ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಮಾರ್ಕ್ʼ ಬಾಕ್ಸ್‌ ಆಫೀಸ್‌ ಕಲೆಕ್ಷನ್; 2 ವಾರಕ್ಕೆ ‌ʻಕಿಚ್ಚʼ ಸುದೀಪ್‌ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?

Mark movie box office: ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಕೇವಲ ಎರಡು ವಾರಗಳಲ್ಲಿ 51.30 ಕೋಟಿ ರೂಪಾಯಿ ಗಳಿಸಿ ಭರ್ಜರಿ ಯಶಸ್ಸು ಕಂಡಿದೆ. ಸತ್ಯಜ್ಯೋತಿ ಫಿಲ್ಮ್ಸ್‌ಗೆ‌ ಕನ್ನಡಕ್ಕೆ ಅದ್ಧೂರಿ ಕಮ್‌ ಬ್ಯಾಕ್‌ ನೀಡಿರುವ ಈ ಚಿತ್ರ, ಬೆಂಗಳೂರಿನಲ್ಲಿ ಮೂರನೇ ವಾರವೂ 250ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಾಣುತ್ತಿದೆ.

ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚನ ಆರ್ಭಟ; 50 ಕೋಟಿ ರೂ. ಗಡಿ ದಾಟಿದ 'ಮಾರ್ಕ್'!

-

Avinash GR
Avinash GR Jan 9, 2026 2:59 PM

‌ʻಕಿಚ್ಚʼ ಸುದೀಪ್ ಅಭಿನಯದ ʻಮಾರ್ಕ್ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ಸದ್ಯ ಮೊದಲ ಎರಡು ವಾರಗಳಿಗೆ ಈ ಸಿನಿಮಾ ಎಷ್ಟು ಗಳಿಕೆ ಮಾಡಿದೆ ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದ್ದು, ಡಿಸೆಂಬರ್‌ ವಿನ್ನರ್‌ ಯಾರು ಎಂಬ ಬಗ್ಗೆ ಸಿನಿಪ್ರಿಯರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಸದ್ಯ ಮಾರ್ಕ್‌ ಚಿತ್ರದ ಎರಡು ವಾರಗಳ ಗಳಿಕೆ ಎಷ್ಟು ಎಂಬುದಕ್ಕೆ ಚಿತ್ರತಂಡದ ಮೂಲಗಳು ಮಾಹಿತಿ ನೀಡಿವೆ.

50 ಕೋಟಿ ರೂ. ಕ್ರಾಸ್‌ ಮಾಡಿದ ಮಾರ್ಕ್‌

ಮೂಲಗಳ ಪ್ರಕಾರ, ಮಾರ್ಕ್‌ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ 50 ಕೋಟಿ ರೂ. ಕ್ರಾಸ್‌ ಮಾಡಿದೆ. ಹೌದು, 2 ವಾರಗಳಲ್ಲಿ ಈ ಸಿನಿಮಾವು ಸುಮಾರು 51.30 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂಬ ಮಾತು ಚಿತ್ರತಂಡದ ಮೂಲಗಳಿಂದ ಕೇಳಬಂದಿದೆ. ಮ್ಯಾಕ್ಸ್‌ ನಂತರ ಸುದೀಪ್‌ ಮತ್ತು ವಿಜಯ್‌ ಕಾರ್ತಿಕೇಯನ್‌ ಅವರ ಕಾಂಬಿನೇಷನ್‌ ವರ್ಕ್‌ ಆಗಿದೆ ಎಂದೇ ಹೇಳಬಹುದು. ಸತ್ಯಜ್ಯೋತಿ ಫಿಲ್ಮ್ಸ್‌ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಹಲವು ವರ್ಷಗಳ ನಂತರ ಸ್ಯಾಂಡಲ್‌ವುಡ್‌ಗೆ ಈ ಸಂಸ್ಥೆ ಕಮ್‌ ಬ್ಯಾಕ್‌ ಮಾಡಿತ್ತು.

ಶುರುವಾಯ್ತು 'ಮಾರ್ಕ್‌' - '45' ಸಿನಿಮಾಗಳ ಅಡ್ವಾನ್ಸ್‌ ‌ಟಿಕೆಟ್‌ ಬುಕಿಂಗ್;‌ ಇಲ್ಲೊಂದು ಸಣ್ಣ ಟ್ವಿಸ್ಟ್‌ ಇದೆ, ನೀವು ಅದನ್ನು ಗಮನಿಸಿದ್ರಾ?

ಬೆಂಗಳೂರಿನಲ್ಲಿ ಈಗಲು 250+ ಶೋಗಳು

ಸಿನಿಮಾದಲ್ಲಿನ ಹೈ-ವೋಲ್ಟೇಜ್ ಆಕ್ಷನ್ ದೃಶ್ಯಗಳು, ಭಾವನಾತ್ಮಕ ಎಳೆ ಮತ್ತು ಪಕ್ಕಾ ಮನರಂಜನೆಯನ್ನು ಹೊಂದಿರುವ ಮಾರ್ಕ್‌ ಸಿನಿಮಾ, ಇತ್ತ ಮಾಸ್ ಪ್ರೇಕ್ಷಕರಿಗೂ ಅತ್ತ ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾಗಿತ್ತು. ಈ ಸಿನಿಮಾವು 3ನೇ ವಾರಕ್ಕೆ ಕಾಲಿಟ್ಟರೂ ಚಿತ್ರದ ವೇಗ ಕುಗ್ಗಿಲ್ಲ. ಬೆಂಗಳೂರಿನಲ್ಲಿ ಈಗಳು ಈ ಸಿನಿಮಾಗೆ 250+ ಶೋಗಳು ಸಿಕ್ಕಿವೆ.

Mark Trailer : ಕಿಚ್ಚ ಸುದೀಪ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌! ಬರ್ತಿದೆ ‘ಮಾರ್ಕ್‌’ ಟ್ರೈಲರ್, ಯಾವಾಗ?

ಬಹುತಾರಾಗಣದ ಸಿನಿಮಾ ಇದು

ಮಾರ್ಕ್‌ ಸಿನಮಾದಲ್ಲಿ ಸುದೀಪ್‌ ಅವರ ಜೊತೆಗೆ ರೋಶಿಣಿ ಪ್ರಕಾಶ್‌, ಅರ್ಚನಾ ಕೊಟ್ಟಿಗೆ, ನವೀನ್‌ ಚಂದ್ರ, ಪ್ರತಾಪ್‌ ನಾರಾಯಣ್‌, ರಘು ರಾಮನಕೊಪ್ಪ, ಗೋಪಾಲ್‌ ಕೃಷ್ಣ ದೇಶಪಾಂಡೆ ಹಾಗೂ ತಮಿಳು ನಟರಾದ ವಿಕ್ರಾಂತ್‌, ಗುರು ಸೋಮಸುಂದರಂ, ದೀಪ್ಶಿಕಾ, ಯೋಗಿ ಬಾಬು ಮುಂತಅದವರು ನಟಿಸಿದ್ದರು. ಅಜನೀಶ್‌ ಲೋಕನಾಥ್‌ ಅವರ ಸಂಗೀತ ಈ ಚಿತ್ರಕ್ಕಿತ್ತು. ಶೇಖರ್‌ ಚಂದ್ರ ಅವರು ಛಾಯಾಗ್ರಹಣ ಮಾಡಿದ್ದು, ಅದ್ದೂರಿಯಾಗಿ ನಿರ್ಮಾಣ ಮಾಡಲಾಗಿತ್ತು.