ಬಿ.ವಿ. ನಂದಿನಿ ರೆಡ್ಡಿ ನಿರ್ದೇಶನದ 'ಮಾ ಇಂಟಿ ಬಂಗಾರಂ' (Maa Inti Bangaaram) ತೆಲುಗು ಚಲನಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಹಿಳಾ ಪ್ರಧಾನ ತೆಲುಗು ಚಲನಚಿತ್ರವಾಗಿದೆ. ಬಿವಿ ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರವು ಜೂನ್ 19 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿತು. ತಮಿಳಿನಲ್ಲಿ 'ಎಂಗಲ್ ತಂಗಂ' ಎಂಬ ಹೆಸರಿನಲ್ಲಿ ಬಿಡುಗಡೆಯಾಯಿತು. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ಸಮಂತಾ (Samantha), ತಮ್ಮ ನಿರ್ಮಾಣ ಬ್ಯಾನರ್ ಅಡಿಯಲ್ಲಿಯೇ ಚಿತ್ರ ನಿರ್ಮಿಸಿದರು. ಈಗ ಒಟಿಟಿ (OTT Release) ರಿಲೀಸ್ ಡೇಟ್ ಅನೌನ್ಸ್ ಆಗಿದೆ.
ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್
'MIB' ಜುಲೈ 17, 2026 ರಿಂದ ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸಲಿದೆ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಮತ್ತು ಸಮಂತಾ ಅವರ ನಿರ್ಮಾಣ ಬ್ಯಾನರ್ ಜಂಟಿಯಾಗಿ ಈ ಘೋಷಣೆಯನ್ನು ಮಾಡಿದೆ. ಸದ್ಯಕ್ಕೆ ತೆಲುಗು ಆವೃತ್ತಿಯ ಡಿಜಿಟಲ್ ಪ್ರೀಮಿಯರ್ ಮಾತ್ರ ದೃಢೀಕರಿಸಲ್ಪಟ್ಟಿದೆ. ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಡಬ್ ಮಾಡಲಾದ ಆವೃತ್ತಿಗಳ ಬಿಡುಗಡೆ ದಿನಾಂಕಗಳನ್ನು ತಯಾರಕರು ಇನ್ನೂ ಘೋಷಿಸಿಲ್ಲ.
ಇದನ್ನೂ ಓದಿ: Amruthadhaare Serial: ಮನದರಸಿ ಮುಚ್ಚಿಟ್ಟ ಸತ್ಯ ಗೌತಮ್ ಎದುರು! ಭೂಮಿಕಾ ಮನದ ಭಾರ ನಿವಾರಿಸ್ತಾರಾ ದಿವಾನ್ ಸರ್?
ಈ ಚಿತ್ರವನ್ನು ಬಿ.ವಿ. ನಂದಿನಿ ರೆಡ್ಡಿ ನಿರ್ದೇಶಿಸಿದ್ದಾರೆ. ಕಥೆಯನ್ನು ರಾಜ್ ನಿಡಿಮೋರು ರಚಿಸಿದ್ದಾರೆ , ಚಿತ್ರಕಥೆಯನ್ನು ವಸಂತ್ ಮರಿಂಗಂಟಿ ಮತ್ತು ರಾಜ್ ನಿಡಿಮೋರು ಬರೆದಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ.
ನಿರ್ಮಾಪಕರ ಪ್ರಕಾರ, ಈ ಚಿತ್ರ ಬಿಡುಗಡೆಯಾದ 22 ದಿನಗಳಲ್ಲಿ ವಿಶ್ವದಾದ್ಯಂತ ₹100 ಕೋಟಿಗಳಿಗೂ ಹೆಚ್ಚು ಗಳಿಸಿದೆ. ಬಿಡುಗಡೆಯಾದ ಮೊದಲ ದಿನವೇ ಸುಮಾರು ₹13 ಕೋಟಿ ಗಳಿಕೆ ಕಂಡಿತ್ತು.
ಈ ಚಿತ್ರವು ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಹಿಳಾ ಪ್ರಧಾನ ತೆಲುಗು ಚಿತ್ರವಾಗಿ ಹೊರಹೊಮ್ಮಿದೆ ಮತ್ತು OTT ವೇದಿಕೆಯಲ್ಲಿ ತನ್ನ ಬಲವಾದ ಓಟವನ್ನು ಮುಂದುವರಿಸುವ ನಿರೀಕ್ಷೆಯಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
3 ವರ್ಷಗಳ ನಂತರ ಸಮಂತಾ ರುತ್ ಪ್ರಭು ಬಿಗ್ ಸ್ಕ್ರೀನ್ಗೆ ಮರಳಿರುವ ಸಿನಿಮಾ ಇದಾಗಿದೆ. ಕೊನೆಯದಾಗಿ 2023ರಲ್ಲಿ ವಿಜಯ್ ದೇವರಕೊಂಡ ಅವರೊಂದಿಗೆ ಖುಷಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: S Janaki: ʼʼನಮ್ಮ ನಡುವೆ ಜಗಳ ಸೃಷ್ಟಿಸಿದರು!ʼʼ ಎಸ್. ಜಾನಕಿ ನೆನೆದು ಗಾಯಕಿ ಪಿ. ಸುಶೀಲಾ ಭಾವುಕ
ಇದೀಗ ಮಾ ಇಂಟಿ ಬಂಗಾರಂ ಎಂಬ ಹಿಟ್ ಸಿನಿಮಾದೊಂದಿಗೆ ಸಕ್ಸಸ್ಫುಲ್ ಕಮ್ಬ್ಯಾಕ್ ಮಾಡಿದ್ದು, ಅಭಿಮಾನಿಗಳು ಸಂತಸಗೊಂಡಿದ್ದಾರೆ.