪ್‌ ಅವರಿಗೂ ಕಾಡಿದೆ. ಈ ವಾರದ ಸೂಪರ್‌ ಸಂಡೇ ವಿತ್‌ ಕಿಚ್ಚ ಸುದೀಪ ಸಂಚಿಕೆಯಲ್ಲಿ ಸುದೀಪ್‌ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಜಾಹ್ನವಿ ಕೊಟ್ಟ ಉತ್ತರ ನೋಡಿ ಎಲ್ಲರೂ ಶಾಕ್‌ ಆಗಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಹೆಣ್ಣು ಮಕ್ಕಳೇ ಸ್ಟ್ರಾಂಗ್‌

ಸುದೀಪ್‌ ಅವರು ಬಿಗ್‌ ಬಾಸ್‌ ಮನೆಯಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಸ್ಟ್ರಾಂಗ್‌ ಗುರು ಅಂತ ಒಂದು ಸ್ಟೇಟ್ಮೆಂಟ್‌ ನೀಡಿದ್ದಾರೆ. ಅದಕ್ಕೆ ಬಹುತೇಕ ಮಂದಿ ಯೆಸ್‌ ಎಂದು ಹೇಳಿದ್ದಾರೆ. ಜಾಹ್ನವಿ ಕೂಡ ಯೆಸ್‌ ಎಂದು ಹೇಳಿದ್ದಾರೆ. ಆಗ ಅವರನ್ನು ಮಾತನಾಡಿಸಿದ ಕಿಚ್ಚ ಸುದೀಪ್, "ಯಾವ ರೀತಿ" ಎಂದು ಕೇಳಿದ್ದಾರೆ. ಆಗ ಜಾಹ್ನವಿ ಹೇಳಿದ ಮಾತುಗಳು ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದವು ಮತ್ತು ಅಚ್ಚರಿಯನ್ನು ನೀಡಿದವು.

BBK 12: ಜಾಹ್ನವಿ-ಅಶ್ವಿನಿನ ಹತ್ತಿರ ಮಾಡ್ತಾ ಪತ್ರ? ಅಪ್ಪನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ

ಯಾರು ಮ್ಯಾನ್ಲೀ ಆಗಿಲ್ಲ ಎಂದ ಜಾಹ್ನವಿ!

"ನಿಜ ಸಾರ್..‌ ಈ ಮನೆಯಲ್ಲಿ ಇರುವ ಯಾವ ಹುಡುಗರು ಮ್ಯಾನ್ಲೀ ಎಂದು ಅನ್ನಿಸುವುದಿಲ್ಲ. ಅಂದ್ರೆ ಯಾರೂ ಖಡಕ್‌ ಇಲ್ಲ, ಒಂದು ರೀತಿಯಲ್ಲಿ ಸತ್ತ ಹೆಣ ಥರ ಇರ್ತಾರೆ ಸಾರ್..‌ ಉದಾಹರಣೆಗೆ ಸೂರಜ್‌ ಅವರೇ ತಗೋಳಿ, ಏನೂ ಎನರ್ಜಿನೇ ಇರಲ್ಲ. ಗಿಲ್ಲಿಗೆ ಸೊಂಟನೇ ಇಲ್ಲ" ಎಂದು ಜಾಹ್ನವಿ ಅವರು ಕಾಮೆಂಟ್‌ ಮಾಡಿದ್ದಾರೆ. ಈ ಮಾತುಗಳನ್ನು ಕೇಳಿದ ಸುದೀಪ್‌ ಅವರು ಬಿದ್ದು ಬಿದ್ದು ನಕ್ಕಿದ್ದಾರೆ. ಜೊತೆಗೆ ಶಾಕ್‌ ಕೂಡ ಆಗಿದ್ದಾರೆ. ಸದ್ಯ ರಿಲೀಸ್‌ ಆಗಿರುವ ಪ್ರೋಮೋದಲ್ಲಿ ಇದು ಇದೆ. ಪೂರ್ಣ ಸಂಚಿಕೆಯಲ್ಲಿ ಇನ್ನೆಷ್ಟು ಕಾಮಿಡಿ ಇದೆಯೋ ನೋಡಬೇಕು.

Bigg Boss Kannada 12: ಬಿಗ್‌ ಬಾಸ್‌ ಮನೆಯ ಯಾರ ಜರ್ನಿ ಎಂಡ್‌? ಈ ಸ್ಪರ್ಧಿಯೇ ಔಟ್‌?

ಶನಿವಾರ ಕ್ಲಾಸ್‌ ತೆಗೆದುಕೊಂಡಿದ್ದ ಕಿಚ್ಚ

ಅಂದಹಾಗೆ, ಶನಿವಾರ ನಡೆದ ಕಿಚ್ಚನ ಪಂಚಾಯಿತಿ ಎಪಿಸೋಡ್‌ನಲ್ಲಿ ಜಾಹ್ನವಿ ಅವರಿಗೆ ಸುದೀಪ್‌ ಸಖತ್‌ ಆಗಿಯೇ ಕ್ಲಾಸ್‌ ತೆಗೆದುಕೊಂಡಿದ್ದರು. "ಸ್ಪಂದನಾ ಅವರನ್ನ ಕಲರ್ಸ್ ಚಾನೆಲ್‌ನವರು ಎತ್ತುತ್ತಿದ್ದಾರೆ" ಎಂದು ಜಾಹ್ನವಿ ಹೇಳಿದ್ದರು. ಇದನ್ನು ಕಿಚ್ಚ ಸುದೀಪ್‌ ಅವರು ಪ್ರಶ್ನೆ ಮಾಡಿದ್ದರು. ಆಗಲೂ ಜಾಹ್ನವಿ, "ಫ್ಯಾನ್ ಫಾಲೋವಿಂಗ್ ಮುಖ್ಯವಾಗುತ್ತದೆ ಎಂದು ನಾನು ಹೇಳಿದ್ದೀನಿ. ನನ್ನ ಹೇಳಿಕೆಗೆ ಬದ್ಧವಾಗಿದ್ದೀನಿ. ಅಭಿಮಾನಿಗಳ ವೋಟ್ಸ್ ಸ್ಪಂದನಾಗೆ ಬೀಳುತ್ತವೆ. ಹಾಗೇ ವೋಟ್ಸ್ ಬಂದಾಗ ಚಾನೆಲ್‌ ಕೂಡ ಅಂತಹ ಸ್ಪರ್ಧಿಯನ್ನು ಉಳಿಸಿಕೊಳ್ಳೋಕೆ ಪ್ರಯತ್ನಿಸುತ್ತದೆ ಎಂಬುದು ನನ್ನ ಅಭಿಪ್ರಾಯ" ಎಂದಿದ್ದರು ಜಾಹ್ನವಿ.

ಅದಕ್ಕೆ ಕೌಂಟರ್‌ ಕೊಟ್ಟಿದ್ದ ಕಿಚ್ಚ, "ಜಾಹ್ನವಿ ಅವರೇ ನೀವೇ ತಾನೇ ಚಾನೆಲ್‌ ಹತ್ತಿರ ರಿಕ್ವೆಸ್ಟ್ ಮಾಡಿ.. ಮಾಡಿ.. ಮಾಡಿ ಒಳಗೆ ಹೋಗಿರೋದು. ಹೀಗಿದ್ದಮೇಲೆ ನೀವು ಯಾಕೆ ಒಳಗೆ ಹೋಗಬೇಕಿತ್ತು" ಎಂದು ಪ್ರಶ್ನೆ ಮಾಡಿದ್ದರು.