ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dhanveerah: ದೊಡ್ಡವರು ಮಾತನಾಡೋದು ಕೇಳಿ ಖುಷಿ ಆಯ್ತು! ಸುದೀಪ್‌ ಬಗ್ಗೆ ಧನ್ವೀರ್ ಹೇಳಿದ್ದೇನು?

kichcha sudeep: ಸ್ಯಾಂಡಲ್‌ವುಡ್‌ ಬಾದ್‌ಷಾ ಕಿಚ್ಚ ಸುದೀಪ್‌ ಅವರು ಇತ್ತೀಚೆಗೆ ತಮ್ಮ ʻಮಾರ್ಕ್‌ʼ ಸಿನಿಮಾದ ಪ್ರೀ-ರಿಲೀಸ್‌ ಈವೆಂಟ್‌ನಲ್ಲಿ ʻಯುದ್ದಕ್ಕೆ ಸಿದ್ದʼ ಎಂದು ಹೇಳಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ನಂತರ ಈ ಬಗ್ಗೆ ಮಾತನಾಡಿದ ಸುದೀಪ್‌, ತಮ್ಮ ಮಾತು ಪೈರಸಿ ಮಾಡುವವರ ವಿರುದ್ಧವೇ ಹೊರತು ಯಾವುದೇ ವ್ಯಕ್ತಿಯ ವಿರುದ್ದವಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು. ಹೀಗಿರುವಾಗಲೇ ದರ್ಶನ್‌ ಆಪ್ತ ಧನ್ವೀರ್‌ ಮತ್ತು ಸುದೀಪ್‌ ಆಪ್ತ ವಿನಯ್‌ ಗೌಡರ (Vinay Gowda) ಪೋಸ್ಟ್‌ ವಾರ್‌ ಕೂಡ ನಡೆದಿತ್ತು.

ಸುದೀಪ್‌ ಬಗ್ಗೆ ಧನ್ವೀರ್ ಹೇಳಿದ್ದೇನು?

ಧನ್ವೀರ್‌- ಕಿಚ್ಚ ಸುದೀಪ್‌ -

Yashaswi Devadiga
Yashaswi Devadiga Feb 9, 2026 8:42 AM

ಸ್ಯಾಂಡಲ್‌ವುಡ್‌ (Sandalwood) ಬಾದ್‌ಷಾ ಕಿಚ್ಚ ಸುದೀಪ್‌ (kichcha sudeep) ಅವರು ಇತ್ತೀಚೆಗೆ ತಮ್ಮ ʻಮಾರ್ಕ್‌ʼ ಸಿನಿಮಾದ ಪ್ರೀ-ರಿಲೀಸ್‌ ಈವೆಂಟ್‌ನಲ್ಲಿ ʻಯುದ್ದಕ್ಕೆ ಸಿದ್ದʼ ಎಂದು ಹೇಳಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ನಂತರ ಈ ಬಗ್ಗೆ ಮಾತನಾಡಿದ ಸುದೀಪ್‌, ತಮ್ಮ ಮಾತು ಪೈರಸಿ ಮಾಡುವವರ ವಿರುದ್ಧವೇ ಹೊರತು ಯಾವುದೇ ವ್ಯಕ್ತಿಯ ವಿರುದ್ದವಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು. ಹೀಗಿರುವಾಗಲೇ ದರ್ಶನ್‌ ಆಪ್ತ ಧನ್ವೀರ್‌ (Dhanveer) ಮತ್ತು ಸುದೀಪ್‌ ಆಪ್ತ ವಿನಯ್‌ ಗೌಡರ (Vinay Gowda) ಪೋಸ್ಟ್‌ ವಾರ್‌ ಕೂಡ ನಡೆದಿತ್ತು.

ಸುದೀಪ್ ಹೇಳಿದ್ದೇನು?

ವಿನಯ್ ಹಾಗೂ ಧನ್ವೀರ್ ಪೋಸ್ಟ್ ಹಾಕಿಕೊಂಡು ಕಿರಿಕ್ ಮಾಡಿಕೊಂಡ ಬಗ್ಗೆ ಸುದೀಪ್ ಮಾತನಾಡಿದ್ದರು. ‘ನನಗೆ ಧನ್ವೀರ್ ಹಾಗೂ ವಿನಯ್ ಇಬ್ಬರೂ ಒಂದೇ. ಅವರಿಬ್ಬರೂ ಚಿತ್ರರಂಗದ ಯಂಗ್​ಸ್ಟರ್ಸ್​. ಏನೇ ಆದರೂ ಆ ಹೀರೋ ಜೊತೆ ನಿಲ್ಲುತ್ತೇನೆ ಎಂಬ ನೀಯತ್ತು ಇದೆಯಲ್ಲ ಅದು ಬೇಕು’ ಎಂದಿದ್ದರು ಕಿಚ್ಚ.

ಇದನ್ನೂ ಓದಿ: Star Movie: ಫೆ.13ಕ್ಕೆ `ಸ್ಟಾರ್‌' ಸಿನಿಮಾ ರಿಲೀಸ್! ಮುಖ್ಯ ಪಾತ್ರವೊಂದರಲ್ಲಿ ಪತ್ರಕರ್ತ ವಾಸುದೇವ್

ಈ ವಿಷಯವಾಗಿ ಧನ್ವೀರ್ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ನಾನು ಆ ವಿಡಿಯೋ ನೋಡಿದೆ. ದೊಡ್ಡವರು ಎಂಬುದು ಹೇಳೋದು ಇದಕ್ಕೆ. ಅವರಿಗೆ ಎಲ್ಲವೂ ಗೊತ್ತಿರುತ್ತದೆ. ಅದಕ್ಕೆ ಅವರು ದೊಡ್ಡ ಮಾತು ಆಡ್ತಾರೆ’ಎಂದರು ಧನ್ವೀರ್.

ಧನ್ವೀರ್‌ ಪೋಸ್ಟ್‌ನಲ್ಲಿ ಈ ಹಿಂದೆ ಏನಿತ್ತು?

ಧನ್ವೀರ್‌, ನಟ ದರ್ಶನ್‌ ಅವರೊಂದಿಗಿನ ತಮ್ಮ ಫೋಟೋವನ್ನ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು, “ಕಾಡಿನಲ್ಲಿ ಎಲ್ಲಾ ಪ್ರಾಣಿಗಳು ಇರುತ್ತವೆ. ಆದರೆ, ಸಿಂಹನೇ ರಾಜ” ಎಂದು ಧನ್ವೀರ್‌ ಪೋಸ್ಟ್‌ ಮಾಡಿಕೊಂಡಿದ್ದರು. ಇದಕ್ಕೆ ನೇರವಾಗಿ ತಕ್ಷಣವೇ ರಿಯಾಕ್ಟ್‌ ಮಾಡಿದ ʻಬಿಗ್‌ ಬಾಸ್ʼ ಖ್ಯಾತಿಯ ವಿನಯ್‌ ಗೌಡ, “ಹೌದು.. ಸಿಂಹನೇ ಕಾಡಿನ ರಾಜ ಅನ್ನೋದು ಗೊತ್ತು. ಆದರೆ, ಅಸಲಿ ಸಿಂಹ ಯಾರು ಅಂತ ನಮಗೆ ಗೊತ್ತಿದೆ” ಎಂದು ಪೋಸ್ಟ್‌ ಮಾಡಿಕೊಂಡಿದ್ದರು.

ಇದನ್ನೂ ಓದಿ: Thalaivar Thambi Thalaimaiyil OTT: ಸರಳ ಕಥೆ, ಹಳ್ಳಿಯ ಹಾಸ್ಯ, ಒಂದೊಳ್ಳೆ ಮೋಜಿನ ಸಿನಿಮಾ! ಈ ಮೂವಿ ಸ್ಟ್ರೀಮಿಂಗ್‌ ಎಲ್ಲಿ?

ವಿನಯ್ ಗೌಡ ಅವರು ʻಬಿಗ್‌ ಬಾಸ್‌ ಕನ್ನಡ‌ 10’ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಸುದೀಪ್‌ ಅವರೊಂದಿಗೆ ಆತ್ಮೀಯ ಗೆಳೆತನ ಬೆಳೆಸಿಕೊಂಡಿದ್ದಾರೆ. ಕಿಚ್ಚ ಸುದೀಪ್‌ ಅವರ ವಿರುದ್ಧ ಯಾವುದೇ ವಿನಾಕಾರಣ ಪೋಸ್ಟ್‌ಗಳು ಬಂದಾಗ ಸಹಜವಾಗಿಯೇ ಅವರ ಬೆಂಬಲಕ್ಕೆ ನಿಲ್ಲುತ್ತಾರೆ ವಿನಯ್.