ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Jyothi Rai: ʻದಕ್ಷಿಣ ಭಾರತದ ನಿರ್ದೇಶಕರು ಪ್ಯಾಡೆಡ್ ಬ್ರಾ ಧರಿಸಲು ಒತ್ತಾಯಿಸ್ತಾರೆʼ ಎಂದಿದ್ದ ನಟಿ ತಾಪ್ಸೀ ಪನ್ನುಗೆ ʻಕನ್ನಡತಿʼ ಜ್ಯೋತಿ ರೈ ತಿರುಗೇಟು

Taapsee Pannu Controversy: ದಕ್ಷಿಣ ಭಾರತದ ನಿರ್ದೇಶಕರು ನಟಿಯರು ಗ್ಲಾಮರಸ್ ಆಗಿ ಕಾಣಲು ಪ್ಯಾಡೆಡ್ ಬ್ರಾ ಧರಿಸುವಂತೆ ಒತ್ತಾಯಿಸುತ್ತಾರೆ ಹಾಗೂ ಹೊಕ್ಕಳಿನ ಮೇಲೆ ವಿಶೇಷ ವ್ಯಾಮೋಹ ಹೊಂದಿದ್ದಾರೆ ಎಂಬ ನಟಿ ತಾಪ್ಸೀ ಪನ್ನು ಆರೋಪಕ್ಕೆ ಕನ್ನಡ ನಟಿ ಜ್ಯೋತಿ ರೈ ಖಡಕ್ ತಿರುಗೇಟು ನೀಡಿದ್ದಾರೆ.

ನಟಿ ತಾಪ್ಸೀ ಪನ್ನು ಅವರು ಕೆಲ ದಿನಗಳ ಹಿಂದಷ್ಟೇ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಕೆಲವೊಂದಿಷ್ಟು ಹೇಳಿಕೆಗಳನ್ನು ನೀಡಿದ್ದರು. ಅದು ಭಾರಿ ಸಂಚಲನ ಮೂಡಿಸಿತ್ತು. "ದಕ್ಷಿಣದ ಸಿನಿಮಾಗಳಲ್ಲಿ ನಟಿಯರನ್ನು ತುಂಬಾ ಗ್ಲಾಮರಸ್ ಆಗಿ ತೋರಿಸಲು ಪ್ಯಾಡೆಡ್ ಬ್ರಾ ಧರಿಸುವಂತೆ ನಟಿಯರಿಗೆ ನಿರ್ದೇಶಕರು ಒತ್ತಾಯ ಮಾಡ್ತಾರೆ" ಎಂದು ನೇರ ಆರೋಪವನ್ನು ತಾಪ್ಸೀ ಮಾಡಿದ್ದರು. ಆದರೆ, ಈ ಬಗ್ಗೆ ಸ್ಯಾಂಡಲ್‌ವುಡ್‌ ನಟಿ ಜ್ಯೋತಿ ರೈ ಅವರು ತಿರುಗೇಟು ನೀಡಿದ್ದಾರೆ. "ಇಷ್ಟವಿಲ್ಲದಿದ್ದರೇ, ಕೆಲಸವನ್ನೇ ಮಾಡಬಾರದಿತ್ತು" ಎಂದು ಟಾಂಗ್‌ ನೀಡಿದ್ದಾರೆ.

ತಾಪ್ಸೀ ಹೇಳಿದ್ದೇನು?

"ನಟಿಯರು ಗ್ಲಾಮರಸ್‌ ಆಗಿ ಕಾಣಲು ಪ್ಯಾಡೆಡ್ ಬ್ರಾ ಧರಿಸುವಂತೆ ನಟಿಯರಿಗೆ ದಕ್ಷಿಣ ಭಾರತದ ನಿರ್ದೇಶಕರು ಒತ್ತಾಯ ಮಾಡ್ತಾರೆ. ಅದರಲ್ಲೂ ಸೆಟ್‌ನಲ್ಲಿ ಹುಡುಗಿಯರು ಹೆಚ್ಚಾಗಿ ಇರುತ್ತಿರಲಿಲ್ಲ. ಹಾಗಾಗಿ, ಅಸಿಸ್ಟೆಂಟ್ಸ್‌ಗೆ ಡೈರೆಕ್ಟರ್ ಈ ವಿಷಯವನ್ನು ಹೇಳುತ್ತಿದ್ದರು. ಅವರು ಸ್ಟೈಲಿಸ್ಟ್‌ಗಳಿಗೆ ತಿಳಿಸುತ್ತಿದ್ದರು. ನಂತರ ಅದು ನಮಗೆ ತಿಳಿಯುತ್ತಿತ್ತು. ಚಿತ್ರೀಕರಣ ನಡೆಯುವಾಗ ನಡುವೆ ಹೋಗಿ ಬಟ್ಟೆ ಬದಲಿಸಿ ಬರುವುದು ತುಂಬಾ ಮುಜುಗುರ ಉಂಟು ಮಾಡುತ್ತದೆ. ಆದರೆ ಅದನ್ನು ಅವರು ಎಂದಿಗೂ ಯೋಚಿಸುವುದಿಲ್ಲ" ಎಂದಿದ್ದರು ತಾಪ್ಸೀ.

Jyothi Rai: ಮಾದಕ ಚೆಲುವೆ ಜ್ಯೋತಿ ರೈ ಬಿಗ್ ಬಾಸ್ ಮನೆಗೆ ಎಂಟ್ರಿ?

ನಂತರ ಮುಂದುವರಿದು, "ದಕ್ಷಿಣ ಭಾರತದ ಚಿತ್ರರಂಗದವರಿಗೆ ಹುಡುಗಿಯರ ಹೊಕ್ಕಳಿನ ಮೇಲೆ ವಿಶೇಷ ಪ್ರೀತಿ ಇದೆ. ನಟಿಯರ ಹೊಕ್ಕಳ ಮೇಲೆಯೇ ಹೆಚ್ಚಿನ ಗಮನ ನೀಡುತ್ತಾರೆ. ದಕ್ಷಿಣದ ಭಾರತದ ಸಿನಿಮಾಗಳಲ್ಲಿ ಹೊಕ್ಕಳನ್ನು ತೋರಿಸುವುದೇ ಕಾಮದ ಪ್ರತೀಕ ಎಂಬಂತೆ ಬಿಂಬಿಸಲಾಗಿದೆ. ಅದು ಹೇಗೆ ಎಂಬುದು ನನಗೆ ಇಂದಿಗೂ ಅರ್ಥವಾಗದಿರುವ ವಿಷಯ" ಎಂದಿದ್ದರು ತಾಪ್ಸೀ.

ಜ್ಯೋತಿ ರೈ ಕೊಟ್ಟ ತಿರುಗೇಟು ಏನು?

ಈಚೆಗೆ ತೆಲುಗಿನ ಕಿಲ್ಲರ್‌ ಸಿನಿಮಾದಲ್ಲಿ ನಟಿಸಿರುವ ಜ್ಯೋತಿ ರೈ, ಅದರ ಟೀಸರ್‌ ರಿಲೀಸ್‌ ಇವೆಂಟ್‌ನಲ್ಲಿ ಮಾತನಾಡಿದ್ದು, "ನಿಮಗೆ ಇಷ್ಟವಿಲ್ಲದಿದ್ದರೆ, ಅದನ್ನು ಮಾಡದೇ ಇದ್ದರಾಯಿತು. ಯಾರು ನಿಮ್ಮನ್ನು ತಡೆಯೋಲ್ಲ, ಯಾರೂ ನಿಮ್ಮನ್ನು ಸಾಯಿಸೋಲ್ಲ. ಚಿತ್ರರಂಗದಲ್ಲಿ ಅವಕಾಶ ಬೇಕು ಎಂದರೆ, ಅದು ಮಾಡಬೇಕು, ಇದು ಮಾಡಬೇಕು ಎಂದು ಸಾಕಷ್ಟು ಮಾತುಗಳನ್ನು ಕೇಳಿದ್ದೇನೆ. ಆದರೆ, ನಾನು 15 ವರ್ಷಗಳಿಂದ ಕನ್ನಡ, ತೆಲುಗು, ತಮಿಳಿನಲ್ಲಿ ಕೆಲಸ ಮಾಡಿದ್ದೇನೆ. ನನಗೆ ಎಲ್ಲಿಯೂ ಅಂತಹ ಪರಿಸ್ಥಿತಿ ಎದುರಾಗಿಲ್ಲ" ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ ಜ್ಯೋತಿ ರೈ.

"ಈವರೆಗೂ ನನಗೆ ಕಾಲ್‌ಶೀಟ್‌, ಶೂಟಿಂಗ್‌ ಡೇಟ್ಸ್‌ಗೆ ಸಂಬಂಧಿಸಿದಂತೆ ಸಮಸ್ಯೆ ಆಗಿರಬಹುದು. ಆದರೆ ವೈಯಕ್ತಿಕವಾಗಿ ನನಗೆ ಯಾರೂ ಕಿರುಕುಳ ನೀಡಿಲ್ಲ. ಆ ವಿಚಾರದಲ್ಲಿ ನಾನು ಅದೃಷ್ಟವಂತೆ. ಪ್ರತಿಯೊಂದು ನಮ್ಮ ಆಯ್ಕೆಗಳಾಗಿರುತ್ತವೆ. ನೀವು ಶಿಕ್ಷಣ ಪಡೆದಿದ್ದೀರಿ, ನಿಮಗಿಷ್ಟವಾಗಿಲ್ಲ ಎಂದರೆ, ಬಿಟ್ಟು ಮುಂದೆ ಸಾಗಿ. ಬೇರೆ ಏನಾದರೂ ಕೆಲಸ ಮಾಡಿ. ನಾನು ಕೂಡ ಈವರೆಗೂ ಯಾರ ಒತ್ತಡಕ್ಕೂ ಕೆಲಸ ಮಾಡಿಲ್ಲ. ನನಗೆ ಇಷ್ಟವಿದ್ದಾಗ ನಾನು ಆಫರ್ಸ್‌ ಒಪ್ಪಿಕೊಂಡಿದ್ದೇನೆ. ನಾನು ಒಂದು ಸಮಯದಲ್ಲಿ ಧಾರಾವಾಹಿಗಳಿಗಾಗಿ ದಿನಕ್ಕೆ ಮೂರು ಕಾಲ್‌ಶೀಟ್‌ಗಳಲ್ಲಿ ಕೆಲಸ ಮಾಡುತ್ತಿದ್ದೆ" ಎಂದು ಜ್ಯೋತಿ ಹೇಳಿಕೊಂಡಿದ್ದಾರೆ.