ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಾ ರಾ ಮಹೇಶ್‌ ನಿರ್ಮಾಣದ ಮೊದಲ ಚಿತ್ರಕ್ಕೆ ಸಾಥ್ ನೀಡಿದ ನಟ ಸುದೀಪ್; ʻಸೆಲೆಬ್ರಿಟಿʼ ಚಿತ್ರದ ಹೀರೋಗೆ ʻಕಿಚ್ಚʼ ಹೇಳಿದ್ದೇನು?

Celebrity Movie Title Launch: ಜೆಡಿಎಸ್ ನಾಯಕ, ಮಾಜಿ ಸಚಿವ ಸಾ. ರಾ. ಮಹೇಶ್ ಅವರ 'ಗೌರಿ ಆರ್ಟ್ಸ್' ನಿರ್ಮಾಣ ಸಂಸ್ಥೆಯ ಚೊಚ್ಚಲ ಚಿತ್ರದ ಶೀರ್ಷಿಕೆಯನ್ನು ನಟ ಕಿಚ್ಚ ಸುದೀಪ್ ಅನಾವರಣಗೊಳಿಸಿದ್ದಾರೆ. ಯುವ ನಟ ಅಶ್ವಿನ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಚಿತ್ರಕ್ಕೆ ಕಿರಣ್ ವಿಶ್ವನಾಥ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.

ಮಾಜಿ ಸಚಿವ ಸಾ ರಾ ಮಹೇಶ್‌ ಅವರು ಗೌರಿ ಆರ್ಟ್ಸ್ ಮೂಲಕ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಸದಾಭಿರುಚಿಯ ಸಿನಿಮಾಗಳನ್ನು ನಿರ್ಮಾಣ ಮಾಡಬೇಕೆಂದು ಈ ನಿರ್ಮಾಣ ಸಂಸ್ಥೆಯನ್ನ ಆರಂಭಿಸಿದ್ದು, ಈ ಸಂಸ್ಥೆಯ ಚೊಚ್ಚಲ ಚಿತ್ರದ ಟೈಟಲ್ ಲಾಂಚ್ ಇವೆಂಟ್ ಅದ್ದೂರಿಯಾಗಿ ನಡೆದಿದೆ. ನಟ ಕಿಚ್ಚ ಸುದೀಪ್ ಅವರು ಸೆಲೆಬ್ರಿಟಿ ಹೆಸರಿನ ಹೊಸ ಸಿನಿಮಾದ ಟೈಟಲ್ ಲಾಂಚ್ ಮಾಡಿ, ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಸೆಲೆಬ್ರಿಟಿ ಟೀಮ್‌ ಬಗ್ಗೆ ಸುದೀಪ್‌ ಏನಂದ್ರು?

"ನನಗೆ ಈ ಟೀಸರ್ ತುಂಬಾ ಇಷ್ಟವಾಯ್ತು. ಟೆಕ್ನಿಕಲ್ ಆಗಿ ಬ್ಯೂಟಿಫುಲ್ ಆಗಿದೆ. ವಿಜಯ್ ಗುಮ್ಮಿನೇನಿ ಅವರ ಸಂಗೀತ ಚೆನ್ನಾಗಿದೆ. ಅರ್ಜುನ್ ಜನ್ಯ ಅವರ ಶಿಷ್ಯ ವಿಜಯ್.‌ ಇವರು ಈ ಹಿಂದೆ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಮಾತಾಡೋ ತಾರೆಯ ಹಾಡನ್ನು ಹಾಡಿದ್ದರು. ವಿಜಯ್‌ ಅವರ ಧ್ವನಿ ಬ್ಯೂಟಿಫುಲ್‌ ಆಗಿದೆ. ಸೆಲೆಬ್ರಿಟಿ ಸಿನಿಮಾದ ಹೀರೋ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಅವರು ಮಾಡಿರುವ ಡ್ಯಾನ್ಸ್ ಅನ್ನು ನಮಗೆ ಮಾಡಲು ಹೇಳಿದರೆ ನಾವು ಭಯಪಡುತ್ತೇವೆ. ನಮಗೆ ಅಷ್ಟೆಲ್ಲಾ ಡ್ಯಾನ್ಸ್ ಬರಲ್ಲ. ನಿಮಗೆ ಒಳ್ಳೆಯ ಕಲೆ ಇದೆ" ಎಂದು ಚಿತ್ರದ ಹೀರೋಗೆ ಹೊಗಳಿದ್ದಾರೆ ಸುದೀಪ್.

Dhanveerah: ದೊಡ್ಡವರು ಮಾತನಾಡೋದು ಕೇಳಿ ಖುಷಿ ಆಯ್ತು! ಸುದೀಪ್‌ ಬಗ್ಗೆ ಧನ್ವೀರ್ ಹೇಳಿದ್ದೇನು?

ಸಾ ರಾ ಮಹೇಶ್‌ ನನಗೆ ಆತ್ಮೀಯರು

ನಾನು ಇಲ್ಲಿಗೆ ಬರಲು ಮೂಲ ಕಾರಣ ಮ‌ಹೇಶ್ ಅಣ್ಣ. ಅವರು ನನಗೆ ಬಹಳ ವರ್ಷಗಳ ಪರಿಚಯ ಮತ್ತು ನನಗೆ ಬಹಳ ಬೇಕಾದ ವ್ಯಕ್ತಿ ಕೂಡ. ಒಂದು ಸಿನಿಮಾ ಮಾಡುವುದು ಸುಲಭದ ಕೆಲಸವಾದರೆ, ಅದು ಬೆಳೆಯಬೇಕು ಎಂದರೆ ಅದಕ್ಕೆ ಎಲ್ಲರ ಸಹಕಾರ ಬೇಕು. ಈ ಸಿನಿಮಾದಲ್ಲಿ ಕೆಲಸ ಮಾಡಿರುವ ಪ್ರತಿಯೊಬ್ಬರಿಗೂ ಒಳ್ಳೆದಾಗಲಿ" ಎಂದರು ಕಿಚ್ಚ ಸುದೀಪ್.

"ನಾನು ಇದೇ ಮೊದಲ ಬಾರಿಗೆ ಸುದೀಪ್ ಸರ್ ಎದುರು ಮಾತಾಡ್ತಿದ್ದೇನೆ. ಏನ್ ಮಾತಾಡ್ಬೇಕು ಗೊತ್ತಾಗುತ್ತಿಲ್ಲ. ಅವರಿಗೆ ಧನ್ಯವಾದ. ಚಿಕ್ಕ ವಯಸ್ಸಿನಿಂದ ಕನಸು ಇಟ್ಕೊಂಡು ಬಂದಿದ್ದೇನೆ. ನಿಮ್ಮೆಲ್ಲರ ಹಾರೈಕೆ ನನ್ನ ಮೇಲೆ ಇರಲಿ"‌ ಎಂದು ಹೇಳಿದರು ಮೊದಲ ಬಾರಿಗೆ ಹೀರೋ ಆಗಿರುವ ಅಶ್ವಿನ್.‌ ʻಯಾರೇ ನೀನು ಚೆಲುವೆʼ ಸಿನಿಮಾ ಖ್ಯಾತಿಯ ನಟಿ ಸಂಗೀತಾ ಅವರು ಈ ಚಿತ್ರದ ಮೂಲಕ ಕನ್ನಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ.

ಸುದೀಪ್‌ ವೃತ್ತಿ ಬದುಕಿಗೆ 30 ವರ್ಷ; ಕಾಮನ್‌ ಡಿಪಿ ರಿಲೀಸ್‌ ಮಾಡಲಿದ್ದಾರೆ ಸಿಎಂ ಸಿದ್ದರಾಮಯ್ಯ,‌ ಭಾವುಕ ಪತ್ರ ಬರೆದ ʻಕಿಚ್ಚʼ

"ನನಗೆ ತುಂಬಾ ಸಂತೋಷವಾಗುತ್ತಿದೆ.‌ ಇಷ್ಟು ವರ್ಷ ಆದಮೇಲೆ ನಾನು ಸೆಲೆಬ್ರಿಟಿ ಸಿನಿಮಾ ಮೂಲಕ ಕಂಬ್ಯಾಕ್ ಆಗುತ್ತಿದ್ದೇನೆ. ನಿರ್ದೇಶಕ ಕಿರಣ್ ಅವರು, ಮಹೇಶ್ ಸರ್ ಹಾಗೂ ಇಡೀ ತಂಡಕ್ಕೆ ಧನ್ಯವಾದಗಳು. ನಾನು ಕೂಡ ಸುದೀಪ್ ಅವರ ಅಭಿಮಾನಿ. ಅವರನ್ನು ಇಲ್ಲಿ ನೋಡಿದ್ದು ಖುಷಿ ನೀಡಿತು. ಈ ಚಿತ್ರದ ಹೀರೋ ತುಂಬಾ ಶ್ರಮ ಹಾಕಿ ಕೆಲಸ ಮಾಡುತ್ತಾರೆ" ಎಂದು ಸಂಗೀತಾ.

"ಸೆಲೆಬ್ರಿಟಿ" ಸಿನಿಮಾವನ್ನು ಗೌರಿ ಆರ್ಟ್ಸ್ ಬ್ಯಾನರ್ ನಡಿ ಜೆಡಿಎಸ್ ನಾಯಕ ಸಾ ರಾ ಮಹೇಶ್ ಹಾಗೂ ಸುಷ್ಮಾ ಅಶ್ವಿನ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಯುವ ನಟ ಅಶ್ವಿನ್ ನಾಯಕನಾಗಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ನಾಯಕಿಯಾಗಿ ಏಳುಮಳೆ ಸಿನಿಮಾ ಖ್ಯಾತಿಯ ಪ್ರಿಯಾಂಕಾ ಆಚಾರ್‌ ಇದ್ದಾರೆ.

ಕಿರಣ್ ವಿಶ್ವನಾಥ್ ಸೆಲೆಬ್ರಿಟಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ರವಿವರ್ಮ ಸಾಹಸ ನಿರ್ದೇಶನ ಇದೆ. ಹಾಡುಗಳಿಗೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ.