ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ವಿವರಣೆ ಕೊಡೋಕೆ ಧೈರ್ಯ, ದಿಲ್‌ ಇಲ್ಲ ಅಂದ್ರೆ 'ಇಡ್ಲಿ ಮಸಿ' ಪದ ಏಕೆ ಬಳಿಸಿದ್ರಿ? ಲಿಖಿತ್‌ಗೆ ಕಿಚ್ಚನ ಕ್ಲಾಸ್‌

Bigg Boss Kannada 13: ವೀಕೆಂಡ್‌ ಬಂತು ಅಂದರೆ ಕಿಚ್ಚ ಸುದೀಪ್‌ ಅವರಿಗಾಗಿ ಬಿಗ್‌ ಬಾಸ್‌ (Bigg Boss Kannada 13) ವೀಕ್ಷಕರು ಕಾಯುತ್ತಿರುತ್ತಾರೆ. ಇದೀಗ ಸುದೀಪ್‌ (Sudeep) ಅವರು ಲಿಖಿತ್‌ಗೆ (Likhith) ಕ್ಲಾಸ್‌ ತೆಗೆದುಕೊಂಡಿದ್ದಾರೆ. ಪ್ರಶಾಂತ್‌ ಜೊತೆ ಕಿತ್ತಾಡುವಾಗ ಲಖಿತ್‌ ಅವರು 'ಇಡ್ಲಿ ಮಸಿ' ಪದ ಬಳಕೆ ಮಾಡಿದ್ರು. ಇದೀಗ ಕಿಚ್ಚ ಅವರು ಲಿಖಿತ್‌ಗೆ 'ಇಡ್ಲಿ ಮಸಿ' (Idli Masi) ಅಂದ್ರೆ ಏನು? ಎಂದು ಕೇಳಿದ್ದಾರೆ.

ದಿಲ್‌ ಇಲ್ಲ ಅಂದ್ರೆ 'ಇಡ್ಲಿ ಮಸಿ' ಪದ ಏಕೆ ಬಳಿಸಿದ್ರಿ? ಕಿಚ್ಚನ ಕ್ಲಾಸ್‌

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 3, 2026 8:10 PM

ವೀಕೆಂಡ್‌ ಬಂತು ಅಂದರೆ ಕಿಚ್ಚ ಸುದೀಪ್‌ ಅವರಿಗಾಗಿ ಬಿಗ್‌ ಬಾಸ್‌ (Bigg Boss Kannada 13) ವೀಕ್ಷಕರು ಕಾಯುತ್ತಿರುತ್ತಾರೆ. ಇದೀಗ ಸುದೀಪ್‌ (Sudeep) ಅವರು ಲಿಖಿತ್‌ಗೆ (Likhith) ಕ್ಲಾಸ್‌ ತೆಗೆದುಕೊಂಡಿದ್ದಾರೆ. ಪ್ರಶಾಂತ್‌ ಜೊತೆ ಕಿತ್ತಾಡುವಾಗ ಲಖಿತ್‌ ಅವರು 'ಇಡ್ಲಿ ಮಸಿ' ಪದ ಬಳಕೆ ಮಾಡಿದ್ರು. ಇದೀಗ ಕಿಚ್ಚ ಅವರು ಲಿಖಿತ್‌ಗೆ 'ಇಡ್ಲಿ ಮಸಿ' (Idli Masi) ಅಂದ್ರೆ ಏನು? ಎಂದು ಕೇಳಿದ್ದಾರೆ.

ಸುದೀಪ್‌ ಅವರು ಮೊದಲಿಗೆ ಇಡ್ಲಿ ಗೊತ್ತು ಎಂದರು. ಅದಕ್ಕೆ ಲಿಖಿತ್‌ ಇದ್ದವರು ಆ ಇಡ್ಲಿ ಅಲ್ಲ. ಇಡ್ಲಿ ಅಂದರೆ ಕೆಂಡ. ಕೆಂಡ ಮತ್ತು ಮಸಿ. ಕೆಂಡ ಮಸಿಗೆ ಬುದ್ಧಿ ಹೇಳ್ತು ಅಂದಾಗೆ. ಅಂದರೆ ಒಂದೇ ಟೀಂ ಅಲ್ಲಿ ಇದ್ದುಕೊಂಡು ಸುಳ್ಳು ಹೇಳ್ತಾ ಇದ್ದಾರೆ ಅನ್ನೋ ಥರ. ಆದರೆ ಅವರು raciest ಆಗಿ ತೆಗೆದುಕೊಂಡರು ಎಂದರು, ಅದಕ್ಕೆ ಕಿಚ್ಚ ಹೇಗೆ ಅವರು ತೆಗೋಬೇಕು ಎಂದು ಕೇಳಿದ್ದಾರೆ.

ಇದನ್ನೂ ಓದಿ: Bigg Boss Kannada 13: ಕಾವ್ಯಾ-ಗಾನವಿ ಜಗಳ; ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ

ಇವಾಗ ನೀವು ಹೇಳ್ತಾ ಇದ್ದೀರ ಅವರು ತಪ್ಪು ಅರ್ಥ ಮಾಡಿಕೊಂಡಿದ್ದಾರೆ ಎಂದು. ಆವಾಗ ಗೊತ್ತಾಯ್ತು ಅಲ್ವಾ? ತಪ್ಪಾಗಿ ಅರ್ಥ ಮಾಡಿಕೊಂಡ್ರು ಅಂತ. ನಿಮಗೆ ಕ್ಲಾರಿಟಿ ಕೊಡಬೇಕು ಅನ್ನಿಸಿಲ್ವಾ? ವಿವರಣೆ ಕೊಡೋಕೆ ಧೈರ್ಯ ಇಲ್ಲ, ದಿಲ್‌ ಇಲ್ಲ ಅಂದ್ರೆ ಏನಕ್ಕೆ ಉಪಯೋಗಸ್ತೀರಾ? ಎಂದು ಕಿಚ್ಚ ಕ್ಲಾಸ್‌ ತೆಗೆದುಕೊಂಡರು.

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳ ವರ್ತನೆ ಕಿಚ್ಚ ಸುದೀಪ್ ಅವರ ಪಂಚಾಯ್ತಿಯಲ್ಲಿ ತೀವ್ರ ಚರ್ಚೆಗೆ ಒಳಪಟ್ಟಿತು. ಪ್ರಶಾಂತ್ ಹಾಗೂ ಸೋನಿಕಾ ವಿಷಯ ಚರ್ಚೆಗೆ ಬಂತು. ಇನ್ನು, ಸ್ಯಾಂಡಿ ಅವರು ಈ ವಾರ ಸ್ವಾರ್ಥ ಪ್ರದರ್ಶನ ಮಾಡಿದ್ದರ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಗಾನವಿ ಅವರಿಗೆ ಕಳಪೆ ನೀಡಿದ ವಿಷಯದ ಬಗ್ಗೆಯೂ ಚರ್ಚೆ ಆಗಲಿದೆ. ಗಾನವಿ, ಪ್ರಶಾಂತ್ ಹಾಗೂ ಸೋನಿಕಾ ವೈಲ್ಡ್ ಕಾರ್ಡ್ ಆಗಿ ಮನೆಗೆ ಬಂದಿದ್ದಾರೆ. ಇವರ ಬಳಿಕ ಕ್ಯಾಪ್ಟನ್ ಆಗಿ ತಾಂಡವ್ 'ದೊಡನೆ'ಗೆ ಎಂಟ್ರಿ ಕೊಟ್ಟಿದ್ದಾರೆ.

ಗೇಮ್ ಚೇಂಜ್ ಮಾಡ್ತೀನಿ ಅಂತ ಮನೆಯೊಳಗೆ ಮೂರು ಮಂದಿ ಹೋಗಿದ್ದಾರೆ. ಆದರೆ ಮನೆಯೊಳಗೆ ಏನು ಮಾಡುತ್ತಿದ್ದಾರೆ ಎಂದು ಕಟಕಟೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳನ್ನು ನಿಲ್ಲಿಸಿ ಕಿಚ್ಚ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ; ಲಿಖಿತ್, ಮಂಜಗೆ ಆಸಿಯಾ ಆವಾಜ್‌

ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಗೆ ಎಂಟ್ರಿ ಆಗಿ ಒಂದು ವಾರವಾಗಿದೆ. ಈ ವಾರ ಮಂಜ ಹಾಗೂ ಇತರರು ಸೇರಿಕೊಂಡು ಕ್ಯಾಪ್ಟೆನ್ಸಿ ಓಟವೇ ರದ್ದಾಗುವಂತೆ ಮಾಡಿದ್ದಾರೆ. ಗಾನವಿ ಜಗಳ ಜಾಸ್ತಿ ಮಾಡುತ್ತೇನೆ ಎನ್ನುವ ಮೈಂಡ್ ಸೆಟ್‌ನಲ್ಲಿ ಮನೆಗೆ ಬಂದಿದ್ದಾರೆ ಎಂದು ಸೌಂದರ್ಯ ಹೇಳಿದ್ದಾರೆ.