ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kiccha Sudeep: ʻಪ್ರವಾಹದ ವಿರುದ್ಧ ಈಜಲು ಹೆಚ್ಚಿನ ಧೈರ್ಯ ಬೇಕುʼ; ಯಶ್‌ ʻಟಾಕ್ಸಿಕ್‌ʼ ಪ್ರಯತ್ನಕ್ಕೆ ಸುದೀಪ್‌ ಮೆಚ್ಚುಗೆ! ಆ ಇಬ್ಬರು ಡೈರೆಕ್ಟರ್ಸ್‌ ಹೇಳಿದ್ದೇನು?

Toxic Movie Teaser: ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' (Toxic) ಚಿತ್ರದ ಪವರ್‌ಫುಲ್ ಟೀಸರ್ ಸಿನಿರಂಗದ ದಿಗ್ಗಜರನ್ನೇ ಬೆರಗುಗೊಳಿಸಿದೆ. ಯಶ್ ಅವರ ಬೋಲ್ಡ್ ಅವತಾರ ಮತ್ತು ಗೀತು ಮೋಹನ್‌ದಾಸ್ ಅವರ ಅದ್ಭುತ ಮೇಕಿಂಗ್ ನೋಡಿ ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ ಸೇರಿದಂತೆ ಹಲವು ಸ್ಟಾರ್ ನಿರ್ದೇಶಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಯಶ್ 'ಟಾಕ್ಸಿಕ್' ಸಾಹಸಕ್ಕೆ ಬೆನ್ನುತಟ್ಟಿದ ಕಿಚ್ಚ ಸುದೀಪ್; ಏನಂದ್ರು ನೋಡಿ!

-

Avinash GR
Avinash GR Jan 8, 2026 4:03 PM

ʻರಾಕಿಂಗ್‌ ಸ್ಟಾರ್‌ʼ ಯಶ್‌ ಅವರ ಹೊಸ ಸಿನಿಮಾ ʻಟಾಕ್ಸಿಕ್‌ʼ ಸ್ಪೆಷಲ್‌ ಟೀಸರ್‌ ರಿಲೀಸ್ ಆಗಿದೆ. ಟೀಸರ್‌ನಲ್ಲಿರುವ ಯಶ್‌ ಬೋಲ್ಡ್‌ ಅವತಾರ ಎಲ್ಲರ ಗಮನಸೆಳೆದಿದೆ. ಕೆಲವೇ ಗಂಟೆಗಳಲ್ಲಿ ಮಿಲಿಯನ್‌ ಗಟ್ಟಲೇ ವೀವ್ಸ್‌ ಅನ್ನು ಈ ಟೀಸರ್ ಪಡೆದುಕೊಂಡಿರುವುದು ವಿಶೇಷ. ಸದ್ಯ ಟೀಸರ್‌ ನೋಡಿ, ಹಂಚಿಕೊಂಡಿರುವ ನಟ ಕಿಚ್ಚ ಸುದೀಪ್‌ ಅವರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಶಸ್ಸಿನ ಹಾದಿ ಹೀಗೆಯೇ ಸಾಗಲಿ

"ಪ್ರವಾಹದ ವಿರುದ್ಧ ಈಜಲು ಯಾವಾಗಲೂ ಹೆಚ್ಚಿನ ಧೈರ್ಯ ಬೇಕಾಗುತ್ತದೆ. ನೀವು ಇಟ್ಟಿರುವ ಈ ಹೊಸ ಹೆಜ್ಜೆಯು, ನೀವು ಗುರಿಯಾಗಿಸಿಕೊಂಡಿರುವ ಆ ಗಮ್ಯಸ್ಥಾನಕ್ಕೆ ನಿಮ್ಮನ್ನು ಇನ್ನಷ್ಟು ಹತ್ತಿರವಾಗಿಸಲಿ. ಯಶಸ್ಸಿನ ಹಾದಿಯಲ್ಲಿ ಹೀಗೆಯೇ ಸಾಗಲಿ" ಎಂದು ಕಿಚ್ಚ ಸುದೀಪ್‌ ಅವರು ಕೊಂಡಾಡಿದ್ದಾರೆ. ಸುದೀಪ್‌ ಅವರು ಟ್ವೀಟ್‌ ಅನ್ನು ಯಶ್‌ ಫ್ಯಾನ್ಸ್‌ ಲೈಕ್‌ ಮಾಡುತ್ತಿದ್ದು, ಶೇರ್‌ ಮಾಡುತ್ತಿದ್ದಾರೆ.

Toxic Teaser: ಹಸಿಬಿಸಿ ದೃಶ್ಯಗಳಿಂದಲೇ ಸದ್ದು ಮಾಡಿದ ʻಟಾಕ್ಸಿಕ್‌ʼ ಟೀಸರ್‌; ಯಶ್‌ ಹೊಸ ಸಿನಿಮಾದ ಸ್ಪೆಷಾಲಿಟಿಗಳಿವು!

ಸುದೀಪ್‌ ಅವರ ಟ್ವೀಟ್‌



ಸಂದೀಪ್‌ ರೆಡ್ಡಿ ಮೆಚ್ಚುಗೆ

ಬೋಲ್ಡ್‌ ಸಿನಿಮಾಗಳಿಂದಲೇ ಫೇಮಸ್‌ ಆಗಿರುವ ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ ಅವರು ಈ ಟೀಸರ್‌ ಅನ್ನು ಮೆಚ್ಚಿಕೊಂಡಿದ್ದಾರೆ. "ಟಾಕ್ಸಿಕ್‌ ಟೀಸರ್ ನೋಡಿ ಅಕ್ಷರಶಃ ಫಿದಾ ಆದೆ. ಸ್ಟೈಲ್, ಆಟಿಟ್ಯೂಡ್ ಮತ್ತು ಮಾಸ್ ಎನರ್ಜಿ... ಪಕ್ಕಾ ಕಾವೇರಿದೆ.. ಜನ್ಮದಿನದ ಶುಭಾಶಯಗಳು ಯಶ್" ಎಂದು ಸಂದೀಪ್‌ ರೆಡ್ಡಿ ವಂಗಾ ಹೇಳಿದ್ದಾರೆ.

ಸಂದೀಪ್‌ ರೆಡ್ಡಿ ವಂಗಾ ಟ್ವೀಟ್



ಆರ್‌ಜಿವಿಯಿಂದ ಮೆಚ್ಚುಗೆಯ ಟ್ವೀಟ್

ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರು ಟಾಕ್ಸಿಕ್‌ಗೆ ಮನಸಾರೆ ಹೊಗಳಿದ್ದಾರೆ. "ಟಾಕ್ಸಿಕ್‌ ಸಿನಿಮಾದಲ್ಲಿ ಯಶ್‌ ಅವರ ಅವತಾರ ಮತ್ತು ಟ್ರೈಲರ್ ನೋಡಿದ ಮೇಲೆ, ಗೀತು ಮೋಹನ್‌ದಾಸ್‌ ಅವರು 'ಮಹಿಳಾ ಸಬಲೀಕರಣ'ದ ಪರಮ ಸಂಕೇತ ಎನ್ನುವುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ.. ಈ ಮಹಿಳಾ ನಿರ್ದೇಶಕಿಯ ಶಕ್ತಿಗೆ ಹೋಲಿಸಿದರೆ ಯಾವ ಪುರುಷ ನಿರ್ದೇಶಕರೂ ಸಾಟಿಯಿಲ್ಲ.. ಅವರು ಈ ಮಟ್ಟಕ್ಕೆ ಚಿತ್ರೀಕರಿಸಿದ್ದಾರೆ ಎನ್ನುವುದನ್ನು ನಂಬಲು ಈಗಲೂ ಸಾಧ್ಯವಾಗುತ್ತಿಲ್ಲ" ಎಂದು ಆರ್‌ಜಿವಿ ಹೊಗಳಿದ್ದಾರೆ.‌

ರಾಮ್‌ ಗೋಪಾಲ್‌ ವರ್ಮಾ ಟ್ವೀಟ್‌



ಸಂದೀಪ್‌ ರೆಡ್ಡಿ ವಂಗಾ, ರಾಮ್‌ ಗೋಪಾಲ್‌ ವರ್ಮಾ ಮಾತ್ರವಲ್ಲ, ಬಾಲಿವುಡ್‌ನ ಕರಣ್‌ ಜೋಹರ್‌ ಅವರಿಂದಲೂ ಟಾಕ್ಸಿಕ್‌ಗೆ ಮೆಚ್ಚುಗೆ ಸಿಕ್ಕಿದೆ. "ವಾವ್!!!! ಎಂತಹ ಅದ್ಭುತ ಜನ್ಮದಿನದ ಘೋಷಣೆ !!! ನಿಜಕ್ಕೂ ರಾಕಿಂಗ್ ಆಗಿದೆ! ಯಶ್‌ ಜನ್ಮದಿನದ ಶುಭಾಶಯಗಳು, ಇದು ಅಕ್ಷರಶಃ ಧೂಳೆಬ್ಬಿಸುವಂತಿದೆ!" ಎಂದು ಕರಣ್‌ ಜೋಹರ್‌ ಹೇಳಿದ್ದಾರೆ. ಸದ್ಯ ಈ ಟೀಸರ್‌ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 6 ಮಿಲಿಯನ್‌ ವೀಕ್ಷಣೆ ಪಡೆದುಕೊಂಡಿದೆ.