ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಅವ್ರು ಹೀರೋ, ನಾವು ತಡೆಯಲು ಸಾಧ್ಯವೇ?ʼ; ಪತಿ ಗೋವಿಂದ ಅಕ್ರಮ ಸಂಬಂಧಗಳ ಬಗ್ಗೆ ಬಾಯಿಬಿಟ್ಟ ಪತ್ನಿ ಸುನಿತಾ ಅಹುಜಾ!

ಬಾಲಿವುಡ್ ನಟ ಗೋವಿಂದ ಅವರ ಪತ್ನಿ ಸುನಿತಾ ಅಹುಜಾ ಅವರು ನೆಟ್‌ಫ್ಲಿಕ್ಸ್‌ನ ‘ಲಾಕ್ ಅಪ್ 2’ ರಿಯಾಲಿಟಿ ಶೋನಲ್ಲಿ ತಮ್ಮ ಪತಿಯ ಅಕ್ರಮ ಸಂಬಂಧಗಳ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಗೋವಿಂದ ದೊಡ್ಡ ಹೀರೋ ಆಗಿರುವುದರಿಂದ ಯಾರನ್ನೂ ತಡೆಯಲು ಸಾಧ್ಯವಿಲ್ಲ ಎಂದಿರುವ ಅವರು, ಮಕ್ಕಳಿಗಾಗಿ ಬದುಕುತ್ತಿರುವುದಾಗಿ ಹೇಳಿದ್ದಾರೆ.

ಬಾಲಿವುಡ್‌ ಹಿರಿಯ ನಟ ಗೋವಿಂದ ಅವರ ಪತ್ನಿ ಸುನಿತಾ ಅಹುಜಾ ಅವರು ತಮ್ಮ ವೈವಾಹಿಕ ಜೀವನದ ಏಳುಬೀಳುಗಳು ಹಾಗೂ ಪತಿಯ ಅಕ್ರಮ ಸಂಬಂಧಗಳ ಕುರಿತು ರಿಯಾಲಿಟಿ ಶೋ ಒಂದರಲ್ಲಿ ಮುಕ್ತವಾಗಿ ಮಾತನಾಡುವ ಮೂಲಕ ಸದ್ದು ಮಾಡಿದ್ದಾರೆ. ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ‘ಲಾಕ್ ಅಪ್ 2’ ರಿಯಾಲಿಟಿ ಶೋನ ಹೊಸ ಸಂಚಿಕೆಯಲ್ಲಿ ಅವರು ಈ ಸ್ಫೋಟಕ ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ.

ಅವ್ರು ಹೀರೋ, ನಾವೇನೂ ಹೇಳಲು ಸಾಧ್ಯವಿಲ್ಲ!

ಸಹ-ಸ್ಪರ್ಧಿ ಶ್ರೇಯಾ ಕಲ್ರಾ ಅವರೊಂದಿಗೆ ಮಾತನಾಡಿದ ಸುನಿತಾ, "ನಮ್ಮ ವಿವಾಹದ ಆರಂಭದಿಂದಲೂ ಈ ಸವಾಲುಗಳು ಇದ್ದವು. ಅವರೊಬ್ಬ ದೊಡ್ಡ ಹೀರೋ ಆಗಿರುವುದರಿಂದ ನಾವೇನೂ ಹೇಳಲು ಸಾಧ್ಯವಿಲ್ಲ. ಈ ವಯಸ್ಸಿನಲ್ಲಿ ನಾನು ಈಗ ಇದರ ಬಗ್ಗೆ ಹೆಚ್ಚು ಯೋಚಿಸಿದರೆ ನನ್ನ ಡಯಾಬಿಟಿಸ್ ಹೆಚ್ಚಾಗಬಹುದು. ಆದ್ದರಿಂದ ಹೇಗೆ ನಡೆಯುತ್ತಿದೆಯೋ ಹಾಗೆಯೇ ನಡೆಯಲು ಬಿಟ್ಟಿದ್ದೇನೆ. ನಾನು ನನ್ನ ಮಕ್ಕಳಿಗಾಗಿ ಬದುಕುತ್ತಿದ್ದೇನೆ" ಎಂದು ಹೇಳಿಕೊಂಡಿದ್ದಾರೆ.

Govinda: ಭದ್ರತಾ ಸಿಬ್ಬಂದಿ ಮತ್ತು ಪಾಪರಾಜಿ ನಡುವೆ ವಾಗ್ವಾದ; ಕ್ಷಮೆಯಾಚಿಸಿದ ನಟ ಗೋವಿಂದ

ಇಲ್ಯಾರನ್ನು ತಡೆಯಲು ಸಾಧ್ಯ?

ಗೋವಿಂದ ಅವರು ಈಗಲೂ ಅಕ್ರಮ ಸಂಬಂಧ ಹೊಂದಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಯಾರನ್ನಾದರೂ ತಡೆಯಲು ನಮ್ಮಿಂದ ಸಾಧ್ಯವೇ? ನಾನು ದಿನದ 24 ಗಂಟೆಯೂ ಅವರ ಎದುರು ಕುಳಿತುಕೊಳ್ಳಲು ಸಾಧ್ಯವಿಲ್ಲ. ನಮಗೆ ಎರಡು ಮನೆಗಳಿವೆ. ಅವರ ಮನೆಗೆ ಹಲವರು ಬರುತ್ತಾರೆ, ಆದರೆ ನನಗೆ ನನ್ನ ಸ್ವಂತ ಮನೆಯಲ್ಲಿ ಪ್ರೈವೆಸಿ ಅಗತ್ಯವಿದೆ" ಎಂದಿದ್ದಾರೆ.

Actor Govinda: ಬಾಲಿವುಡ್‌ನಲ್ಲಿ ಮತ್ತೊಂದು ವಿಚ್ಛೇದನ?; ದಾಂಪತ್ಯ ಜೀವನಕ್ಕೆ ಅಂತ್ಯ ಹಾಡ್ತಾರಾ ಗೋವಿಂದ-ಸುನೀತಾ?

ಗೋವಿಂದ ಅವರಂತಹ ಮಗ ಬೇಕು, ಪತಿಯಲ್ಲ!

ಗೋವಿಂದ ಅವರು ಒಬ್ಬ ಉತ್ತಮ ಮಗ ಮತ್ತು ಸಹೋದರ ಎಂದು ಶ್ಲಾಘಿಸಿರುವ ಸುನಿತಾ, "ಅವರಿಗೆ 60 ವರ್ಷ ವಯಸ್ಸಾಗಿದೆ, ಆದರೆ ಅವರು ಎಂದಿಗೂ ತಮಗಾಗಿ ಬದುಕಲಿಲ್ಲ. ಸದಾ ಕುಟುಂಬವನ್ನು ಸಲಹುವುದರಲ್ಲೇ ಮಗ್ನರಾಗಿದ್ದರು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

"ನನಗೆ ಗೋವಿಂದ ಅವರಂತಹ ಮಗ ಬೇಕು, ಆದರೆ ಪತಿಯಲ್ಲ" ಎಂಬ ತಮ್ಮ ಈ ಹಿಂದಿನ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಆದಾಗ್ಯೂ, 40 ವರ್ಷಗಳ ಕಾಲ ಜೊತೆಯಾಗಿ ಬಾಳಿದ ನಂತರ ಈಗ ಬೇರ್ಪಡುವುದರ ಬಗ್ಗೆ ಯೋಚಿಸುವುದೂ ಸಹ ಒಂದು ಅಪರಾಧ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದೆಲ್ಲಾ ನನ್ನ ವಿರುದ್ಧದ ಸಂಚು!

ಸುನಿತಾ ಅಹುಜಾ ಕಳೆದ ಒಂದು ವರ್ಷದಿಂದ ಮಾಡುತ್ತಿರುವ ಅಕ್ರಮ ಸಂಬಂಧದ ಆರೋಪಗಳಿಗೆ ನಟ ಗೋವಿಂದ ಇತ್ತೀಚೆಗೆ ಪ್ರತಿಕ್ರಿಯಿಸಿದ್ದರು. "ಇದು ತಮ್ಮ ವಿರುದ್ಧ ನಡೆಯುತ್ತಿರುವ ದೊಡ್ಡ ಸಂಚು. ನಾವು ಮೌನವಾಗಿ ಉಳಿದರೆ ಅದು ನಮ್ಮ ದೌರ್ಬಲ್ಯ ಎಂದು ಬಿಂಬಿತವಾಗುತ್ತದೆ. ನನ್ನ ಕುಟುಂಬದ ಜನರೇ ತಿಳಿಯದೇ ಈ ಸಂಚಿನಲ್ಲಿ ಭಾಗಿಯಾಗಿರಬಹುದು ಮತ್ತು ತಮಗೇ ಗೊತ್ತಿಲ್ಲದಂತೆ ಅವರು ಬಳಕೆಯಾಗುತ್ತಿದ್ದಾರೆ" ಎಂದು ಗೋವಿಂದ ಬೇಸರ ಹೊರಹಾಕಿದ್ದರು.

ಅಂದಹಾಗೆ, 1987ರಲ್ಲಿ ವಿವಾಹವಾಗಿದ್ದ ಗೋವಿಂದ ಮತ್ತು ಸುನಿತಾ ದಂಪತಿಗೆ ಟೀನಾ ಮತ್ತು ಯಶ್ವರ್ಧನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಬಿತ್ತರವಾಗುತ್ತಿರುವ ‘ಲಾಕ್ ಅಪ್ 2’ ಶೋನಲ್ಲಿ ಸುನಿತಾ ಅವರೊಂದಿಗೆ ರಾಮ್ ಕಪೂರ್, ಹರ್ಷದ್ ಚೋಪ್ರಾ, ಧೀರಜ್ ಧೂಪರ್, ಶಿವಾಂಗಿ ಜೋಶಿ, ಶ್ರೇಯಾ ಕಲ್ರಾ ಮತ್ತು ಸೂಫಿ ಮೋತಿವಾಲಾ ಸೇರಿದಂತೆ ಹಲವು ತಾರೆಯರು ಭಾಗವಹಿಸಿದ್ದಾರೆ.