ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಲಕ್ಷ್ಮೀ ನಿವಾಸದಲ್ಲಿ (Lakshmi Nivasa Serial) ಜಾಹ್ನವಿ ಸತ್ತಿದ್ದಾಳೆ ಅಂದುಕೊಂಡು ಇದ್ದ ಕುಟುಂಬಕ್ಕೆ ಶಾಕ್ ಆಗಿದೆ. ಜಾಹ್ನವಿ ಬದುಕಿ ಬಂದಿದ್ದಾಳೆ. ಇದೀಗ ಮತ್ತೊಂದು ಟ್ವಿಸ್ಟ್ ತೆರೆದುಕೊಂಡಿದೆ. ಇದೀಗ ಸೀರಿಯಲ್ ಶುರುವಾಗಿ ಬರೋಬರಿ ಎರಡು ವರ್ಷದ ಬಳಿಕ ಜಯಂತ್ (Jayanth) ಮುಖವಾಡ ಬಯಲಾಗಲಿದೆ.
ಜಾಹ್ನವಿಗೆ ಹಳೆಯದ್ದೆಲ್ಲ ಮರೆತು ಹೋಗಿದೆ
ಜಾಹ್ನವಿಗೆ ಹಳೆಯದ್ದೆಲ್ಲ ಮರೆತು ಹೋಗಿದೆ ಎಂದು ವಿಶ್ವ ಮನೆಯವರ ಮುಂದೆ ಹೇಳಿ ಬಚಾವ್ ಮಾಡಿದ್ದಾನೆ. ಅತ್ತ ಜಯಂತ್ ಬಗ್ಗೆ ಏನೂ ಹೇಳಬಾದರು ಅಂತ ಜಾಹ್ನವಿ ಅಜ್ಜಿ ಬಳಿ ಮಾತು ತೆಗೆದುಕೊಂಡಿದ್ದಾಳೆ. ಆದರೆ ಆಗಿದ್ದೇ ಈಗ ಬೇರೆ ಆಗಿದೆ.
ಇದನ್ನೂ ಓದಿ: Amruthadhaare Serial: ಹನಿಮೂನ್ ಹೊರಟಿರೋ ಮಲ್ಲಿ-ಸುನಿಗೆ ತಪ್ಪಿಲ್ಲ ಕೇಡಿ ಜೈದೇವ್ ಕಾಟ!
ಜಯಂತ್ ನನ್ನು ಮತ್ತೆ ಮನೆಗೆ ಕರೆದು, ಜಾಹ್ನವಿ ಬದುಕಿರುವ ಸತ್ಯವನ್ನು ಜಯಂತ್ ತಿಳಿಸಿ ಸರ್ಪ್ರೈಸ್ ನೀಡಬೇಕು ಎಂದು ವೀಣಾ ಪ್ಲ್ಯಾನ್ ಮಾಡಿ, ಮನೆಯವರನ್ನೆಲ್ಲಾ ಮನೆಗೆ ಆಹ್ವಾನಿಸಿದ್ದಾಳೆ. ಪ್ರೊಮೋದಲ್ಲಿ ಜಯಂತ್ ಲಕ್ಷ್ಮೀ ಶ್ರೀನಿವಾಸರ ಕುಟುಂಬದ ಮುಂದೆ ಬಂದು ನಿಂತಿದ್ದಾನೆ. ಶ್ರೀನಿವಾಸ್ ಸಂಭ್ರಮದಿಂದ ನಿಮ್ಮ ಪ್ರೀತಿ ನೋಡಿ ನನ್ನ ಮಗಳನ್ನು ಆ ದೇವರು ಉಳಿಸಿದ್ದಾನೆ ಎಂದರೆ, ಲಕ್ಷ್ಮೀ ನಮ್ಮ ಮಗಳನ್ನು ನಿಮ್ಮ ಜೊತೆ ವಾಪಾಸ್ ಕಳುಹಿಸಿ ಕೊಡುತ್ತೇವೆ ಎನ್ನುತ್ತಾರೆ.
ಆವಾಗ ಅಜ್ಜಿಯಿಂದ ಸತ್ಯ ಬಯಲಾಗುತ್ತದೆ. ಈಗ ಅಜ್ಜಿ ಎಲ್ಲರ ಮುಂದೆ ಇವನನ್ನು ನಂಬಿ ಜಾನೂನ ಕಳುಹಿಸಬೇಡ ಎಂದಾಗ, ವಿಶ್ವ ಜಾಹ್ನವಿ ಇದ್ದದ್ದು ಇವರ ನರಕದಲ್ಲಿ ಎನ್ನುತ್ತಾ ಸತ್ಯವನ್ನು ಎಲ್ಲರೆದುರು ಬಿಚ್ಚಿಡುತ್ತಾರೆ. ಆವಾಗ ಮನೆಮಂದಿ ಸಿಟ್ಟಿಗೆದ್ದು, ಜಯಂತ್ ಮುಖ ನೋಡೋದಕ್ಕೂ ಅಸಹ್ಯ ಆಗುತ್ತೆ, ಇಂತವರನ್ನು ಸುಮ್ಮನೆ ಬಿಡಬಾರದು, ತಕ್ಕ ಶಿಕ್ಷೆ ಕೊಡಬೇಕು ಎಂದು ಹೇಳುತ್ತಾ ಹೊಡೆಯೋಕೆ ಬರುತ್ತಾರೆ.
ಇದೀಗ ಏಕಾಏಕಿ ರಿವೀಲ್ ಆಗುತ್ತೆ ಅಂದ್ರೆ ಅದು ನಂಬೋದಕ್ಕೆ ಕಷ್ಟಾನೆ, ಹಾಗಾಗಿ ವೀಕ್ಷಕರು ಇದು ಜಯಂತ್ ಕನಸು ಎಂದು ಕಮೆಂಟ್ ಮಾಡುತ್ತಿದ್ದಾರೆ.
ಜೈಲು ಸೇರಿದ್ದ ಸಿದ್ದೇಗೌಡರನ್ನ ಬಿಡಿಸಿದ್ದಾಳೆ ಭಾವನಾ. ಮೈದುನನ್ನ ಪರ್ಮನೆಂಟ್ ಆಗಿ ಜೈಲಿಗೆ ಕಳಹಿಸುವ ನೀಲು ಮಾಡಿದ ಕುತಂತ್ರಗಳಿಗೆ ಫಲ ಸಿಗಲಿಲ್ಲ. ಕೊನೆಗೆ ಭಾವನಾ ಗೆದ್ದು, ಗಂಡನನ್ನ ಸೆರೆವಾಸದಿಂದ ಬಿಡಿಸಿಕೊಂಡು ಬಂದಿದ್ದಾಳೆ.
ಇದನ್ನೂ ಓದಿ: Abhishek Bachchan: ನಮ್ಮ ಮನೆಯಲ್ಲಿ ಗಂಡು ಹೆಣ್ಣು ಎಂಬ ಸ್ಪರ್ಧೆಯೇ ಇಲ್ಲ! ಅಭಿಷೇಕ್ ಬಚ್ಚನ್ ನೇರ ಮಾತು
ಬಡ ಕುಟುಂಬದ ಹೆಣ್ಣು ಮಕ್ಕಳ ಜೀವನ ಹೇಗಿರುತ್ತದೆ ಎನ್ನುವ ಸಾರಾಂಶ ಹೊಂದಿರುವ ಈ ಧಾರವಾಹಿ ಸಾಕಷ್ಟು ಮಿಡಲ್‌ಕ್ಲಾಸ್ ಹೆಣ್ಣು ಮಕ್ಕಳ ಜೀವನಕ್ಕೆ ಸಂಬಂಧಿಸಿದೆ. ಈ ಧಾರಾವಾಹಿಯಲ್ಲಿ ಅನೇಕ ಹಿರಿ ಕಲಾವಿದರು ಇದ್ದಾರೆ. ಶ್ವೇತಾ,ದಿವ್ಯಶ್ರೀ ಗ್ರಾಮ, ದೀಪಕ್, ಸುಬ್ರಮಣ್ಯಲಕ್ಷ್ಮೀ ಹೆಗಡೆ, ಮಧು ಹೆಗಡೆ, ಚಂದನಾ ಅನಂತಕೃಷ್ಣ ಮೊದಲಾದವರು ಇದ್ದಾರೆ.