ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Kiccha Sudeep: ಸುದೀಪ್ ಸಿನಿ ಜರ್ನಿಗೆ 29 ವರ್ಷ! ಅಭಿಮಾನಿಗಳ ಸ್ಪೂರ್ತಿನೇ ನನಗೆ ಶಕ್ತಿ ಎಂದ್ರು ಕಿಚ್ಚ!

ನಟ ಸುದೀಪ್ ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಅಭಿಮಾನಿಗಳ ಹೃದಯದಲ್ಲಿ ಮತ್ತಷ್ಟು ಹತ್ತಿರವಾಗಿ ಖಾಯಂ ಜಾಗ ಮಾಡಿಕೊಂಡಿದ್ದಾರೆ. ಇಷ್ಟು ವರ್ಷದ ಸಿನಿಮಾ ಬದುಕಿನಲ್ಲಿ‌ ಸಾಥ್ ಕೊಟ್ಟ ಪ್ರತಿಯೊಬ್ಬರಿಗೂ ಕಿಚ್ಚ ಸುದೀಪ್ ಸೋಷಿ ಯಲ್ ಮೀಡಿಯಾ ಪೋಸ್ಟ್ ಮೂಲಕ ಧನ್ಯವಾದ ಹೇಳಿದ್ದಾರೆ. ನನಗೆ ಸ್ಪೂರ್ತಿ ನೀಡಿರೋ ಎಲ್ಲ ಅಭಿಮಾನಿಗಳಿಗೆ ನಾನು ಸದಾ ಚಿರಋಣಿಯಾಗಿದ್ದು ಹೃದಯಾಂತರಾಳದಿಂದ ಧನ್ಯವಾದವನ್ನು ಮಾತ್ರ ಹೇಳಬಲ್ಲೆ ಎಂದು ಸುದೀಪ್ ಬರೆದುಕೊಂಡಿದ್ದಾರೆ.

ಕಿಚ್ಚನ ಸಿನಿ ಜರ್ನಿಗೆ 29 ವರ್ಷ- ಭಾವುಕ ಪೋಸ್ಟ್ ಫುಲ್‌ ವೈರಲ್‌

sudeep

Profile Pushpa Kumari Jan 31, 2025 3:41 PM

ಬೆಂಗಳೂರು: ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ‌ ಸಖತ್ ಮಲ್ಟಿ ಟ್ಯಾಲೆಂಟೆಡ್ ನಟ ಎಂದರೆ ಅದು ಕಿಚ್ಚ ಸುದೀಪ್ (Kiccha Sudeep). ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಹಲವು ಹಿಟ್ ಚಿತ್ರಗಳ ಮೂಲಕ ಫೇಮ್ ಗಿಟ್ಟಿಸಿಕೊಂಡವರು‌. ತಮ್ಮ ಸುದೀರ್ಘ ಸಿನಿಜೀವನದಲ್ಲಿ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಚಿತ್ರಗಳಲ್ಲೂ ನಟಿಸಿ ಮೆಚ್ಚುಗೆ ಪಡೆದಿದ್ದಾರೆ. ಇದೀಗ ಕಿಚ್ಚ ಸಿನಿ ಜರ್ನಿಗೆ ‌29ವರ್ಷದ ಸಂಭ್ರಮ, ಬಣ್ಣದ ಲೋಕಕ್ಕೆ ಕಾಲಿಟ್ಟು 29 ವರ್ಷಗಳು ಕಳೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಕಿಚ್ಚ ಭಾವುಕ ಸಂದೇಶ ಬರೆದುಕೊಂಡಿದ್ದಾರೆ.

ನಟ ಸುದೀಪ್ ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಅಭಿಮಾನಿಗಳ ಹೃದಯದಲ್ಲಿ ಮತ್ತಷ್ಟು ಹತ್ತಿರವಾಗಿ ಖಾಯಂ ಜಾಗ ಮಾಡಿಕೊಂಡಿದ್ದಾರೆ. ಇಷ್ಟು ವರ್ಷದ ಸಿನಿಮಾ ಬದುಕಿನಲ್ಲಿ‌ ಸಾಥ್ ಕೊಟ್ಟ ಪ್ರತಿಯೊಬ್ಬರಿಗೂ ಕಿಚ್ಚ ಸುದೀಪ್ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಧನ್ಯವಾದ ಹೇಳಿದ್ದಾರೆ.



ಏನಿದೆ ಪೋಸ್ಟ್‌ನಲ್ಲಿ?

ಈ ಅದ್ಭುತವಾದ ಸಿನಿ ಪಯಣವನ್ನು ನಡೆಸಿರುವುದಕ್ಕೆ ನನ್ನಲ್ಲಿ ಕೃತಜ್ಞ ಭಾವನೆ ಇದೆ. ಸಿನಿಮಾ ಜೀವನದಲ್ಲಿ ಜನ ತೋರಿದ ಪ್ರೀತಿ ತುಂಬಾನೆ ಮುಖ್ಯ ಎನಿಸಿದೆ. ನಿಮ್ಮಿಂದ ಸತತವಾಗಿ ಸಿಗುತ್ತಿರುವ ಈ ಅದ್ಭುತ ಪ್ರೀತಿ, ಪ್ರೋತ್ಸಾಹ ನನ್ನಲ್ಲಿ ಸ್ಪೂರ್ತಿ ತುಂಬುತ್ತಲೇ ಇದೆ. ಇಂತಹ ಡೆಡಿಕೇಟೆಡ್ ಅಭಿಮಾನಿಗಳಿಗೆ ನನ್ನದೊಂದು ಸಲಾಂ, ನನಗೆ ಸ್ಪೂರ್ತಿ ನೀಡಿರೋ ಎಲ್ಲ ಅಭಿಮಾನಿಗಳಿಗೆ ನಾನು ಸದಾ ಚಿರಋಣಿಯಾಗಿದ್ದು ಹೃದಯಾಂತರಾಳದಿಂದ ಧನ್ಯವಾದವನ್ನು ಮಾತ್ರ ಹೇಳಬಲ್ಲೆ ಎಂದು ಸುದೀಪ್ ಬರೆದುಕೊಂಡಿದ್ದಾರೆ.

ಇದನ್ನು ಓದಿ: Viral News: ಹೋಂವರ್ಕ್‌ ಮಾಡ್ಲಿಲ್ಲ ಅಂತ ಬೈದ ತಂದೆಯನ್ನೇ ಪೊಲೀಸರಿಗೆ ಒಪ್ಪಿಸಿದ ಮಗ!

ಬ್ರಹ್ಮ ಸುದೀಪ್ ನಟನೆಯ ಮೊದಲ ಸಿನಿಮಾವಾಗಿದ್ದು ಈ ಸಿನಿಮಾದಲ್ಲಿ ಅಂಬರೀಷ್ ನಟಿಸಿದ್ದರು. ಆದರೆ, ಈ ಚಿತ್ರ ರಿಲೀಸ್ ಆಗಲೇ ಇಲ್ಲ. ಬಳಿಕ ಸ್ಪರ್ಶ ಚಿತ್ರದ ಮೂಲಕ ನಟ ಸುದೀಪ್‌ ಖ್ಯಾತಿ ಪಡೆದರು. ನಂತರದಲ್ಲಿ ಬಂದ ಹುಚ್ಚ ಸಿನಿಮಾವು ಸುದೀಪ್ ಗೆ ಬಹಳಷ್ಟು ಸಕ್ಸ್‌ಸ್‌ ನೀಡಿತು. ಆಟೋಗ್ರಾಫ್, ವೀರಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ, ಮಾಣಿಕ್ಯ ಹೀಗೆ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿ ಕಿಚ್ಚ ಸಕ್ಸಸ್ ಕಾಣ್ತಾರೆ.ಇನ್ನು ಪರಭಾಷೆಗಳಲ್ಲಿ ಬೇಡಿಕೆಯನ್ನು ಹೊಂದಿದ್ದ ಮೊದಲ ಕನ್ನಡದ ನಟ ಕಿಚ್ಚ ಸುದೀಪ್ ಆಗಿದ್ದಾರೆ. ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿತ್ತು