ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಲವ್‌ ಮಾಕ್ಟೇಲ್‌ 3ʼ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ʻಡಾರ್ಲಿಂಗ್‌ʼ ಕೃಷ್ಣ; ಈ ಬಾರಿ ಏನ್‌ ವಿಶೇಷ?

Love Mocktail 3 Release Date: ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ ಮಾಡಿದ್ದ 'ಲವ್ ಮಾಕ್ಟೇಲ್' ಸರಣಿಯ ಮೂರನೇ ಭಾಗ 'ಲವ್ ಮಾಕ್ಟೇಲ್ 3' ತೆರೆಗೆ ಬರಲು ಸಜ್ಜಾಗಿದೆ. ಈ ಬಾರಿ ಕಥೆಯಲ್ಲಿ ತಂದೆ ಮತ್ತು ಮಗಳ ಬಾಂಧವ್ಯದ ವಿಶೇಷ ಎಳೆಯನ್ನು ಡಾರ್ಲಿಂಗ್ ಕೃಷ್ಣ ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದರ ರಿಲೀಸ್‌ ಡೇಟ್‌ ಘೋಷಣೆ ಆಗಿದೆ.

'ಲವ್ ಮಾಕ್ಟೇಲ್ 3' ಸಿನಿಮಾದ ರಿಲೀಸ್ ಡೇಟ್ ಘೋಷಿಸಿದ ʻಡಾರ್ಲಿಂಗ್‌ʼ ಕೃಷ್ಣ!

-

Avinash GR
Avinash GR Jan 4, 2026 7:10 PM

2020ರಲ್ಲಿ ʻಲವ್‌ ಮಾಕ್ಟೇಲ್‌ʼ ಸಿನಿಮಾವನ್ನು ನಿರ್ಮಾಣ, ನಿರ್ದೇಶಿಸಿ ಭರ್ಜರಿ ಯಶಸ್ಸು ಕಂಡವರು ʻಡಾರ್ಲಿಂಗ್‌ʼ ಕೃಷ್ಣ ಮತ್ತು ಮಿಲನಾ ನಾಗರಾಜ್‌ ದಂಪತಿ. ʻಲವ್‌ ಮಾಕ್ಟೇಲ್‌ 2ʼ ಹಿಟ್‌ ಆಗುತ್ತಿದ್ದಂತೆಯೇ, ಅದರ ಸೀಕ್ವೇಲ್‌ ಅನ್ನು ಕೂಡ ಮಾಡಿದ್ದರು ಕೃಷ್ಣ ಮತ್ತು ಮಿಲನಾ. ಇದೀಗ ಕೃಷ್ಣ ʻಲವ್‌ ಮಾಕ್ಟೇಲ್‌ 2ʼ ಸಿನಿಮಾವನ್ನು ಕಂಪ್ಲೀಟ್‌ ಮಾಡಿದ್ದಾರೆ. ಸದ್ದಿಲ್ಲದೇ ಶೂಟಿಂಗ್‌ ಮುಗಿಸಿರುವ ಕೃಷ್ಣ ಅವರು ಅದರ ರಿಲೀಸ್‌ ಡೇಟ್‌ ಅನ್ನು ಕೂಡ ಘೋಷಣೆ ಮಾಡಿದ್ದಾರೆ.

ಈಚೆಗಷ್ಟೇ ʻಲವ್ ಮಾಕ್ಟೇಲ್ 3ʼ ಸಿನಿಮಾದ ಮೋಷನ್ ಪೋಸ್ಟರ್ ಲಾಂಚ್ ಮಾಡಿದ್ದ ಕೃಷ್ಣ, ಆ ಮೂಲಕ ಕುತೂಹಲ ಹುಟ್ಟಿಸಿದ್ದರು. ಇದೀಗ ಹೊಸ ವರ್ಷದ ಉಡುಗೊರೆ ಎಂಬಂತೆ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಡಾಲಿಂಗ್ ಕೃಷ್ಣ ಘೋಷಿಸಿದ್ದಾರೆ. ಹೌದು, ʻಲವ್ ಮಾಕ್ಟೇಲ್ 3ʼ ಸಿನಿಮಾವನ್ನು ಏಪ್ರಿಲ್ 10ರಂದು ರಿಲೀಸ್‌ ಮಾಡಲು ರೆಡಿಯಾಗಿದ್ದಾರೆ ಕೃಷ್ಣ.

ಸತಿಪತಿಗಳಾದ ತಾರಾ ಜೋಡಿ ಡಾರ್ಲಿಂಗ್‌ ಕೃಷ್ಣ-ಮಿಲನಾ ನಾಗರಾಜ್

ಈ ಬಾರಿಯ ಕಥೆ ಏನು?

ಅಂದಹಾಗೆ, ಲವ್‌ ಮಾಕ್ಟೇಲ್‌ ಸಿನಿಮಾದ ಈ ಹಿಂದಿನ ಎರಡು ಆವೃತ್ತಿಗಳಿಗಿಂತ ಲವ್‌ ಮಾಕ್ಟೇಲ್‌ 3 ಸಿನಿಮಾವು ಭಿನ್ನವಾಗಿ ಇರಲಿದೆಯಂತೆ. ಕಥೆ, ನಿರೂಪಣೆ ಸೇರಿದಂತೆ ಎಲ್ಲಾ ಅಂಶಗಳು ಈ ಬಾರಿ ಹೊಸ ಅನುಭೂತಿ ನೀಡಲಿವೆ ಎಂಬುದು ಕೃಷ್ಣ ನೀಡುವ ಭರವಸೆ. ಈ ಬಾರಿ ತಂದೆ ಮಗಳು ಬಾಂಧವ್ಯದ ಕಥೆಯನ್ನು ಹೇಳುವುದಕ್ಕೆ ಡಾರ್ಲಿಂಗ್ ಕೃಷ್ಣ ಮುಂದಾಗಿದ್ದಾರಾ ಎಂಬ ಕುತೂಹಲ ಕೂಡ ಇದೆ. ಕಾರಣ, ಚಿತ್ರದ ಫಸ್ಟ್‌ ಲುಕ್‌ ಆ ರೀತಿಯ ಒಂದು ಕುತೂಹಲವೊಂದನ್ನು ಹುಟ್ಟುಹಾಕಿದೆ.

ಈ ಚಿತ್ರವನ್ನು ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಿರ್ಮಾಣ ಮಾಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ ಮಾಡಿದ್ದು, ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ ಲವ್‌ ಮಾಕ್ಟೇಲ್ 3 ಚಿತ್ರಕ್ಕಿದೆ.

ಡಾರ್ಲಿಂಗ್ ಕೃಷ್ಣ ಜೊತೆ ಮಿಲನಾ ನಟನೆ

ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಕೂಡ ಮುಕ್ತಾಯಗೊಂಡಿದ್ದು, ಬೇಸಿಗೆ ರಜೆಯನ್ನು ಗಮನದಲ್ಲಿಟ್ಟುಕೊಂಡು ಏಪ್ರಿಲ್ 10ರಂದು ಈ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್‌ ಮಾಡಿಕೊಂಡಿದೆ.