ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Love Mocktail 3: ಕಥೆ ಕದ್ದ ಆರೋಪಕ್ಕೆ ಖಡಕ್‌ ತಿರುಗೇಟು ನೀಡಿದ ನಟ ʻಡಾರ್ಲಿಂಗ್‌ʼ ಕೃಷ್ಣ - ಮಿಲನಾ ನಾಗರಾಜ್

'ಲವ್ ಮಾಕ್ಟೇಲ್ 3' ಚಿತ್ರದ ಕಥೆ ಕೃತಿಚೌರ್ಯ ಎಂಬ ನಿರ್ದೇಶಕ ರಾಘವೇಂದ್ರ ನಾಯ್ಕ್ ಅವರ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಪ್ರತಿಕ್ರಿಯಿಸಿದ್ದಾರೆ. ತಮಗೆ ಸ್ವಂತವಾಗಿ ಬರೆಯುವ ಸಾಮರ್ಥ್ಯವಿದ್ದು, ಬೇರೆಯವರ ಕಥೆ ಕದ್ದು ಸಿನಿಮಾ ಮಾಡುವ ಸ್ಥಿತಿ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಕೃಷ್ಣ.

ʻಡಾರ್ಲಿಂಗ್‌ʼ ಕೃಷ್ಣ ನಟಿಸಿ, ನಿರ್ದೇಶನ ಮಾಡಿರುವ ʻಲವ್‌ ಮಾಕ್ಟೇಲ್‌ 3ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಮಾಯಿ ಮಾಡುತ್ತಿದೆ. ಇದು ಅವರ ನಿರ್ದೇಶನದ ಸಿನಿಮಾ. ಈ ಮೂಲಕ ಒಂದೆ ಸಿನಿಮಾ ಮೂರನೇ ಸರಣಿಯನ್ನು ನಿರ್ದೇಶಿಸಿ, ಹ್ಯಾಟ್ರಿಕ್‌ ಬಾರಿಸಿ, ಹೊಸ ದಾಖಲೆಗೆ ಪಾತ್ರರಾಗಿದ್ದಾರೆ. ಈ ನಡುವೆ ʻಲವ್‌ ಮಾಕ್ಟೇಲ್‌ 3ʼ ಸಿನಿಮಾದ ಕಥೆಗೆ ಕೃತಿಚೌರ್ಯದ ಆರೋಪ ಕೇಳಿಬಂದಿದೆ. "ನಾನು ಇದೇ ಮಾದರಿಯ ಕಥೆಯನ್ನು ಕೃಷ್ಣ ಅವರಿಗೆ 2 ವರ್ಷಗಳ ಹಿಂದೆ ಹೇಳಿದ್ದೆ" ಎಂದು ನಿರ್ದೇಶಕ ರಾಘವೇಂದ್ರ ನಾಯ್ಕ್‌ ಅವರು ಆರೋಪ ಮಾಡಿದ್ದಾರೆ. ಇದಕ್ಕೆ ಡಾರ್ಲಿಂಗ್‌ ಕೃಷ್ಣ ತಿರುಗೇಟು ನೀಡಿದ್ದಾರೆ.

ಈವರೆಗೂ ನಾನು ಯಾವ ಕಾಂಟ್ರವರ್ಸಿಯಲ್ಲೂ ಇಲ್ಲ

ಈ ಕುರಿತು ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಡಾರ್ಲಿಂಗ್‌ ಕೃಷ್ಣ, "ಈ ರೀತಿ ವಿಚಾರಗಳನ್ನ ನೋಡಿದಾಗ ತುಂಬಾ ಬೇಸರವಾಗುತ್ತದೆ. ನನ್ನ ವೃತ್ತಿ ಬದುಕಿನಲ್ಲಿ ನಾನು ಯಾವ ಕಾಂಟ್ರವರ್ಸಿಯಲ್ಲೂ ಇಲ್ಲ. ಯಾರ ಹೇಳಿಕೆಗಳಿಗೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನಾಯಿತು, ನನ್ನ ಕೆಲಸವಾಯ್ತು ಎಂದು ಇರುವವನು ನಾನು. ಒಂದು ವರ್ಷಕ್ಕೆ ನೂರಾರು ಕಥೆಗಳನ್ನ ನಾವು ಕೇಳುತ್ತೇವೆ" ಎಂದು ಹೇಳಿದ್ದಾರೆ.

ʻಲವ್‌ ಮಾಕ್ಟೇಲ್‌ 3ʼ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ʻಡಾರ್ಲಿಂಗ್‌ʼ ಕೃಷ್ಣ; ಈ ಬಾರಿ ಏನ್‌ ವಿಶೇಷ?

ಕಥೆ ಜಾಸ್ತಿ ಕೇಳುವುದೇ ಈಗ ಡೇಂಜರ್‌ ಆಗಿದೆ

"ಅವರ ಕಥೆಗಳನ್ನು ನಾವು ರಿಜೆಕ್ಟ್‌ ಮಾಡಿದ್ದೇವೆ ಅನ್ನೋ ಕಾರಣಕ್ಕೆ ನಮ್ಮನ್ನ ದ್ವೇಷ ಮಾಡೋಕೆ ಶುರು ಮಾಡುತ್ತಾರೆ. ನಾನು ಆ ಕಥೆಯನ್ನ ಓಕೆ ಮಾಡಿಲ್ಲ ಎಂದರೆ, ಅದಕ್ಕೊಂದು ಕಾರಣ ಇರುತ್ತದೆ. ಇದು ವರ್ಕ್‌ ಆಗುತ್ತದೆ ಅಥವಾ ಇದು ವರ್ಕ್‌ ಆಗೋದಿಲ್ಲ ಎಂಬ ಸಾವಿರ ವಿಚಾರಗಳು ಇರುತ್ತವೆ. ಆದರೆ, ಕಥೆ ಹೇಳುವುದಕ್ಕೆ ಬರುವವರಿಗೆ ನಾವು ಮಾಡಿರುವ ಕಥೆ ಚೆನ್ನಾಗಿದೆ. ಇವರಿಗೇ ಇದನ್ನ ನೋಡಲು ಬರುತ್ತಿಲ್ಲ ಅನ್ನೋ ಫೀಲ್‌ ಇರುತ್ತದೆ. ನಾನು ತುಂಬಾ ಗಮನಿಸಿದ್ದೇನೆ, ರಿಜೆಕ್ಟ್‌ ಮಾಡಿದಮೇಲೆ ತುಂಬಾ ನೆಗೆಟಿವ್ ಆಗಿ ಬದಲಾಗಿಬಿಡ್ತಾರೆ. ಈಗ ಎಷ್ಟು ಕಥೆಗಳನ್ನು ಕೇಳ್ತೀವೋ ಅಷ್ಟು ನಮಗೆ ಡೇಂಜರ್‌ ಆಗಿದೆ" ಎಂದು ಕೃಷ್ಣ ಹೇಳಿದ್ದಾರೆ.

ಕಥೆ ಕದ್ದ ಆರೋಪಕ್ಕೆ ಡಾರ್ಲಿಂಗ್‌ ಕೃಷ್ಣ ತಿರುಗೇಟು



ಕಾನೂನಿನ ಮೂಲಕ ಫೈಟ್‌ ಮಾಡುತ್ತೇನೆ

"ನಾವ್ಯಾಕೆ ಮೂರು ವರ್ಷ ಕಥೆ ಬರೆದೆವು? ಯಾರೋ ಇದು ನಮ್ಮ ಕಥೆ ಅಂತ ಕ್ಲೈಮ್‌ ಮಾಡ್ತಿದ್ದಾರೆ ಅಂತಂದರೆ, ಅದು ದೊಡ್ಡ ಅವಮಾನ. ನಾನು ಅದನ್ನ ಸುಲಭವಾಗಿ ತೆಗೆದುಕೊಳ್ಳಲ್ಲ. ನಾನು ಇದರ ವಿರುದ್ಧ ಕಾನೂನಿನ ಮೂಲಕ ಫೈಟ್‌ ಮಾಡುತ್ತೇನೆ. ರಿಷಬ್‌ ಶೆಟ್ಟಿ ಅವರು ಕಾಂತಾರ ಮಾಡಿದ್ದಾರೆ. ಇದು ನಾನು ಬರೆದ ಕಥೆ ಎಂದು ಹೇಳಿದರೆ, ಹೇಗಿರುತ್ತದೆ..? ಆ ರೀತಿ ನಾವು ಹೇಳುವುದಕ್ಕೆ ಆಗುತ್ತಾ? ಹಾಗೇನಾದರೂ ಹೇಳಿದ್ರೆ ನಾವು ಮೂರ್ಖರಾಗಿ ಬಿಡ್ತಿವಿ ಅಷ್ಟೇ. ನನಗೆ ಬರೆಯಲು ಕಥೆಗಳೇ ಇಲ್ಲ, ಬೇರೆಯವರ ಕಥೆಗಳನ್ನು ತೆಗೆದುಕೊಂಡು ಸಿನಿಮಾ ಮಾಡೋದಾದರೆ, ಸಿನಿಮಾ ಮಾಡೋದೇ ಬಿಟ್ಟುಬಿಡ್ತೇವೆ" ಎಂದಿದ್ದಾರೆ ಕೃಷ್ಣ ಮತ್ತು ಮಿಲನಾ ನಾಗರಾಜ್‌ ದಂಪತಿ ತಿಳಿಸಿದ್ದಾರೆ.