Kichcha Sudeep: ಅಧಿಕ ಪ್ರಸಂಗ ಬೇಡ: ಪತ್ರಕರ್ತನ ಬೆವರಿಳಿಸಿದ ಕಿಚ್ಚ ಸುದೀಪ್
ಸಿಸಿಎಲ್ ಆರಂಭ ಆಗುವುದಕ್ಕೂ ಮುನ್ನ ಕಿಚ್ಚ ಸುದೀಪ್ ತಮ್ಮ ತಂಡವನ್ನು ಪರಿಚಯಿಸಿಕೊಡಲು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಈ ವೇಳೆ ಪತ್ರಕರ್ತರ ವಿರುದ್ಧ ಸುದೀಪ್ ಗರಂ ಆದ ಪ್ರಸಂಗ ನಡೆದಿದೆ. ಕಿಚ್ಚ ಸುದೀಪ್ ಅವರನ್ನು ಕೋಪ ತರಿಸಿದ ಆ ಮಾತು ಏನು?, ಇಲ್ಲಿದೆ ನೋಡಿ ಮಾಹಿತಿ.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಕ್ತಾಯಗೊಂಡಿದೆ. ಈ ಮೂಲಕ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆಗೆ ಗುಡ್ ಬೈ ಹೇಳಿದ್ದಾರೆ. ಮುಂದಿನ ಸೀಸನ್ನಿಂದ ಇವರು ಶೋ ನಡೆಸಿಕೊಡುವುದಿಲ್ಲ. ಇದೀಗ ಬಿಬಿಕೆ 11 ಮುಕ್ತಾಯದ ಬೆನ್ನಲ್ಲೇ ಸುದೀಪ್ ಮತ್ತೊಂದು ಕೆಲಸಕ್ಕೆ ಇಳಿದಿದ್ದಾರೆ. ಅದುವೇ ಸಿಸಿಎಲ್. ಕಿಚ್ಚ ಸುದೀಪ್ ಬಿಗ್ ಬಾಸ್ ಬಳಿಕ ಸೆಲೆಬ್ರಿಟಿ ಕ್ರಿಕೆಟ್ ಲೀಗ್ಗೆ ಸಜ್ಜಾಗಿದ್ದಾರೆ. ಫೆಬ್ರವರಿ 8ರಿಂದ ಅದ್ಧೂರಿಯಾಗಿ ಸಿಸಿಎಲ್ ಪಂದ್ಯಾವಳಿಗಳು ಬೆಂಗಳೂರಿನಲ್ಲಿ ಆರಂಭ ಆಗಲಿವೆ.
ಈಗಾಗಲೇ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ ತಂಡ ಅಭ್ಯಾಸ ಪಂದ್ಯವನ್ನು ಆರಂಭಿಸಿದೆ. ಬಿಡುವಿಲ್ಲದೆ ಪ್ರಾಕ್ಟೀಸ್ ಅನ್ನು ಶುರು ಮಾಡುತ್ತಿದೆ. ಇದೇ ಗ್ಯಾಪ್‌ನಲ್ಲಿ ಈ ಬಾರಿ ಆಡುತ್ತಿರುವ ತಂಡದ ಪರಿಚಯವನ್ನೂ ಮಾಡಿಕೊಡಲಾಗಿದೆ. ಸಿಸಿಎಲ್ ಆರಂಭ ಆಗುವುದಕ್ಕೂ ಮುನ್ನ ಕಿಚ್ಚ ಸುದೀಪ್ ತಮ್ಮ ತಂಡವನ್ನು ಪರಿಚಯಿಸಿಕೊಡಲು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಈ ವೇಳೆ ಪತ್ರಕರ್ತರ ವಿರುದ್ಧ ಸುದೀಪ್ ಗರಂ ಆದ ಪ್ರಸಂಗ ನಡೆದಿದೆ.
ಇತ್ತೀಚೆಗೆ ಸುದೀಪ್ ರಾಜ್ಯ ಸರ್ಕಾರ ಕೊಡಮಾಡುವ ರಾಜ್ಯ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು. ಇದೇ ವಿಚಾರವಾಗಿ ಸಿಸಿಎಲ್ ಪ್ರೆಸ್ ಮೀಟ್‌ನಲ್ಲಿ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದು, ಕಿಚ್ಚ ಅವರನ್ನು ಗರಂ ಆಗುವಂತೆ ಮಾಡಿದೆ. ರಾಜ್ಯ ಪ್ರಶಸ್ತಿಯನ್ನು ಯಾಕೆ ನಿರಾಕರಿಸಿದ್ದೀರಿ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಕಿಚ್ಚ "ಅದು ಸಿಸಿಎಲ್ ಕಪ್ ಅಲ್ವಲ್ಲ. ರಾಜ್ಯ ಪ್ರಶಸ್ತಿ ಸಿಸಿಎಲ್ ಕಪ್ ಅಲ್ಲ ಅಂತ ಅಂದೆ ಅಷ್ಟೇ. ಇಲ್ಲಿ ರಾಜ್ಯ ಪ್ರಶಸ್ತಿ ಸಂದರ್ಶನ ಅಂತ ಏನಾದರೂ ಇದೆಯಾ? ಎಲ್ಲಿ ಏನು ಮಾತಾಡಬೇಕೋ ಅದನ್ನು ಮಾತಾಡಬೇಕು. ಅಲ್ಲಿ ಒಂದು ಪತ್ರ ಬರೆದಿದ್ದೇನೆ. ಆ ಪತ್ರವನ್ನು ಇನ್ನೊಂದು ಸಾರಿ ಕನ್ನಡದಲ್ಲಿ ತರ್ಜುಮೆ ಮಾಡಿ ಹೇಳುತ್ತೇನೆ. ಅದರ ಮೇಲೆ ಪ್ರಶ್ನೆಗಳೇ ಬರಬಾರದು. ಅದು ನನ್ನ ವೈಯಕ್ತಿಕ. ಆ ಪ್ರಶ್ನೆ ಕೇಳುವ ವೇದಿಕೆ ಇದಲ್ಲ" ಎಂದು ಕೋಪದಿಂದ ಪ್ರತಿಕ್ರಿಯಿಸಿದ್ದಾರೆ.
ಸಿಸಿಎಲ್ 2025ರ ಪಂದ್ಯಗಳು ಫೆಬ್ರವರಿ 8ರಿಂದ ಬೆಂಗಳೂರಿನಿಂದ ಆರಂಭ ಆಗುತ್ತಿದೆ. ಪ್ರತಿ ವೀಕೆಂಡ್‌ನಲ್ಲೂ ಪಂದ್ಯಗಳನ್ನು ನಡೆಯಲಿವೆ. ಈ ಬಾರಿಯ ಬೆಂಗಳೂರಿನಲ್ಲೇ ಸಿಸಿಎಲ್ಗೆ ಚಾಲನೆ ಸಿಗಲಿದೆ. ಫೆಬ್ರವರಿ 8 ರಂದು ಹೈದ್ರಾಬಾದ್ ವಿರುದ್ದ ಕರ್ನಾಟಕ ಬುಲ್ಡೋಜರ್ಸ್ ಸೆಣಸಾಡಲಿದೆ.
Hanumantha, BBK 11: ಹುಟ್ಟೂರಿನಲ್ಲಿ ಹನುಂತನಿಗೆ ಅದ್ಧೂರಿ ಸ್ವಾಗತ: ಹನುಮನ ನೋಡಲು ಸೇರಿದ ಸಾವಿರಾರು ಅಭಿಮಾನಿಗಳು