ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಪಾನ್ ಓಪನ್‌ನಲ್ಲಿ ಐತಿಹಾಸಿಕ ಜಯ; ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧುಗೆ ಸ್ಪೆಷಲ್‌ ಗಿಫ್ಟ್ ‌ಕಳುಹಿಸಿ ಅಭಿನಂದಿಸಿದ 'ಕಿಚ್ಚ' ಸುದೀಪ್!

ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ-2026ರ ಫೈನಲ್‌ನಲ್ಲಿ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಭರ್ಜರಿ ಜಯ ಸಾಧಿಸಿ, 19 ತಿಂಗಳ ಪ್ರಶಸ್ತಿ ಬರ ನೀಗಿಸಿಕೊಂಡ ಪಿ.ವಿ. ಸಿಂಧು ಅವರಿಗೆ ನಟ 'ಕಿಚ್ಚ' ಸುದೀಪ್ ಕೈಬರಹದ ಪತ್ರ ಹಾಗೂ ಗಿಫ್ಟ್ ಹ್ಯಾಂಪರ್ ಕಳುಹಿಸಿ ಅಭಿನಂದಿಸಿದ್ದಾರೆ.

ಟೋಕಿಯೊದಲ್ಲಿ ನಡೆದ ಪ್ರತಿಷ್ಠಿತ 'ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ-2026'ರಲ್ಲಿ ಭರ್ಜರಿ ಗೆಲುವು ಸಾಧಿಸಿ, ಭಾರತೀಯ ಕ್ರೀಡಾರಂಗದಲ್ಲಿ ಹೊಸ ಇತಿಹಾಸ ಬರೆದಿರುವ ಚಾಂಪಿಯನ್ ಆಟಗಾರ್ತಿ ಪಿ.ವಿ. ಸಿಂಧು ಅವರಿಗೆ ದೇಶಾದ್ಯಂತ ಅಭಿನಂದನೆಗಳ ಹೊಳೆ ಹರಿದುಬರುತ್ತಿದೆ. ಈ ಐತಿಹಾಸಿಕ ಸಾಧನೆಯನ್ನು ಸಂಭ್ರಮಿಸಿರುವ ಅಭಿನಯ ಚಕ್ರವರ್ತಿ, ನಟ 'ಕಿಚ್ಚ' ಸುದೀಪ್ ಅವರು ಸಿಂಧು ಅವರಿಗೆ ವಿಶೇಷ ಉಡುಗೊರೆ ಕಳುಹಿಸುವ ಮೂಲಕ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಅಭಿಮಾನ ಹಾಗೂ ಗೌರವದ ಸಂಕೇತವಾಗಿ ಕಿಚ್ಚ ಸುದೀಪ್ ಅವರು ವಿಶೇಷವಾಗಿ ಸಿದ್ಧಪಡಿಸಿದ 'ಗಿಫ್ಟ್ ಹ್ಯಾಂಪರ್' ಹಾಗೂ ಸ್ವತಃ ಕೈಯಾರೆ ಬರೆದ ಭಾವಪೂರ್ಣ ಪತ್ರವನ್ನು ಕಳುಹಿಸಿಕೊಟ್ಟು ಭಾರತದ ಹೆಮ್ಮೆಯ ಕ್ರೀಡಾಪಟುವನ್ನು ಗೌರವಿಸಿದ್ದಾರೆ.

ಪತ್ರದಲ್ಲಿ ಕಿಚ್ಚ ಸುದೀಪ್ ಬರೆದಿರುವುದೇನು?

"ಗೌರವಾನ್ವಿತ ಸಿಂಧು ಅವರೇ, ಜಪಾನ್ ಓಪನ್‌ನಲ್ಲಿ ಐತಿಹಾಸಿಕ ಗೆಲುವು ಪಡೆದುಕೊಂಡು, ದಾಖಲೆ ನಿರ್ಮಿಸಿದ ನಿಮಗೆ ಹಾರ್ದಿಕ ಅಭಿನಂದನೆಗಳು. ನಮ್ಮ ದೇಶವನ್ನು ಮತ್ತೊಮ್ಮೆ ಜಾಗತಿಕ ಭೂಪಟದಲ್ಲಿ ಉನ್ನತ ಮಟ್ಟದಲ್ಲಿ ನಿಲ್ಲಿಸಿದ್ದಕ್ಕಾಗಿ ಪ್ರತಿಯೊಬ್ಬ ಕನ್ನಡಿಗರ ಪರವಾಗಿ ನಿಮಗೆ ಧನ್ಯವಾದಗಳು. ನೀವು ಯಾವಾಗಲೂ ಕೋಟ್ಯಂತರ ಜನರಿಗೆ ಸ್ಪೂರ್ತಿಯಾಗಿದ್ದೀರಿ" ಎಂದು ಸುದೀಪ್‌ ಬರೆದುಕೊಂಡಿದ್ದಾರೆ.

ಧನ್ಯವಾದ ಅರ್ಪಿಸಿದ ಪಿ.ವಿ. ಸಿಂಧು

ನಟ ಸುದೀಪ್ ಅವರ ಈ ಪ್ರೀತಿ ಹಾಗೂ ಗೌರವಕ್ಕೆ ಅಭಾರಿಯಾಗಿರುವ ಪಿ.ವಿ. ಸಿಂಧು, ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಉಡುಗೊರೆ ಹಾಗೂ ಕೈಬರಹದ ಪತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಕಿಚ್ಚ ಸುದೀಪ್ ಅವರಿಗೆ ತಾಯ್ತುಂಬಿದ ಧನ್ಯವಾದಗಳನ್ನು ತಿಳಿಸಿದ್ದಾರೆ.

Rajath Kishan, BBK 11: ಸುದೀಪ್-ದರ್ಶನ್ ಒಂದಾದ್ರೆ ತಿರುಪತಿಗೆ ಹೋಗಿ ತಲೆ ಬೋಳಿಸ್ತೀನಿ ಎಂದ ರಜತ್

ಕ್ರೀಡಾಪಟುಗಳ ಪ್ರೋತ್ಸಾಹದಲ್ಲಿ ಮುಂಚೂಣಿಯಲ್ಲಿ ಸುದೀಪ್

ಕಿಚ್ಚ ಸುದೀಪ್ ಅವರು ಕೇವಲ ಚಿತ್ರರಂಗಕ್ಕಷ್ಟೇ ಸೀಮಿತವಾಗದೆ, ಕ್ರೀಡಾರಂಗದಲ್ಲೂ ಸದಾ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವಲ್ಲಿ ಮತ್ತು ಅವರ ಸಾಧನೆಗಳನ್ನು ಮುಕ್ತಕಂಠದಿಂದ ಶ್ಲಾಘಿಸುವಲ್ಲಿ ಸುದೀಪ್ ಎಂದಿಗೂ ಮುಂಚೂಣಿಯಲ್ಲಿರುತ್ತಾರೆ. ಇದೀಗ ಭಾರತದ ಕ್ರೀಡಾರತ್ನ ಪಿ.ವಿ. ಸಿಂಧು ಅವರ ಸಾಧನೆಯನ್ನು ಗೌರವಿಸಿದ ಸುದೀಪ್ ಅವರ ಈ ನಡೆ, ಕನ್ನಡಿಗರು ಹಾಗೂ ಕ್ರೀಡಾಭಿಮಾನಿಗಳ ಮನ ಗೆದ್ದಿದೆ.‌

Rishab Shetty: ಏಕಾಏಕಿ ಕಿಚ್ಚ ಸುದೀಪ್‌ ಭೇಟಿ ಮಾಡಿದ ರಿಷಬ್‌ ದಂಪತಿ! ಏನಿದು ಮ್ಯಾಟರ್‌?

19 ತಿಂಗಳ ಪ್ರಶಸ್ತಿ ಬರ ನೀಗಿಸಿಕೊಂಡು ಸಿಂಧು ಐತಿಹಾಸಿಕ ದಾಖಲೆ!

2026 ರ ಜುಲೈ 19 ರಂದು ಟೋಕಿಯೊದಲ್ಲಿ ನಡೆದ ಜಪಾನ್ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದ ಅತ್ಯಂತ ರೋಚಕ ಫೈನಲ್ ಪಂದ್ಯದಲ್ಲಿ ಪಿ.ವಿ. ಸಿಂಧು ಅವರು ಜಪಾನ್‌ನ ಪ್ರಬಲ ಆಟಗಾರ್ತಿ ಅಕಾನೆ ಯಮಗುಚಿ ವಿರುದ್ಧ ಭರ್ಜರಿ ಜಯ ದಾಖಲಿಸಿದರು. ಈ ಗೆಲುವಿನ ಮೂಲಕ ಸಿಂಧು ಅವರು ತಮ್ಮ ಸುಮಾರು 19 ತಿಂಗಳ ಪ್ರಶಸ್ತಿ ಬರವನ್ನು ನೀಗಿಸಿಕೊಂಡು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿಹಿಡಿದಿದ್ದಾರೆ.