ದಳಪತಿ ವಿಜಯ್ 'ಜನ ನಾಯಗನ್' ಬಿಡುಗಡೆಗೆ ಕಾನೂನು ಸಂಕಷ್ಟ: ಜನವರಿ 27ಕ್ಕೆ ಹೈಕೋರ್ಟ್ ಅಂತಿಮ ತೀರ್ಪು!
Vijay's Jana Nayagan: ದಳಪತಿ ವಿಜಯ್ 'ಜನ ನಾಯಗನ್' ಬಿಡುಗಡೆಗೆ ಸಿದ್ದವಾಗಿದ್ದು ಕೆಲವೇ ದಿನ ಗಳಲ್ಲಿ ರಿಲೀಸ್ ಆಗುತ್ತೆ ಎಂದು ಹೇಳಲಾಗಿತ್ತು. ಜನವರಿ 9 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರಕ್ಕೆ ಸಿಬಿಎಫ್‌ಸಿಯಿಂದ ಪ್ರಮಾಣಪತ್ರ ಬಿಡುಗಡೆಯಾಗದೆ ಕಾನೂನು ಸಂಘರ್ಷಕ್ಕೆ ಸಿಲುಕಿದೆ. ಚಿತ್ರದ ಸೆನ್ಸಾರ್ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಈ ವಿವಾದದ ಕುರಿತು ಜನವರಿ 27ರಂದು ಮದ್ರಾಸ್ ಹೈಕೋರ್ಟ್ ತನ್ನ ಕೊನೆಯ ತೀರ್ಪನ್ನು ಪ್ರಕಟಿಸಲಿದೆ...
ದಳಪತಿ ವಿಜಯ್ -
ಮುಂಬೈ,ಜ. 25: ಸಿನಿಮಾ ಜೊತೆಗೆ ರಾಜಕೀಯ ರಂಗದಲ್ಲೂ ದಳಪತಿ ವಿಜಯ್ ಬ್ಯುಸಿ ಇದ್ದಾರೆ. ಅದರಲ್ಲೂ ಅವರ ಕೊನೆಯ ಸಿನಿಮಾ ಅಂದಾಗ ಅಭಿಮಾನಿಗಳಲ್ಲಿ ಕ್ರೇಜ್ ಇದ್ದೇ ಇರಲಿದೆ. ಸದ್ಯ ಅವರ 'ಜನ ನಾಯಗನ್' (Jana Nayagan) ಬಿಡುಗಡೆಗೆ ಸಿದ್ದವಾಗಿದ್ದು ಕೆಲವೇ ದಿನಗಳಲ್ಲಿ ರಿಲೀಸ್ ಆಗುತ್ತೆ ಎಂದು ಹೇಳಲಾಗಿತ್ತು. ಜನವರಿ 9 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರಕ್ಕೆ ಸಿಬಿಎಫ್‌ಸಿ ಯಿಂದ ಪ್ರಮಾಣಪತ್ರ ಬಿಡುಗಡೆಯಾಗದೆ ಕಾನೂನು ಸಂಘರ್ಷಕ್ಕೆ ಸಿಲುಕಿದೆ. ಚಿತ್ರದ ಸೆನ್ಸಾರ್ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಈ ವಿವಾದದ ಕುರಿತು ಜನವರಿ 27ರಂದು ಮದ್ರಾಸ್ ಹೈಕೋರ್ಟ್ ತನ್ನ ಕೊನೆಯ ತೀರ್ಪನ್ನು ಪ್ರಕಟಿಸಲಿದೆ.
ಜನ ನಾಯಗನ್ ಸಿನಿಮಾ ಬಿಡುಗಡೆಯ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಈ ಸಮಯದಲ್ಲೆ ಅವರ ಫ್ಯಾನ್ಸ್ ಗೆ ನಿರಾಸೆ ಮೂಡುವಂತೆ ಮಾಡಿದೆ. ಸಿನಿಮಾದಲ್ಲಿನ ಕೆಲವು ರಾಜಕೀಯ ದೃಶ್ಯಗಳು ಮತ್ತು ಸಂಭಾಷಣೆಗಳ ಬಗ್ಗೆ ಸೆನ್ಸಾರ್ ಮಂಡಳಿ ಆಕ್ಷೇಪವನ್ನು ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. ಈ ಚಿತ್ರವು ಜನವರಿ 9, 2026 ರಂದು ತೆರೆಗೆ ಬರಬೇಕಿತ್ತು. ಆದರೆ, ಕೇಂದ್ರ ಚಲನಚಿತ್ರ ಮಂಡಳಿ (CBFC) ಚಿತ್ರಕ್ಕೆ ಪ್ರಮಾಣಪತ್ರ ನೀಡಲು ನಿರಾಕರಿಸಿದ್ದರಿಂದ ಬಿಡುಗಡೆ ದಿನಾಂಕ ಮುಂದುಡಲಾಗಿದೆ.
ಸೆನ್ಸಾರ್ ಮಂಡಳಿಯ ನಿರ್ಧಾರದ ಕುರಿತು ಸಿನಿಮಾ ನಿರ್ಮಾಪಕರು ನ್ಯಾಯಾಲಯದ ಮೊರೆ ಹೋಗಿದ್ದರು. ಜನವರಿ 20ರಂದು ವಾದಗಳನ್ನು ಆಲಿಸಿದ ಹೈಕೋರ್ಟ್ ಪೀಠವು, ಈಗ ಮಂಗಳ ವಾರ ತನ್ನ ಅಂತಿಮ ಆದೇಶವನ್ನು ಪ್ರಕಟ ಮಾಡಲಿದೆ. ಕೆವಿಎನ್ ಪ್ರೊಡಕ್ಷನ್ಸ್‌ನ ವೆಂಕಟ್ ಕೆ. ನಾರಾಯಣ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಸಂದೇಶವನ್ನು ಹಂಚಿಕೊಂಡಿದ್ದಾರೆ. ಈ ವಿಳಂಬವು ತಂಡಕ್ಕೆ ತಂದಿರುವ ಭಾವನಾತ್ಮಕ ನಷ್ಟದ ಬಗ್ಗೆ ತೆರೆದಿಟ್ಟಿದ್ದಾರೆ. "ಈ ಚಿತ್ರಕ್ಕಾಗಿ ಕಠಿಣ ಪರಿಶ್ರಮ ವನ್ನು ಸುರಿದ ಪ್ರತಿಯೊಬ್ಬರಿಗೂ ಇದು ಅತ್ಯಂತ ಭಾವನಾತ್ಮಕ ಮತ್ತು ಕಷ್ಟಕರವಾದ ಕ್ಷಣವಾಗಿದೆ" ಎಂದು ಅವರು ಹೇಳಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ದಳಪತಿ ವಿಜಯ್ ಸರ್ ಅವರು ತಮ್ಮ ಅಭಿ ಮಾನಿಗಳಿಂದ ದಶಕಗಳ ಪ್ರೀತಿಯಿಂದ ಗಳಿಸಿದ ಗೌರವಕ್ಕೆ ಅರ್ಹರು ಎಂದು ನಾವು ದೃಢವಾಗಿ ನಂಬುತ್ತೇವೆ ಎಂದಿದ್ದಾರೆ.
ಎಚ್. ವಿನೋದ್ ನಿರ್ದೇಶನದ 'ಜನ ನಾಯಗನ್' ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಿಯಾಮಣಿ ಮತ್ತು ನರೇನ್ ಸೇರಿದಂತೆ ಹಲವು ತಾರಾಗಣವಿದೆ. ವಿಜಯ್ ಅವರ ರಾಜಕೀಯ ಪ್ರವೇಶಕ್ಕೂ ಮುನ್ನ ಅವರ ಕೊನೆಯ ಸಿನಿಮಾ ಎಂದು ಹೇಳಲಾಗಿದ್ದು ಸಿನಿಮಾ ನಿರೀಕ್ಷೆ ಹೆಚ್ಚಾಗಿದೆ.