ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Actor Govinda: ಬಾಲಿವುಡ್‌ನಲ್ಲಿ ಮತ್ತೊಂದು ವಿಚ್ಛೇದನ?; ದಾಂಪತ್ಯ ಜೀವನಕ್ಕೆ ಅಂತ್ಯ ಹಾಡ್ತಾರಾ ಗೋವಿಂದ-ಸುನೀತಾ?

90ರ ದಶಕದಲ್ಲಿ ಬಾಲಿವುಡ್‌ ಆಳಿದ್ದ ನಟ ಗೋವಿಂದ ಮತ್ತು ಪತ್ನಿ ಸುನೀತಾ ಅಹುಜಾ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದೆ ಎನ್ನುವ ಸುದ್ದಿ ದಟ್ಟವಾಗಿದೆ. ತಮ್ಮ 37 ವರ್ಷಗಳ ದಾಂಪತ್ಯ ಜೀವನ ಕೊನೆಗೊಳಿಸಲು ಇವರು ಮುಂದಾಗಿದ್ದಾರೆ. ಗೋವಿಂದ ಅವರಿಗೆ ಸುನೀತಾ ಈಗಾಗಲೇ ಡಿವೋರ್ಸ್‌ ನೋಟಿಸ್ ಕಳುಹಿಸಿದ್ದಾರೆ ಎನ್ನಲಾಗಿದೆ.

ಗೋವಿಂದ-ಸುನೀತಾ ದಾಂಪತ್ಯ ಜೀವನ ಅಂತ್ಯ?

ಗೋವಿಂದ-ಸುನೀತಾ ಅಹುಜಾ.

Profile Ramesh B Feb 25, 2025 3:49 PM

ಮುಂಬೈ: ಬಾಲಿವುಡ್‌ನಲ್ಲಿ ಮತ್ತೊಂದು ಜೋಡಿಯ ದಾಂಪತ್ಯ ಜೀವನ ಮುರಿದು ಬಿದ್ದಿದೆ. 90ರ ದಶಕದಲ್ಲಿ ಬಾಲಿವುಡ್‌ ಆಳಿದ್ದ ನಟ ಗೋವಿಂದ (Actor Govinda) ಮತ್ತು ಪತ್ನಿ ಸುನೀತಾ ಅಹುಜಾ (Sunita Ahuja) ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನುವ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಈ ಮೂಲಕ ಇವರ 37 ವರ್ಷಗಳ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ಹೌದು, ಗೋವಿಂದ ಮತ್ತು ಸುನೀತಾ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಈ ಸುದ್ದಿಯನ್ನು ದಂಪತಿ ಇನ್ನೂ ದೃಢಕರಿಸದಿದ್ದರೂ ಇತ್ತೀಚಿನ ಬೆಳವಣಿಗಳಿಂದ ಈ ವದಂತಿಗೆ ರೆಕ್ಕೆ ಪುಕ್ಕ ಬಂದಿದೆ.

ಕೆಲವು ವರದಿಗಳ ಪ್ರಕಾರ ಹಲವು ದಿನಗಳಿಂದ ಈ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರಂತೆ.
61 ವರ್ಷದ ಗೋವಿಂದ ಅವರಿಗೆ ಸುನೀತಾ ಈಗಾಗಲೇ ಡಿವೋರ್ಸ್‌ ನೋಟಿಸ್ ಕಳುಹಿಸಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಹಲವು ಸಾರ್ವಜನಿಕ ಸಮಾರಂಭಗಳಲ್ಲಿ ಸುನೀತಾ ಒಬ್ಬರೇ ಕಾಣಿಸಿಕೊಳ್ಳುತ್ತಿದ್ದರು. ಇದರಿಂದ ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎನ್ನುವ ವದಂತಿ ಕೆಲವು ದಿನಗಳ ಹಿಂದೆಯೇ ಹಬ್ಬಿತ್ತು.



ಸೂಚನೆ ಕೊಟ್ಟಿದ್ದ ಸುನೀತಾ ?

ಕೆಲವು ದಿನಗಳ ಹಿಂದೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸುನೀತಾ ತಾವು ಬೇರ್ಪಡುತ್ತಿರುವ ಬಗ್ಗೆ ಪರೋಕ್ಷವಾಗಿ ಸೂಚನೆ ನೀಡಿದ್ದರು. ಗೋವಿಂದ ಅವರೊಂದಿಗೆ ತಾವು ವಾಸಿಸುತ್ತಿಲ್ಲ ಎಂದು ತಿಳಿಸಿದ್ದರು. ತಾವು ಮಕ್ಕಳೊಂದಿಗೆ ಫ್ಲ್ಯಾಟ್‌ನಲ್ಲಿರುವುದಾಗಿ ತಿಳಿಸಿದ್ದರು. ಫ್ಲ್ಯಾಟ್‌ ಎದುರಿನ ಬಂಲೆಯಲ್ಲಿ ಗೋವಿಂದ ಒಬ್ಬರೇ ಇರುವುದಾಗಿಯೂ ಮಾಹಿತಿ ನೀಡಿದ್ದರು.

ತಮ್ಮ ದಾಂಪತ್ಯ ಜೀವನದ ಆರಂಭಿಕ ದಿನಗಳನ್ನು ಮೆಲುಕು ಹಾಕುತ್ತಾ ತನ್ನ ಪತಿ ಮಹಿಳೆಯರನ್ನು ಸ್ಪರ್ಶಿಸಲು ಸಹ ಹೆದರುತ್ತಿದ್ದರು ಎಂದಿದ್ದರು. ʼʼಗೋವಿಂದ ವಿಶೇಷವಾಗಿ ರೋಮ್ಯಾಂಟಿಕ್ ಅಲ್ಲ. ಈಗ ಅವನು ಹಾಗೆಯೇ ಇದ್ದಾನೆಯೇ ಎಂದು ನನಗೆ ತಿಳಿದಿಲ್ಲ. ನಿಮ್ಮ ಬೆನ್ನಿನ ಹಿಂದೆ ಜನರು ಏನು ಮಾಡುತ್ತಾರೆಂದು ನಮಗೆ ತಿಳಿಯುವುದಿಲ್ಲ, ಎಂದಿಗೂ ಯಾರನ್ನು ನಂಬಬೇಡಿ, ಜನರು ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಾರೆ. ನಾವು ಮದುವೆಯಾಗಿ 37 ವರ್ಷಗಳು ಆಗಿವೆ. ಪತಿ ಎಲ್ಲಿಗೆ ಹೋಗುತ್ತಾನೆ? ಏನು ಮಾಡುತ್ತಾನೆ ನನಗೆ ತಿಳಿದಿಲ್ಲʼʼ ಎಂದು ಸಂದರ್ಶನದಲ್ಲಿ ಬೋಲ್ಡಾಗಿ ಮಾತನಾಡಿದ್ದರು.

ಗೋವಿಂದ ಅವರ ಸ್ವಭಾವದ ಬಗ್ಗೆ ಸಂದರ್ಶನದಲ್ಲಿ ಕೇಳಿದಾಗ, ʼʼನನ್ನ ಮುಂದಿನ ಜನ್ಮದಲ್ಲಿ ಅವನು ನನ್ನ ಗಂಡನಾಗಬಾರದು ಎಂದು ನಾನು ಅವನಿಗೆ ಹೇಳಿದ್ದೆ. ಆತ ಯಾವಾಗಲೂ ಕೆಲಸದಲ್ಲಿ ಬ್ಯುಸಿ ಇರುತ್ತಾನೆ. ಅವನು ತನ್ನ ಹೆಚ್ಚಿನ ಸಮಯವನ್ನು ಕೆಲಸಕ್ಕಾಗಿ ಮೀಸಲಿಡುತ್ತಾನೆ. ನಾವಿಬ್ಬರೂ ಒಟ್ಟಿಗೆ ಸಿನಿಮಾ ನೋಡಲು ಹೋದ ಸಮಯವು ನನಗೆ ನೆನಪಿಲ್ಲʼʼ ಎಂದು ಹೇಳಿದ್ದರು. ಈ ಎಲ್ಲ ಕಾರಣಗಳಿಂದ ಇವರ ಮಧ್ಯೆ ಎಲ್ಲವೂ ಸರಿ ಎಲ್ಲ ಎನ್ನುವ ವದಂತಿ ಹಬ್ಬಿತ್ತು. ಇದೀಗ ಈ ವದಂತಿ ಇನ್ನಷ್ಟು ದಟ್ಟವಾಗಿದೆ.

ಈ ಸುದ್ದಿಯನ್ನೂ ಓದಿ: Actor Govinda: ನಟ ಗೋವಿಂದ -ಸುನೀತಾ ಸಂಬಂಧದಲ್ಲಿ ಬಿರುಕು? ದಾಂಪತ್ಯ ಜೀವನಕ್ಕೆ ಅಂತ್ಯ ಹಾಡ್ತಾರಾ ಈ ಸ್ಟಾರ್‌ ಜೋಡಿ?

ಗೋವಿಂದ ಮತ್ತು ಸುನೀತಾ ಅವರು 1987ರ ಮಾರ್ಚ್‌ನಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಟಿನಾ ಅಜುಜಾ ಮತ್ತು ಯಶವರ್ಧನ್‌ ಅಹುಜಾ ಎಂಬ ಮಕ್ಕಳಿದ್ದಾರೆ.