ʻರಾಕಿಂಗ್ ಸ್ಟಾರ್ʼ ಯಶ್ ಅವರ ಹೊಸ ಸಿನಿಮಾ ʻಟಾಕ್ಸಿಕ್ʼ ಸ್ಪೆಷಲ್ ಟೀಸರ್ ರಿಲೀಸ್ ಆಗಿದೆ. ಟೀಸರ್‌ನಲ್ಲಿರುವ ಯಶ್ ಬೋಲ್ಡ್ ಅವತಾರ ಎಲ್ಲರ ಗಮನಸೆಳೆದಿದೆ. ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೇ ವೀವ್ಸ್ ಅನ್ನು ಈ ಟೀಸರ್ ಪಡೆದುಕೊಂಡಿರುವುದು ವಿಶೇಷ. ಸದ್ಯ ಟೀಸರ್ ನೋಡಿ, ಹಂಚಿಕೊಂಡಿರುವ ನಟ ಕಿಚ್ಚ ಸುದೀಪ್ ಅವರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಶಸ್ಸಿನ ಹಾದಿ ಹೀಗೆಯೇ ಸಾಗಲಿ
"ಪ್ರವಾಹದ ವಿರುದ್ಧ ಈಜಲು ಯಾವಾಗಲೂ ಹೆಚ್ಚಿನ ಧೈರ್ಯ ಬೇಕಾಗುತ್ತದೆ. ನೀವು ಇಟ್ಟಿರುವ ಈ ಹೊಸ ಹೆಜ್ಜೆಯು, ನೀವು ಗುರಿಯಾಗಿಸಿಕೊಂಡಿರುವ ಆ ಗಮ್ಯಸ್ಥಾನಕ್ಕೆ ನಿಮ್ಮನ್ನು ಇನ್ನಷ್ಟು ಹತ್ತಿರವಾಗಿಸಲಿ. ಯಶಸ್ಸಿನ ಹಾದಿಯಲ್ಲಿ ಹೀಗೆಯೇ ಸಾಗಲಿ" ಎಂದು ಕಿಚ್ಚ ಸುದೀಪ್ ಅವರು ಕೊಂಡಾಡಿದ್ದಾರೆ. ಸುದೀಪ್ ಅವರು ಟ್ವೀಟ್ ಅನ್ನು ಯಶ್ ಫ್ಯಾನ್ಸ್ ಲೈಕ್ ಮಾಡುತ್ತಿದ್ದು, ಶೇರ್ ಮಾಡುತ್ತಿದ್ದಾರೆ.
Toxic Teaser: ಹಸಿಬಿಸಿ ದೃಶ್ಯಗಳಿಂದಲೇ ಸದ್ದು ಮಾಡಿದ ʻಟಾಕ್ಸಿಕ್ʼ ಟೀಸರ್; ಯಶ್ ಹೊಸ ಸಿನಿಮಾದ ಸ್ಪೆಷಾಲಿಟಿಗಳಿವು!
ಸುದೀಪ್ ಅವರ ಟ್ವೀಟ್
ಸಂದೀಪ್ ರೆಡ್ಡಿ ಮೆಚ್ಚುಗೆ
ಬೋಲ್ಡ್ ಸಿನಿಮಾಗಳಿಂದಲೇ ಫೇಮಸ್ ಆಗಿರುವ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಈ ಟೀಸರ್ ಅನ್ನು ಮೆಚ್ಚಿಕೊಂಡಿದ್ದಾರೆ. "ಟಾಕ್ಸಿಕ್ ಟೀಸರ್ ನೋಡಿ ಅಕ್ಷರಶಃ ಫಿದಾ ಆದೆ. ಸ್ಟೈಲ್, ಆಟಿಟ್ಯೂಡ್ ಮತ್ತು ಮಾಸ್ ಎನರ್ಜಿ... ಪಕ್ಕಾ ಕಾವೇರಿದೆ.. ಜನ್ಮದಿನದ ಶುಭಾಶಯಗಳು ಯಶ್" ಎಂದು ಸಂದೀಪ್ ರೆಡ್ಡಿ ವಂಗಾ ಹೇಳಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ಟ್ವೀಟ್
ಆರ್‌ಜಿವಿಯಿಂದ ಮೆಚ್ಚುಗೆಯ ಟ್ವೀಟ್
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಟಾಕ್ಸಿಕ್‌ಗೆ ಮನಸಾರೆ ಹೊಗಳಿದ್ದಾರೆ. "ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಅವರ ಅವತಾರ ಮತ್ತು ಟ್ರೈಲರ್ ನೋಡಿದ ಮೇಲೆ, ಗೀತು ಮೋಹನ್‌ದಾಸ್ ಅವರು 'ಮಹಿಳಾ ಸಬಲೀಕರಣ'ದ ಪರಮ ಸಂಕೇತ ಎನ್ನುವುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ.. ಈ ಮಹಿಳಾ ನಿರ್ದೇಶಕಿಯ ಶಕ್ತಿಗೆ ಹೋಲಿಸಿದರೆ ಯಾವ ಪುರುಷ ನಿರ್ದೇಶಕರೂ ಸಾಟಿಯಿಲ್ಲ.. ಅವರು ಈ ಮಟ್ಟಕ್ಕೆ ಚಿತ್ರೀಕರಿಸಿದ್ದಾರೆ ಎನ್ನುವುದನ್ನು ನಂಬಲು ಈಗಲೂ ಸಾಧ್ಯವಾಗುತ್ತಿಲ್ಲ" ಎಂದು ಆರ್‌ಜಿವಿ ಹೊಗಳಿದ್ದಾರೆ.
ರಾಮ್ ಗೋಪಾಲ್ ವರ್ಮಾ ಟ್ವೀಟ್
ಸಂದೀಪ್ ರೆಡ್ಡಿ ವಂಗಾ, ರಾಮ್ ಗೋಪಾಲ್ ವರ್ಮಾ ಮಾತ್ರವಲ್ಲ, ಬಾಲಿವುಡ್‌ನ ಕರಣ್ ಜೋಹರ್ ಅವರಿಂದಲೂ ಟಾಕ್ಸಿಕ್‌ಗೆ ಮೆಚ್ಚುಗೆ ಸಿಕ್ಕಿದೆ. "ವಾವ್!!!! ಎಂತಹ ಅದ್ಭುತ ಜನ್ಮದಿನದ ಘೋಷಣೆ !!! ನಿಜಕ್ಕೂ ರಾಕಿಂಗ್ ಆಗಿದೆ! ಯಶ್ ಜನ್ಮದಿನದ ಶುಭಾಶಯಗಳು, ಇದು ಅಕ್ಷರಶಃ ಧೂಳೆಬ್ಬಿಸುವಂತಿದೆ!" ಎಂದು ಕರಣ್ ಜೋಹರ್ ಹೇಳಿದ್ದಾರೆ. ಸದ್ಯ ಈ ಟೀಸರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 6 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.