Mamata Kulkarni : ಸನ್ಯಾಸಿಯಾಗಲು ರೆಡಿ ಆಗಿದ್ದ ಮಮತಾ ಕುಲಕರ್ಣಿಗೆ ಬಿಗ್; ಶಾಕ್! ಕಿನ್ನರ ಅಖಾಡದಿಂದಲೇ ಹೊರಗೆ, ಅಂಥದ್ದೇನಾಯ್ತು?
ಬಾಲಿವುಡ್ ಮಾಜಿ ನಟಿ ಮಮತಾ ಕುಲಕರ್ಣಿ ಅವರನ್ನು ಕಿನ್ನರ ಅಖಾಡದ ಮಹಾಮಂಡಲೇಶ್ವರ ಹುದ್ದೆಯಿಂದ ತೆಗೆದುಹಾಕಲಾಗಿದೆ. ಕಿನ್ನರ್ ಅಖಾಡದ ಸಂಸ್ಥಾಪಕ ಅಜಯ್ ದಾಸ್ ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕುಲಕರ್ಣಿ ಅವರ ಜೊತೆಗೆ ಲಕ್ಷ್ಮೀ ನಾರಾಯಣ ತ್ರಿಪಾಠಿ ಅವರನ್ನು ಕೂಡ ಹೊರ ಹಾಕಲಾಗಿದೆ.
ಲಖನೌ: ಬಾಲಿವುಡ್ ಮಾಜಿ ನಟಿ ಹಾಗೂ ರೂಪದರ್ಶಿ ಮಮತಾ ಕುಲಕರ್ಣಿ (Mamata Kulkarni) ಅವರನ್ನು ಅವರನ್ನು ಕಿನ್ನರ ಅಖಾಡದ (Kinnar Akhara) ಮಹಾಮಂಡಲೇಶ್ವರ ಹುದ್ದೆಯಿಂದ (Mahamandaleshwar) ತೆಗೆದುಹಾಕಲಾಗಿದೆ. ಇವರೊಂದಿಗೆ ಲಕ್ಷ್ಮೀ ನಾರಾಯಣ ತ್ರಿಪಾಠಿ (Laxmi Narayan) ಅವರನ್ನು ಆಚಾರ್ಯ ಮಹಾಮಂಡಲೇಶ್ವರ ಹುದ್ದೆಯಿಂದ ತೆಗೆದುಹಾಕಲಾಗಿದೆ. ಇಬ್ಬರನ್ನೂ ಇದೀಗ ಕಣದಿಂದ ಹೊರಹಾಕಲಾಗಿದ್ದು, ಕಿನ್ನರ್ ಅಖಾಡದ ಸಂಸ್ಥಾಪಕ ಅಜಯ್ ದಾಸ್ (Ajay Das) ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಿನ್ನರ್ ಅಖಾಡದ ಸಂಸ್ಥಾಪಕ ಅಜಯ್ ದಾಸ್, ಕಿನ್ನರ್ ಅಖಾಡವನ್ನು ಹೊಸದಾಗಿ ಮರುಸಂಘಟಿಸಲಾಗುವುದು. ಅಲ್ಲದೆ, ನೂತನ ಆಚಾರ್ಯ ಮಹಾಮಂಡಲೇಶ್ವರರನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಹೇಳಿದ್ದಾರೆ.
ಮಮತಾ ಕುಲಕರ್ಣಿ ಅವರು ಕಿನ್ನರ ಅಖಾಡ ಸೇರಿದಾಗಿನಿಂದ ಒಂದೆಲ್ಲ ಒಂದು ವಿವಾದಗಳು ನಡೆಯುತ್ತಿವೆ. ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಮಮತಾ ಕುಲಕರ್ಣಿ ಅವರು ತಮ್ಮ ಪಿಂಡ ದಾನವನ್ನು ಮಾಡಿದ್ದರು. ಆ ನಂತರ ಅವರು ಸನ್ಯಾಸಿ ದೀಕ್ಷೆಯನ್ನು ಸ್ವೀಕರಿಸಿದ್ದರು. ಇದಾದ ನಂತರ ಅವರನ್ನು ಕಿನ್ನರ ಅಖಾಡದ ಮಹಾಮಂಡಲೇಶ್ವರನನ್ನಾಗಿ ಮಾಡಲಾಯಿತು. ಆಗ ವಿವಾದ ಸೃಷ್ಟಿಯಾಗಿತ್ತು.
ಈ ಸುದ್ದಿಯನ್ನೂ ಓದಿ : Mamta Kulkarni: 24 ವರ್ಷಗಳ ಬಳಿಕ ಭಾರತಕ್ಕೆ ಮರಳಿದ ಖ್ಯಾತ ನಟಿ ಮಮತಾ ಕುಲಕರ್ಣಿ ; ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಿಗ್ ರಿಲೀಫ್!
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಮತಾ ಕುಲಕರ್ಣಿ ಅವರು ಲಕ್ಷ್ಮಿ ನಾರಾಯಣ ತ್ರಿಪಾಠಿ ಅವರು ತಮ್ಮ 23 ವರ್ಷಗಳ ತಪಸ್ಸು ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು. ನಂತರ ಮಮತಾ ಕುಲಕರ್ಣಿಯ ಪರೀಕ್ಷೆ ಮಾಡಲಾಯಿತು. ಅದರಲ್ಲಿ ಅವಳು ಉತ್ತೀರ್ಣಳಾಗಿದ್ದರು. ನಂತರ ಆಕೆಯನ್ನು ಮಹಾಮಂಡಲೇಶ್ವರರಾಗಲು ಆಹ್ವಾನಿಸಲಾಯಿತು. ಆ ಬಳಿಕ ತಾನು ಮತ್ತೆ ಬಾಲಿವುಡ್‌ಗೆ ಹೋಗುವುದಿಲ್ಲ, ಸನಾತನ ಧರ್ಮವನ್ನು ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದರು.