Lahari Velu Son Marriage: ಲಹರಿ ವೇಲು ಪುತ್ರ ಅದ್ಧೂರಿ ವಿವಾಹ; ಇಲ್ಲಿವೆ ಫೋಟೋಸ್
Lahari Velu: ಲಹರಿ ವೇಲು ಅವರ ಪುತ್ರ ಸಾಯಿ ಅವರ ವಿವಾಹ ದಿಯಾ ಅವರೊಂದಿಗೆ ಇತ್ತೀಚೆಗೆ ಬೆಂಗಳೂರು ಪ್ಯಾಲೆಸ್ ನಲ್ಲಿ ಅದ್ಧೂರಿಯಾಗಿ ನೆರವೇರಿತು. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಮಾಜಿ ಸಂಸದರಾದ ಡಿ.ಕೆ.ಸುರೇಶ್, ಶಾಸಕ ಮುನಿರತ್ನ ಸೇರಿದಂತೆ ಚಿತ್ರರಂಗ, ರಾಜಕೀಯ ಕ್ಷೇತ್ರ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ವಿವಾಹ ಮಹೋತ್ಸವಕ್ಕೆ ಆಗಮಿಸಿ ವಧುವರರಿಗೆ ಶುಭ ಕೋರಿದರು.
ಲಹರಿ ವೇಲು ಪುತ್ರ ಮದುವೆ -
ಲಹರಿ ವೇಲು ಅವರ ಪುತ್ರ ಸಾಯಿ ಅವರ ವಿವಾಹ ದಿಯಾ ಅವರೊಂದಿಗೆ ಇತ್ತೀಚೆಗೆ ಬೆಂಗಳೂರು ಪ್ಯಾಲೆಸ್ ನಲ್ಲಿ ಅದ್ಧೂರಿಯಾಗಿ ನೆರವೇರಿತು.
ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ನವರಸ ನಾಯಕ ಜಗ್ಗೇಶ್, ನೀನಾಸಂ ಸತೀಶ್, ಅಕುಲ್ ಬಾಲಾಜಿ, ವಿನಯ್ ರಾಜಕುಮಾರ್, ರೀಷ್ಮಾ ನಾಣಯ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಡಾ||ಜಯಮಾಲಾ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಮಾಜಿ ಸಂಸದರಾದ ಡಿ.ಕೆ.ಸುರೇಶ್, ಶಾಸಕ ಮುನಿರತ್ನ ಸೇರಿದಂತೆ ಚಿತ್ರರಂಗ, ರಾಜಕೀಯ ಕ್ಷೇತ್ರ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ವಿವಾಹ ಮಹೋತ್ಸವಕ್ಕೆ ಆಗಮಿಸಿ ವಧುವರರಿಗೆ ಶುಭ ಕೋರಿದರು.
ಭಾರತೀಯ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಲಹರಿ ಸಂಸ್ಥೆಯ ಲಹರಿ ವೇಲು ಈಗಾಗಲೇ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಗಾಯನದ ಜೊತೆಗೆ ಗೀತರಚನೆ ಕೂಡ ಮಾಡಿದ್ದಾರೆ.
ಅದ್ಭುತ ಮಾತುಗಾರ ಆಗಿರುವ ಲಹರಿ ವೇಲು ಅವರು, ಅಷ್ಟೇ ಚೆನ್ನಾಗಿ ಜನರಿಗೆ ಮಾರ್ಗದರ್ಶನ ಮಾಡಬಲ್ಲರು. ಒಳ್ಳೊಳ್ಳೆ ಉದಾಹರಣಗಳನ್ನು ಕೊಟ್ಟು ತಿದ್ದಬಲ್ಲರು.
ವೇಲು ಅವರು ಕೇವಲ ಆಡಿಯೋ ಹಕ್ಕು ಖರೀದಿಸುವುದು ಮಾತ್ರವಲ್ಲ, ಕೆಲವು ಸಿನಿಮಾಗಳಲ್ಲಿ ನಟನೆ ಕೂಡ ಮಾಡಿದ್ದಾರೆ. ಕನ್ನಡದ ಗೋಲಿಸೋಡಾ ಚಿತ್ರದಲ್ಲಿ ರಾಜಕಾರಣಿಯಾಗಿ, ಶಿವರಾಜ್ ಕುಮಾರ್ ಅಭಿನಯಿಸಿದ್ದ ಮಾಸ್ ಲೀಡರ್ ಚಿತ್ರದಲ್ಲಿ ಕೇಂದ್ರ ಮಂತ್ರಿಯಾಗಿ ಬಣ್ಣ ಹಚ್ಚಿದ್ದರು.
ಸುಮಾರು 36 ವರ್ಷಗಳಿಂದ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಪ್ರಕ್ರೀಯರಾಗಿದ್ದು, ಕನ್ನಡ, ತೆಲುಗು, ತಮಿಳು, ಹಾಗೂ ಹಿಂದಿ ಸೇರಿದಂತೆ ನೂರಾರು ಚಿತ್ರಗಳನ್ನ ಹಾಡುಗಳನ್ನ ಖರೀದಿಸಿದ್ದಾರೆ.