Lakshmi Manchu: ಡಿವೋರ್ಸ್ ಬಳಿಕ ನಟಿ ಸಮಂತಾಗೆ ಟಾಲಿವುಡ್‌ನಲ್ಲಿ ಅನ್ಯಾಯವಾಗಿದೆಯೇ? ಲಕ್ಷ್ಮಿ ಮಂಚು ಹೇಳಿದ್ದೇನು?
Lakshmi Manchu: ಇತ್ತೀಚೆಗೆ ಸಮಂತಾ ಅಷ್ಟಾಗಿ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಮದುವೆ, ವಿಚ್ಚೇದನ, ಆರೋಗ್ಯ ಸೇರಿ ಹಲವು ಕಾರಣಗಳಿಂದ ಸಮಂತಾ ಸಿನಿಮಾಗಳಿಂದ ದೂರ ಉಳಿದು ಬಿಟ್ಟಿದ್ದಾರೆ. ಹೊಸ ಸಿನಿಮಾ ಯಾವಾಗ ಘೋಷನೆ ಮಾಡ್ತಾರೆ ಎಂದು ಈ ವಿಚಾರದ ಕುರಿತು ಆಗಾಗ ಅಭಿಮಾನಿಗಳು ಚರ್ಚೆ ಮಾಡುತ್ತಲೇ ಇದ್ದಾರೆ. ಆದರೆ ನಟಿ ಸಮಂತಾ ಯಾಕೆ ಸಿನಿಮಾದಲ್ಲಿ ಕಾಣಿಸಿಕೊಳ್ತಾ ಇಲ್ಲ ಎಂದು ಆಶ್ಚರ್ಯಕರ ಸಂಗತಿಯೊಂದನ್ನು ನಟಿ ಲಕ್ಷ್ಮಿ ಮಂಚು ಬಿಚ್ಚಿಟ್ಟಿದ್ದಾರೆ.

-

ನವದೆಹಲಿ: ತೆಲುಗಿನ ಸ್ಟಾರ್ ನಾಯಕಿಯರಲ್ಲಿ ಸಮಂತಾ (Samantha) ಕೂಡ ಒಬ್ಬರು. ತಮ್ಮ ವೃತ್ತಿ ಜೀವನದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿ ಫೇಮ್ ಗಿಟ್ಟಿಸಿಕೊಂಡವರು. 'ವಿನೈ ತಾಂಡಿವರುವಾಯ' ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದ ಅವರು ನಂತರ ತಮಿಳು ಮತ್ತು ತೆಲುಗಿನಲ್ಲಿ ಬ್ಯುಸಿ ನಟಿಯಾದರು. ಆದರೆ ಇತ್ತೀಚೆಗೆ ಸಮಂತಾ ಅಷ್ಟಾಗಿ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಮದುವೆ, ವಿಚ್ಚೇದನ, ಆರೋಗ್ಯ ಸೇರಿ ಹಲವು ಕಾರಣಗಳಿಂದ ಸಮಂತಾ ಸಿನಿಮಾಗಳಿಂದ ದೂರ ಉಳಿದು ಬಿಟ್ಟಿದ್ದಾರೆ. ಹೊಸ ಸಿನಿಮಾ ಯಾವಾಗ ಘೋಷನೆ ಮಾಡ್ತಾರೆ ಎಂದು ಈ ವಿಚಾರದ ಕುರಿತು ಆಗಾಗ ಅಭಿಮಾನಿಗಳು ಚರ್ಚೆ ಮಾಡುತ್ತಲೇ ಇದ್ದಾರೆ. ಆದರೆ ನಟಿ ಸಮಂತಾ ಯಾಕೆ ಸಿನಿಮಾದಲ್ಲಿ ಕಾಣಿಸಿಕೊಳ್ತಾ ಇಲ್ಲ ಎಂದು ಆಶ್ಚರ್ಯಕರ ಸಂಗತಿ ಯೊಂದನ್ನು ನಟಿ ಲಕ್ಷ್ಮಿ ಮಂಚು ಬಿಚ್ಚಿಟ್ಟಿದ್ದಾರೆ
''ದಕ್ಷ- ಎ ಡೆಡ್ಲಿ ಕಾನ್ಸ್ಪಿರೆಸಿ'' ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಇರುವ ಲಕ್ಷ್ಮಿ ಮಂಚು ತಮ್ಮ ಸಮಾಜದಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಕಷ್ಟಗಳು ಎಂದು ಅವರು ಹೇಳಿ ಕೊಂಡಿ ದ್ದಾರೆ. ನಮ್ಮಲ್ಲಿ ಒಬ್ಬ ಸ್ಟಾರ್ ನಟನ ಮಾಜಿ ಪತ್ನಿ ಇದ್ದಾರೆ. ಆದರೆ ಅವರು ಡಿವೊರ್ಸ್ ಪಡೆದ ಬಳಿಕ ಸಿನಿಮಾ ಅವಕಾಶವನ್ನೆಲ್ಲ ಕಳೆದುಕೊಂಡಿದ್ದಾರೆ. ಅದೇ ರೀತಿ ಆ ನಟಿಗೆ ಅವಕಾಶ ನೀಡ ದಂತೆ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಆ ನಟಿ ಸಾಕಷ್ಟು ಖ್ಯಾತಿ ಗಳಿಸಿದ್ದಲ್ಲದೆ ಒಳ್ಳೆಯ ಸಿನಿಮಾ ಆಫರ್ ಗಾಗಿ ಕಾಯುತ್ತಿದ್ದಾರೆ. ಆದರೆ ಇಲ್ಲಿ ಆಕೆಯ ಹೆಸರನ್ನು ಹೇಳುವ ಅಗತ್ಯ ಇಲ್ಲ ಎಂದು ನನಿಗೆ ಅನಿಸಿದೆ ಅಂದಿದ್ದಾರೆ. ಆಗ ಅಲ್ಲಿದ್ದ ಪತ್ರಕರ್ತರು ಯಾರವರು ನಟಿ ಸಮಂತಾವಾ ಎಂದು ಕೇಳಿದ್ದಾರೆ. ಆಗ ನೀವು ಸಮಂತಾ ಎಂದು ಅಂದುಕೊಂಡರೆ ಅವರೇ ಅಂದುಕೊಳ್ಳಿ .ಹೀಗೆ ಅವರು ಒಬ್ಬರೇ ಅಲ್ಲ ಐದಾರು ಪ್ರಮುಖ ನಾಯಕಿ ಯರು ವಿಚ್ಚೇದನ ಪಡೆದಿದ್ದಾರೆ ಎಂದು ಉತ್ತರಿಸಿದ್ದರು.
ಒಬ್ಬ ಪುರುಷನ ಬದುಕಿನಲ್ಲಿ ಡಿವೊರ್ಸ್, ಕಲಹ ಉಂಟಾದಾಗ ಏನೂ ಬದಲಾವಣೆ ಇಲ್ಲ. ಆತನ ಜೀವನ ಕೂಡ ಬದಲಾವಣೆ ಆಗುವುದಿಲ್ಲ. ಆದರೆ ಒಬ್ಬ ಮಹಿಳೆ ಮದುವೆಯಾದ ನಂತರ ಆಕೆಗೆ ಮಕ್ಕಳಿರುತ್ತಾರೆ. ಸಂಸಾರ ಇರುತ್ತದೆ ಆದರೆ ಹೆಣ್ಣಿಗೆ ಸ್ವಾತಂತ್ರ್ಯವನ್ನು ಈಗಲೂ ಕೊಡುವುದಿಲ್ಲ. ಅದನ್ನು ನಾವೇ ಪಡೆಯಬೇಕಾಗುತ್ತೆ ಎಂದು ಹೇಳುವ ಉದ್ದೇಶದಿಂದ ನಾನು ಈ ಮಾತು ಹೇಳಿದೆ ಅಂದಿದ್ದಾರೆ.
ಸದ್ಯ ಅವರ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಾ ಇದ್ದು ನಾಗಾ ರ್ಜುನ ಮತ್ತು ನಾಗಚೈತನ್ಯ ನಿರ್ಮಾ ಪಕ ಮತ್ತು ನಿರ್ದೇಶಕರಲ್ಲಿ ಸಮಂತಾ ಅವರನ್ನು ಆಯ್ಕೆ ಮಾಡದಂತೆ ಹೇಳಿರಬಹುದು ಎಂದು ಚರ್ಚೆಯಾಗುತ್ತಿದೆ. ಸಮಂತಾ ಹೆಸರನ್ನು ಉಲ್ಲೇಖ ಮಾಡದಿದ್ದರೂ ಲಕ್ಷ್ಮಿ ಮಂಚು ಮಾತನಾಡಿದ್ದು ಸಮಂತಾ ಅವರ ಬಗ್ಗೆಯೇ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನು ಓದಿ:Samantha Ruth Prabhu: ನಾಗಚೈತನ್ಯರಿಂದ 200 ಕೋಟಿ ರೂ. ಜೀವನಾಂಶ ಪಡೆದ್ರಾ ಸಮಂತಾ? ನಟಿ ಹೇಳಿದ್ದೇನು?
ಸಮಂತಾ ರುತ್ ಪ್ರಭು ಹಾಗೂ ನಾಗ ಚೈತನ್ಯ ಅವರ ವಿಚ್ಚೇದನ ಪಡೆದು ವರ್ಷ ಕಳೆದರೂ ನಾಗ ಚೈತನ್ಯ ತಮ್ಮ ಲೈಫ್ನಲ್ಲಿ ಮುಂದೆ ಹೋಗಿ ಎರಡನೇ ಮದುವೆ ಕೂಡಾ ಆದರು. ಆದರೆ ಸಮಂತಾ ಎರಡನೇ ಮದುವೆ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ವಿಚ್ಛೇದನ ಪಡೆದ ನಂತರ ಪ್ರಸ್ತುತ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ನಿರ್ಮಾಪಕಿಯಾಗಿ ಕೆಲಸ ಮಾಡಿದ ಸಮಂತಾ, ಹಲವಾರು ಸಂದರ್ಶನಗಳಲ್ಲಿ ತಮ್ಮ ಮನಸ್ಸಿನಲ್ಲಿ ಅಡಗಿರುವ ಅನೇಕ ವಿಷಯಗಳನ್ನು ಮಾತನಾಡಿ ಭಾವುಕರಾಗಿದ್ದರು.