ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Singeetham Srinivasa Rao: ‘ಆನಂದ್‌’ ಮೂಲಕ ಶಿವಣ್ಣ ಪರಿಚಯಿಸಿದ್ದ ನಿರ್ದೇಶಕ ಸಿಂಗೀತಂ ಶ್ರೀನಿವಾಸ್‌ ಇನ್ನಿಲ್ಲ

ಭಾರತೀಯ ಚಿತ್ರರಂಗಕ್ಕೆ ಅನೇಕ ಶ್ರೇಷ್ಠ ಚಿತ್ರಗಳನ್ನು ನೀಡಿದ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ (94) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶನಿವಾರ ರಾತ್ರಿ ಕೊನೆಯುಸಿರೆಳೆದರು. ಶಿವರಾಜ್‌ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ ‘ಆನಂದ್’ ಮೂಡಿಬಂದಿದ್ದು ಕೂಡ ಸಿಂಗೀತಂ ಅವರ ನಿರ್ದೇಶನದಲ್ಲಿ. ಮೂಲತಃ ತೆಲುಗಿನವರಾದ ಸಿಂಗೀತಂ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.

ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್

ಭಾರತೀಯ ಚಿತ್ರರಂಗಕ್ಕೆ ಅನೇಕ ಶ್ರೇಷ್ಠ ಚಿತ್ರಗಳನ್ನು ನೀಡಿದ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ (94) ( Singeetham Srinivasa Rao) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶನಿವಾರ ರಾತ್ರಿ ಕೊನೆಯುಸಿರೆಳೆದರು. ಶಿವರಾಜ್‌ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ ‘ಆನಂದ್’ (Anand Movie) ಮೂಡಿಬಂದಿದ್ದು ಕೂಡ ಸಿಂಗೀತಂ ಅವರ ನಿರ್ದೇಶನದಲ್ಲಿ. ಮೂಲತಃ ತೆಲುಗಿನವರಾದ ಸಿಂಗೀತಂ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.

ನೆಲ್ಲೂರು ಜಿಲ್ಲೆಯ ಉದಯಗಿರಿಯಲ್ಲಿ ವಿದ್ಯಾವಂತ ಕುಟುಂಬದಲ್ಲಿ ಜನಿಸಿದ ಅವರಿಗೆ ಬಾಲ್ಯದಿಂದಲೇ ತಾಯಿಯಿಂದ ಸಂಗೀತ ಜ್ಞಾನ ಮತ್ತು ಸಾಹಿತ್ಯದ ಪ್ರೀತಿ ತುಂಬಿತು. ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೌತಶಾಸ್ತ್ರವನ್ನು ಅಧ್ಯಯನ ಮಾಡುವಾಗ, ಅವರು ರಂಗಭೂಮಿಯ ಬಗ್ಗೆ ಉತ್ಸಾಹವನ್ನು ಬೆಳೆಸಿಕೊಂಡರು. ಅವರು ಅಲ್ಪಾವಧಿಗೆ ಅಧ್ಯಾಪಕ ವೃತ್ತಿಯನ್ನು ಕೈಗೊಂಡರೂ, ಸಿನಿಮಾ ಕಲೆ ಅವರನ್ನು ಬಲವಾಗಿ ಆಕರ್ಷಿಸಿತು. ನಿರ್ದೇಶಕ ಕೆ.ವಿ. ರೆಡ್ಡಿ ಅವರೊಂದಿಗೆ 'ಮಾಯಾಬಜಾರ್' ನಂತಹ ಉತ್ತಮ ಚಿತ್ರಕ್ಕೆ ಸಹಾಯಕರಾಗಿ ಸೇರುವುದರೊಂದಿಗೆ ಸಿನಿಮಾ ಜರ್ನಿ ಪ್ರಾರಂಭವಾಯಿತು.



ಇದನ್ನೂ ಓದಿ: Bigg Boss Kannada 13: ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ; ಲಿಖಿತ್, ಮಂಜಗೆ ಆಸಿಯಾ ಆವಾಜ್‌

ಸಿಂಗೀತಂ ಶ್ರೀನಿವಾಸ ರಾವ್ ಮತ್ತು ಡಾ. ರಾಜ್‌ಕುಮಾರ್ ಅವರ ಕಾಂಬಿನೇಷನ್ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿತು. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಅಪಾರ ಸಾಧನೆ ಮಾಡಿದ್ದ ಸಿಂಗೀತಂ ಅವರು, ಕನ್ನಡ ಚಿತ್ರರಂಗದೊಂದಿಗೂ ಅತ್ಯಂತ ನಿಕಟ ಮತ್ತು ಆಪ್ತ ಸಂಬಂಧವನ್ನು ಹೊಂದಿದ್ದರು.. 1982ರಲ್ಲಿ ಮೂಡಿಬಂದ ‘ಹಾಲು ಜೇನು’ ಅದೇ ವರ್ಷ ಬಿಡುಗಡೆಯಾದ ‘ಚಲಿಸುವ ಮೋಡಗಳು’, 1983ರಲ್ಲಿ ಬಿಡುಗಡೆಯಾದ ‘ಎರಡು ನಕ್ಷತ್ರಗಳು’ ಮತ್ತು 1984ರ ‘ಶ್ರಾವಣ ಬಂತು’ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಕಂಡವು.1986ರಲ್ಲಿ ತೆರೆಕಂಡ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಪಕ್ಕಾ ಹಾಸ್ಯಮಯ ಕಥಾಹಂದರ ಹೊಂದಿದ್ದು, ಸಿಂಗೀತಂ ಅವರಿಗೆ ಅತ್ಯುತ್ತಮ ಚಿತ್ರಕಥೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟಿತು.

ಜಗ್ಗೇಶ್ ನಟನೆಯ ‘ಮೇಕಪ್’, ಶಿವರಾಜ್‌ಕುಮಾರ್ ಅಭಿನಯದ ‘ಆನಂದ್’, ರಾಘವೇಂದ್ರ ರಾಜ್‌ಕುಮಾರ್ ನಟನೆಯ ‘ಚಿರಂಜೀವಿ ಸುಧಾಕರ’, ‘ಟುವ್ವಿ ಟುವ್ವಿ ಟುವ್ವಿ’ ಮುಂತಾದ ಸಿನಿಮಾಗಳಿಗೆ ಸಿಂಗೀತಂ ಶ್ರೀನಿವಾಸ ರಾವ್ ಅವರು ನಿರ್ದೇಶನ ಮಾಡಿದ್ದರು.ಮೂಕಿ ಸಿನಿಮಾ ‘ಪುಷ್ಪಕ ವಿಮಾನ’ (1987) ನಿರ್ಮಾಣಗೊಂಡಿದ್ದು ಮತ್ತು ಪ್ರದರ್ಶನಗೊಂಡಿದ್ದು ಬೆಂಗಳೂರಿನಲ್ಲೇ ಎಂಬುದು ವಿಶೇಷ.

ತಮ್ಮ ಪತ್ನಿ ಲಕ್ಷ್ಮಿ ಕಲ್ಯಾಣಿ ಅವರ ಜೀವನದಲ್ಲಿ ಅವರ ಪಾತ್ರ ಬಹಳ ವಿಶೇಷ. ಕಥೆ ಬರೆಯುವಿಕೆ ಮತ್ತು ಚರ್ಚೆಗಳಲ್ಲಿ ತಮ್ಮ ಒಡನಾಡಿಯಾಗಿದ್ದ ಅವರೊಂದಿಗಿನ ಆಳವಾದ ಬಾಂಧವ್ಯವನ್ನು ಅವರು 'ಶ್ರೀಕಲ್ಯಾಣಿಯಂ' ಎಂಬ ಪುಸ್ತಕದ ರೂಪದಲ್ಲಿ ಅನಾವರಣಗೊಳಿಸಿದ್ದಾರೆ.

ಇದನ್ನೂ ಓದಿ: Bigg Boss Kannada 13: ವಿವರಣೆ ಕೊಡೋಕೆ ಧೈರ್ಯ, ದಿಲ್‌ ಇಲ್ಲ ಅಂದ್ರೆ 'ಇಡ್ಲಿ ಮಸಿ' ಪದ ಏಕೆ ಬಳಿಸಿದ್ರಿ? ಲಿಖಿತ್‌ಗೆ ಕಿಚ್ಚನ ಕ್ಲಾಸ್‌

60ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದ ಸಿಂಗೀತಂ ಶ್ರೀನಿವಾಸ ರಾವ್, 2 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 3 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ನಂದಿ ಪ್ರಶಸ್ತಿ ಮತ್ತು ಫಿಲ್ಮ್​ಫೇರ್ ಪ್ರಶಸ್ತಿಗೆ ಭಾಜನರಾಗಿದ್ದರು.

Yashaswi Devadiga

View all posts by this author