ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Priyanka Achar: ಕಿಚ್ಚ ಸುದೀಪ್ ಶಿಷ್ಯನ ಚೊಚ್ಚಲ ಸಿನಿಮಾಗೆ 'ಏಳುಮಲೆ' ಪ್ರಿಯಾಂಕಾ ನಾಯಕಿ!

Kannada Movie: ಏಳುಮಲೆ ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳಿಗೆ ಪರಿಚಿತರಾಗಿದವರು ನಟಿ ಪ್ರಿಯಾಂಕಾ ಆಚಾರ್. ಚೊಚ್ಚಲ ಚಿತ್ರದಲ್ಲಿಯೇ ತಮ್ಮನ್ನು ತಾವು ನಾಯಕಿಯಾಗಿ ನಿರೂಪಿಸಿಕೊಂಡಿರುವ 'ಮಹಾನಟಿ' ಇದೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಮೂಲತಃ ಮೈಸೂರಿನವರಾದ ಪ್ರಿಯಾಂಕಾ ಆಚಾರ್‌ , ಚಿಕ್ಕಂದಿನಿಂದಲೇ ನಟಿಯಾಗಬೇಕೆಂದು ಬಯಸಿದ್ದರು. ಅದಕ್ಕಾಗಿ ಪ್ರಿಯಾಂಕಾ ಸಾಕಷ್ಟು ಸೀರಿಯಲ್ ಮತ್ತು ಸಿನಿಮಾಗಳಿಗೆ ಆಡಿಷನ್‌ ನೀಡಿದ್ದರು.

ಪ್ರಿಯಾಂಕಾ ಆಚಾರ್‌

ಏಳುಮಲೆ (elumale Movie) ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳಿಗೆ ಪರಿಚಿತರಾಗಿದವರು ನಟಿ ಪ್ರಿಯಾಂಕಾ ಆಚಾರ್. ಚೊಚ್ಚಲ ಚಿತ್ರದಲ್ಲಿಯೇ ತಮ್ಮನ್ನು ತಾವು ನಾಯಕಿಯಾಗಿ ನಿರೂಪಿಸಿಕೊಂಡಿರುವ 'ಮಹಾನಟಿ' (Mahanati) ಇದೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಮೂಲತಃ ಮೈಸೂರಿನವರಾದ ಪ್ರಿಯಾಂಕಾ ಆಚಾರ್‌ (Priyanka achar), ಚಿಕ್ಕಂದಿನಿಂದಲೇ ನಟಿಯಾಗಬೇಕೆಂದು ಬಯಸಿದ್ದರು. ಅದಕ್ಕಾಗಿ ಪ್ರಿಯಾಂಕಾ ಸಾಕಷ್ಟು ಸೀರಿಯಲ್ ಮತ್ತು ಸಿನಿಮಾಗಳಿಗೆ ಆಡಿಷನ್‌ (Adition) ನೀಡಿದ್ದರು.

ಇದನ್ನೂ ಓದಿ: ಬೆಂಗಳೂರಿನ ಕಪಾಲಿ ಟಾಕೀಸ್‌ ಜಾಗದಲ್ಲಿ ತಲೆ ಎತ್ತಿದ ಮಹೇಶ್‌ ಬಾಬು ಒಡೆತನದ AMB ಸಿನಿಮಾಸ್;‌ ಮೊದಲ ದಿನ ಯಾವ ಭಾಷೆಯ ಸಿನಿಮಾಗಳಿಗೆ ಜಾಸ್ತಿ ಶೋ?

Zee ಕನ್ನಡ ವಾಹಿನಿಯ 'ಮಹಾನಟಿ' ರಿಯಾಲಿಟಿ ಶೋಗೆ ವಿನ್ನರ್ ಆಗಿ ಹೊರ ಹೊಮ್ಮಿದ ಪ್ರಿಯಾಂಕಾ, ತರುಣ್ ಸುಧೀರ್‌ ನಿರ್ಮಾಣದ ಏಳುಮಲೆ ಸಿನಿಮಾ ಮೂಲಕ ನಾಯಕಿಯಾಗಿ ಬಣ್ಣ ಹಚ್ಚಿದರು. ತಮ್ಮ ಮುಗ್ಧ ಚೆಲುವು, ನಟನೆಯಿಂದ ಗಮನ ಸೆಳೆದ ಅವರ ಎರಡನೇ ಸಿನಿಮಾ ಯಾವುದು ಎಂಬುವುದು ರಿವೀಲ್ ಆಗಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಪ್ತ ಬರಹದಲ್ಲಿ ಗುರುತಿಸಿಕೊಂಡಿರುವ ಕಿರಣ್ ವಿಶ್ವನಾಥ್ ಈಗ ನಿರ್ದೇಶನಕ್ಕೆ ಇಳಿದಿದ್ದಾರೆ. ರನ್ನ, ವಿಕ್ಟರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೋ ಡೈರೆಕ್ಟರ್ ಆಗಿ ದುಡಿದಿರುವ ಕಿರಣ್ ಈಗ ಪೂರ್ಣ ಪ್ರಮಾಣ ನಿರ್ದೇಶನದಲ್ಲಿ ಸಜ್ಜಾಗಿದ್ದಾರೆ.‌ ಕಿರಣ್ ವಿಶ್ವನಾಥ್ ಅವರ ಚೊಚ್ಚಲ ಸಿನಿಮಾದಲ್ಲಿ ನಾಯಕಿಯಾಗಿ ಪ್ರಿಯಾಂಕಾ ಆಚಾರ್ ಅಭಿನಯಿಸಲಿದ್ದಾರೆ.



ಹೀರೋ ಯಾರು?

ಕಿರಣ್ ವಿಶ್ವನಾಥ್ ಅವರ ಮೊದಲ ಸಿನಿಮಾದ ಹೀರೋ ಯಾರು ಅನ್ನೋದನ್ನು ಚಿತ್ರತಂಡ ಮುಂದಿನ ದಿನಗಳಲ್ಲಿ ರಿವೀಲ್ ಮಾಡಲಿದೆ. ಬಹಳ ದೊಡ್ಡದಾಗಿ ಹೀರೋ ಪರಿಚಯಿಸಲು ಚಿತ್ರತಂಡ‌ ಮುಂದಾಗಿದೆ.

ಇದನ್ನೂ ಓದಿ: Bigg Boss Kannada 12: Bigg Boss 12 Finale: ಕುಚಿಕು ದೋಸ್ತಿಗಳೇ ವಿನ್ನರ್‌, ರನ್ನರ್‌! ಗೆದ್ದ ಗಿಲ್ಲಿ ಪಕ್ಕಾ ನಿಂತ ಪಟಾಕಿ ರಕ್ಷಿತಾ

ಗೌರಿ ಆರ್ಟ್ಸ್ ಬ್ಯಾನರ್ ಚೊಚ್ಚಲ ಚಿತ್ರ ಇದಾಗಿದ್ದು, ಒಂದಾದಾಗಿ ಉಳಿದ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ‌ ಪರಿಚಯ ಮಾಡಲಿದೆ.

Yashaswi Devadiga

View all posts by this author