112 ದಿನಗಳ ಕಾಲ ನಡೆದ ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗೆ ಕೊನೆಗೂ ಮುಕ್ತಾಯ ಹಾಡುವ ಸಮಯ ಬಂದಿದೆ. ಇಂದು ರಾತ್ರಿ (ಜ.18) ಯಾರು ವಿನ್ನರ್ ಎಂಬುದು ಗೊತ್ತಾಗಲಿದೆ. ಜೊತೆಗೆ ಮುಂದಿನ ಸೀಸನ್ ಆರಂಭ ಆಗುವವರೆಗೂ ಬಿಗ್ ಬಾಸ್ ಮನೆಗೆ ಬೀಗ ಬೀಳಲಿದೆ. ಬಿಗ್ ಬಾಸ್ ಎಂದರೆ, ಕನ್ನಡ ವೀಕ್ಷಕರಿಗೆ ಕಿಚ್ಚ ಸುದೀಪ್ ಅವರೇ ಕಣ್ಮುಂದೆ ಬರುತ್ತಾರೆ. ಬಿಗ್ ಬಾಸ್‌ನ ಫೇಸ್ ಆಗಿ ಕನ್ನಡಿಗರನ್ನು ಕಿಚ್ಚ ರಂಜಿಸಿದ್ದಾರೆ. ಸದ್ಯ ಅವರು ಶೋ ಎಂಡ್ ಆಗುತ್ತಿರುವ ಹಿನ್ನೆಲೆಯಲ್ಲಿ ಎಮೋಷಲನಲ್ ಪೋಸ್ಟ್ ಒಂದನ್ನು ಸುದೀಪ್ ಹಂಚಿಕೊಂಡಿದ್ದಾರೆ.
ಸುದೀಪ್ ಟ್ವೀಟ್‌ನಲ್ಲಿ ಏನಿದೆ?
"ಇಂದು ಸೂರ್ಯಾಸ್ತದೊಂದಿಗೆ, ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯಗೊಳ್ಳಲಿದೆ. ಈ ಅದ್ಭುತ ಸೀಸನ್... ಬೆಳವಣಿಗೆ ಮತ್ತು ವೈಭವದ ಒಂದು ಅಸಾಧಾರಣ ಪಯಣವಾಗಿದ್ದು, ಪ್ರತಿ ಸೀಸನ್ ಕಳೆದಂತೆ ಬಿಗ್ ಬಾಸ್‌ನ ಏಳಿಗೆಗೆ ಸಾಕ್ಷಿಯಾಗಿದೆ. ನಿರಂತರ ಬೆಂಬಲ ನೀಡಿದ ಪ್ರತಿಯೊಬ್ಬ ನಿಷ್ಠಾವಂತ ವೀಕ್ಷಕರಿಗೂ ನನ್ನ ಕೃತಜ್ಞತೆಗಳು" ಎಂದು ಸುದೀಪ್ ಅವರು ಹೇಳಿದ್ದಾರೆ.
ಬಿಗ್ ಬಾಸ್ ಮನೆಯ ಬಾಗಿಲು ಮುಚ್ಚಲಿವೆ
"ಎಲ್ಲಾ ಸ್ಪರ್ಧಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಈ ಸೀಸನ್‌ನ ವಿಜೇತರಿಗೆ ಶುಭಾಶಯಗಳು. ಈ ಬೃಹತ್ ಯಶಸ್ಸಿಗೆ ಕಾರಣರಾದ ಇಡೀ ತಾಂತ್ರಿಕ ತಂಡಕ್ಕೆ ದೊಡ್ಡ ಅಭಿನಂದನೆಗಳು. ನೀವೆಲ್ಲರೂ ಇಲ್ಲದೆ ಬಿಗ್‌ಬಾಸ್ ಇಲ್ಲ. ಮುಂದಿನ ಬಿಗ್ ಬಾಸ್ ಕನ್ನಡ ಸೀಸನ್ 13 ಪ್ರಾರಂಭವಾಗುವವರೆಗೆ ಬಿಗ್ ಬಾಸ್‌ಗೆ ವಿಶ್ರಾಂತಿ ನೀಡಲು, ನಾವೀಗ ಗೌರವಪೂರ್ವಕವಾಗಿ ಬಾಗಿಲು ಮುಚ್ಚುತ್ತಿದ್ದೇವೆ. ಪ್ರೀತಿ ಮತ್ತು ಅಪ್ಪುಗೆಗಳು.." ಎಂದು ಸುದೀಪ್ ಅವರು ಬರೆದುಕೊಂಡಿದ್ದಾರೆ.
ಕಿಚ್ಚ ಸುದೀಪ್ ಅವರ ಪೋಸ್ಟ್
ಅಂದಹಾಗೆ, ಕನ್ನಡದಲ್ಲಿ ಬಿಗ್ ಬಾಸ್ ಆರಂಭ ಆದಾಗಿನಿಂದ ಸುದೀಪ್ ಅವರೇ ನಿರೂಪಕರಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಈವರೆಗೂ ಅವರ ಬದಲಾವಣೆ ಆಗಿಲ್ಲ. ಬೇರೆ ಬೇರೆ ಭಾಷೆಯ ಬಿಗ್ ಬಾಸ್ ಶೋಗಳಲ್ಲಿ ಆಗಾಗ ನಿರೂಪಕ ಬದಲಾವಣೆ ಆಗುವುದನ್ನು ನಾವು ನೋಡಿದ್ದೇವೆ. ಆದರೆ ಕನ್ನಡ ಬಿಗ್ ಬಾಸ್‌ನಲ್ಲಿ ಮಾತ್ರ ಸುದೀಪ್ ಅವರನ್ನು ಬಿಟ್ಟು ಬೇರೆಯವರನ್ನು ಆ ಸ್ಥಾನದಲ್ಲಿ ನೋಡಲು ವೀಕ್ಷಕರು ರೆಡಿ ಇಲ್ಲ. ಸತತ 12 ಬಿಗ್ ಬಾಸ್ ಸೀಸನ್ ಮತ್ತು ಒಂದು ಒಟಿಟಿ ಸೀಸನ್ ನಾನು ನಡೆಸಿಕೊಟ್ಟು ಹೊಸ ದಾಖಲೆಯನ್ನು ಸುದೀಪ್ ಬರೆದಿದ್ದಾರೆ.