ನಟ ಕಮಲ್ ಹಾಸನ್ (Kamal Hassan) ಕನ್ನಡ ಭಾಷೆ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಯ ಕಿಚ್ಚು ಇನ್ನೂ ಕಡಿಮೆಯಾಗಿಲ್ಲ. ತಮಿಳು ಸಿನಿಮಾ ಥಗ್ ಲೈಪ್ ಆಡಿಯೋ ಲಾಂಚ್ ಕಾರ್ಯಕ್ರಮವು ಚೆನ್ನೈನಲ್ಲಿ ಇತ್ತೀಚೆಗೆ ನಡೆದಿತ್ತಿತ್ತು. ಆ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್ ಕೂಡ ಭಾಗವಹಿಸಿದ್ದರು. ಆ ವೇಳೆ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಕಮಲ್ ಹಾಸನ್ ಹೇಳಿಕೆ ನೀಡಿದರು. ಇದಕ್ಕೆ ಕರ್ನಾಟಕದಲ್ಲಿ ದೊಡ್ಡಮಟ್ಟಲ್ಲಿ ವಿರೋಧ ವ್ಯಕ್ತವಾಯಿತು. ಅಷ್ಟೇ ಅಲ್ಲದೆ ಶಿವರಾಜ್ ಕುಮಾರ್ ಬಗ್ಗೆ ಕೂಡ ಪ್ರಶ್ನೆ ಎತ್ತಲಾಯಿತು.
ಶಿವರಾಜ್ ಕುಮಾರ್ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲೇ ಈರೀತಿ ಕಮಲ್ ಮಾತನಾಡಿದ್ದರು. ಹೀಗಾಗಿ, ಕಮಲ್ ಅವರು ಕ್ಷಮೆ ಕೇಳುವಂತೆ ಶಿವರಾಜ್ ಕುಮಾರ್ ಅವರು ಒತ್ತಾಯಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು. ಈ ಕುರಿತು ಇದೀ ಕಿಚ್ಚ ಸುದೀಪ್ ಮಾತನಾಡಿದ್ದು, ಕಮಲ್ ಹಾಸನ್ ವಿಚಾರದಲ್ಲಿ ಶಿವಣ್ಣನ ಬಗ್ಗೆ ತುಂಬಾ ಮಾತಾಡಿದ್ರಿ.. ಹಾಗೆ ಮಾಡಬಾರದಿತ್ತು ಎಂದು ಹೇಳಿದ್ದಾರೆ.
ರಿಪಬ್ಲಿಕ್ ಕನ್ನಡದ ಸಂಗಮ 2025 ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್, ಶಿವಣ್ಣನ ಬಗ್ಗೆ ಎಲ್ಲರೂ ತುಂಬಾ ಮಾತನಾಡಿದ್ರು, ಅವರು ಹೇಳಬಹುದಿತ್ತು.. ಮಾತನಾಡಬಹುದಿತ್ತು ಅಂತೆಲ್ಲ ಹೇಳಿದ್ರು.. ಆದ್ರೆ ಶಿವಣ್ಣನಂತಹ ಮೃದುವಾದ ಮಗುವಿನಂತಹ ವ್ಯಕ್ತಿಯನ್ನು ನಾನು ಇದುವರೆಗೆ ನೋಡಿಲ್ಲ. ಅಲ್ಲೇನೊ ಹೇಳ್ತಾ ಇರುತ್ತಾರೆ ಅಂದಾಗ ಅವರಿಗೆ ಸಡನ್ ಆಗಿ ಏನು ರಿಯಾಕ್ಟ್ ಮಾಡಬೇಕು ಎಂಬುದು ಗೊತ್ತಾಗಲ್ಲ. ಅವರಿಗೆ ಹುಷಾರಿರಲಿಲ್ಲ.. ಅಷ್ಟು ದೊಡ್ಡ ತೊಂದರೆ ಇಟ್ಟುಕೊಂಡು.. ಅದರ ವಿರುದ್ಧ ಹೋರಾಡಿ ವಿದೇಶಕ್ಕೆ ಹೋಗಿ ಗುಣಮುಖರಾಗಿ ಹುಮ್ಮಸ್ಸಿನಿಂದ ನಮ್ಮ ಚಿತ್ರರಂಗಕ್ಕೆ.. ನಮ್ಮ ರಾಜ್ಯಕ್ಕೆ ಬಂದರು ಆ ಟೈಮ್ನಲ್ಲಿ ಕಮಲ್ ಹಾಸನ್ ವಿಚಾರದಲ್ಲಿ ಶಿವರಾಜ್ ಕುಮಾರ್ ಬಗ್ಗೆ ಮಾತನಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
Kiccha Sudeep: ಡಿಕೆ ಶಿವಕುಮಾರ್ ನಟ್ಟು-ಬೋಲ್ಟ್ ಹೇಳಿಕೆಗೆ ಖಡಕ್ ತಿರುಗೇಟು ಕೊಟ್ಟ ಕಿಚ್ಚ ಸುದೀಪ್
ಶಿವಣ್ಣನ ಮೇಲೆ ಟಾರ್ಗೆಟ್ ಮಾಡಿದ್ದು ಸರಿಯಲ್ಲ. ಶಿವಣ್ಣನ ಆ ಕಾರ್ಯಕ್ರಮಕ್ಕೆ ಕರೆದರು.. ಅವರು ಅಲ್ಲಿಗೆ ಹೋದ್ರು.. ಕೆಲವು ಸಲ ಅಂತಹದ ವೇದಿಕೆ ಮೇಲೆ ಮಾತನಾಡಿದಾಗ ಕೆಳಗೆ ಕುಳಿತುಕೊಂಡವರಿಗೆ ಕೇಳಿಸಲ್ಲ.. ಈಗ ಮನೆ ಅತಿಥಿಯಾಗಿ ಹೋದಾಗ ಅಲ್ಲಿ ಈ ಒಂದು ವಿಚಾರದ ಬಗ್ಗೆ ಹೇಳೋಕೆ ಸರಿ ಆಗದೆಯೂ ಇರಬಹುದು.. ಬಳಿಕ ಮತ್ತೊಂದು ವಾಹಿನಿ ಮೂಲಕ ಹೇಳಿರಬಹುದು.. ಶಿವಣ್ಣನ ಕಾಪಾಡುದು ನಮ್ಮ ಧರ್ಮ, ಈಗಾಗಲೇ ನಾವು ಅನೇಕರನ್ನು ಕಳೆದುಕೊಂಡಿದ್ದೇವೆ.. ನಮಗೆ ಶಿವಣ್ಣ ಬೇಕು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.