Viral News: ಹೋಂವರ್ಕ್ ಮಾಡ್ಲಿಲ್ಲ ಅಂತ ಬೈದ ತಂದೆಯನ್ನೇ ಪೊಲೀಸರಿಗೆ ಒಪ್ಪಿಸಿದ ಮಗ!
ಹೋಂವರ್ಕ್ ಮಾಡಲಿಲ್ಲವೆಂದು ಬೈದಿದ್ದಕ್ಕೆ ಕೋಪಗೊಂಡ 10 ವರ್ಷದ ಬಾಲಕ ತನ್ನ ತಂದೆಯ ಅಕ್ರಮ ವ್ಯವಹಾರದ ಬಗ್ಗೆ ಪೊಲೀಸರಿಗೆ ತಿಳಿಸಿ ತಂದೆ ಜೈಲುಪಾಲಾಗುವಂತೆ ಮಾಡಿದ ಘಟನೆ ಚೀನಾದ ಯೋಂಗ್ನಿಂಗ್ ಕೌಂಟಿಯಲ್ಲಿ ನಡೆದಿದೆ.ಇದೀಗ ವೈರಲ್(Viral News) ಆಗಿದೆ.
ಬೀಜಿಂಗ್: ಈಗಿನ ಮಕ್ಕಳನ್ನು ಬೆಳೆಸುವುದು ದೊಡ್ಡ ಸವಾಲೇ ಸರಿ! ಬೈದರೂ ಕಷ್ಟ, ಬೈಯದಿದ್ದರೆ ಇನ್ನೂ ಕಷ್ಟ ಅನ್ನುವ ಪರಿಸ್ಥಿತಿ ಪೋಷಕರಿಗೆ ಎದುರಾಗಿದೆ. ಮಗನಿಗೆ ಹೋವರ್ಕ್ ಮಾಡಲಿಲ್ಲ ಎಂದು ಬೈದಿದ್ದಕ್ಕೆ ತಂದೆಯೊಬ್ಬನಿಗೆ ಸಂಕಷ್ಟ ಎದುರಾದ ಘಟನೆ ಚೀನಾದಲ್ಲಿ ನಡೆದಿದೆ. ಹೋಂವರ್ಕ್ ಮಾಡಲಿಲ್ಲ ಯಾಕೆ ಎಂದು ತಂದೆ ಬೈದಿದ್ದಕ್ಕೆ ಕೋಪಗೊಂಡ 10 ವರ್ಷದ ಬಾಲಕನೊಬ್ಬ ತನ್ನ ತಂದೆಯ ಅಕ್ರಮ ಕೆಲಸದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಘಟನೆ ಎಲ್ಲೆಡೆ ವೈರಲ್(Viral News)ಆಗಿದೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಆತ ಪೊಲೀಸರಿಗೆ ಕರೆ ಮಾಡಿ ತನ್ನ ತಂದೆ ಅಕ್ರಮ ವಸ್ತುಗಳನ್ನು ಹೊಂದಿದ್ದಾರೆಂದು ವರದಿ ಮಾಡಿದ್ದಾನೆ. ಇದರ ಪರಿಣಾಮವಾಗಿ ತಂದೆ ಜೈಲುಪಾಲಾಗಿದ್ದಾನೆ. ಚೀನಾದ ಯೋಂಗ್ನಿಂಗ್ ಕೌಂಟಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, 10 ವರ್ಷದ ಬಾಲಕ ತನ್ನ ಹೋಂವರ್ಕ್ ಅನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸದ ಕಾರಣ ಅತನ ತಂದೆ ಬೈದಿದ್ದಾನೆ. ಘಟನೆಯ ನಂತರ ಬಾಲಕ ಮನೆಯಿಂದ ಹೊರಗೆ ಓಡಿಬಂದಿದ್ದಾನೆ. ದಾರಿಯಲ್ಲಿ, ಆತ ಅಂಗಡಿಯವರಿಂದ ಫೋನ್ ಎರವಲು ಪಡೆದು ಪೊಲೀಸರಿಗೆ ಕರೆ ಮಾಡಿ ತನ್ನ ತಂದೆ ಮನೆಯಲ್ಲಿ ಗಸಗಸೆ ಬೀಜಗಳನ್ನು ಬಚ್ಚಿಟ್ಟಿದ್ದಾರೆ ಎಂದು ಹೇಳಿದ್ದಾನೆ.
ಗಸಗಸೆ ಬೀಜಗಳು ಏಕೆ ಕಾನೂನುಬಾಹಿರ?
ಗಸಗಸೆ ಬೀಜಗಳು ಕೋಡೀನ್ ಮತ್ತು ಮಾರ್ಫಿನ್‍ನಂತಹ ಓಪಿಯೇಟ್‍ಗಳನ್ನು ಹೊಂದಿರುತ್ತದೆಯಂತೆ. ಹಾಗಾಗಿ ಅವುಗಳನ್ನು ಚೀನಾದಲ್ಲಿ ಆಹಾರ ಪದಾರ್ಥವಾಗಿ ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.
ಗಸಗಸೆಯ ಕೃಷಿಯನ್ನು ಸರ್ಕಾರ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅನುಮತಿಯಿಲ್ಲದೆ ಅವುಗಳನ್ನು ಬೆಳೆಸುವ ಯಾರಾದರೂ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ದಂಡದಿಂದ ಜೈಲು ಶಿಕ್ಷೆಯವರೆಗೂ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ವರದಿಯಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಮುಂಬೈ ಪೊಲೀಸ್ ಕೊಳಲಿನ ಮಾಧುರ್ಯಕ್ಕೆ ಮನಸೋಲದವರೇ ಇಲ್ಲ- ವಿಡಿಯೊ ವೈರಲ್
ಹಾಗಾಗಿ ಬಾಲಕನಿಂದ ಮಾಹಿತಿಯನ್ನು ಪಡೆದ ನಂತರ, ಪೊಲೀಸರು ಆ ಬಾಲಕನನ್ನು ಪತ್ತೆ ಮಾಡಿದ್ದಾರೆ. ನಂತರ ಆತ ಪೊಲೀಸರಿಗೆ ತನ್ನ ಮನೆಗೆ ಹೋಗುವ ಮಾರ್ಗವನ್ನು ತೋರಿಸಿದ್ದಾನೆ. ಅಲ್ಲಿ ಅಧಿಕಾರಿಗಳು ಗಸಗಸೆ ಬೀಜಗಳಿಗಾಗಿ ಹುಡುಕಾಟವನ್ನು ಶುರುಮಾಡಿದಾಗ ಬಾಲ್ಕನಿ ಕ್ಯಾಬಿನೆಟ್‍ನಲ್ಲಿ ಗಸಗಸೆ ಬೀಜಗಳನ್ನು ಅವರು ಕಂಡುಕೊಂಡಿದ್ದಾರೆ. ಬಾಲಕನ ತಂದೆ ತಪ್ಪು ಒಪ್ಪಿಕೊಂಡಿದ್ದಾನೆ. ಕೊನೆಗೆ ತಂದೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.