Mamta Kulkarni: ಟಾಪ್‌ಲೆಸ್ ಫೋಟೋಶೂಟ್ ಬಗ್ಗೆ ಮೌನ ಮುರಿದ ನಟಿ ಮಮತಾ ಕುಲಕರ್ಣಿ!
ನಾನು 9ನೇ ತರಗತಿಯಲ್ಲಿ ಓದುತ್ತಿರಬೇಕಾದರೆ ಈ ಫೋಟೋ ಶೂಟ್ ಮಾಡಿಸಿದ್ದರು. ಆಗ ನನಗೆ ಸೆಕ್ಸ್ ಬಗ್ಗೆಯಾಗಲಿ, ನ್ಯೂಡ್ ಫೋಟೋ ಶೂಟ್ ಇದ್ಯಾವುದು ಗೊತ್ತಿರಲಿಲ್ಲ. ಆ ಸಮಯದಲ್ಲಿ ನಾನು ತುಂಬಾ ಮುಗ್ಧಳಾಗಿದ್ದೆ. ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದೆ ಎಂದು ನಟಿ ಮಮತಾ ಕುಲಕರ್ಣಿ ಹೇಳಿಕೊಂಡಿದ್ದಾರೆ.
ನವದೆಹಲಿ: 90ರ ದಶಕದ ಬಾಲಿವುಡ್ ನಟಿ ಮಮತಾ ಕುಲಕರ್ಣಿ (Mamta Kulkarni) ಅವರು ಮಹಾಕುಂಭ ಮೇಳದಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದು ಇತ್ತೀಚೆಗಷ್ಟೇ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಸನ್ಯಾಸಿಯಾದ ಬಳಿಕ ನಟಿ ಟಾಪ್‌ಲೆಸ್ ಫೋಟೋ ಶೂಟ್ ಮಾಡಿಸಿಕೊಂಡ ಬಗ್ಗೆ ಸಂದರ್ಶನ ವೊಂದರಲ್ಲಿ ಮಾತನಾಡಿದ್ದು ವೈಯಕ್ತಿಕ ಜೀವನದಿಂದ ವೃತ್ತಿಪರ ಜೀವನದವರೆಗಿನ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ಮಾಜಿ ನಟಿ ಮಮತಾ ಕುಲಕರ್ಣಿ ಅವರು ಕಿನ್ನರ್ ಅಖಾಡದ ಮಹಾಮಂಡಲೇಶ್ವರ ಹುದ್ದೆಯನ್ನು ಹತ್ತು ಕೋಟಿ ಹಣ ನೀಡಿ ಖರೀದಿ ಮಾಡಿದ್ದು ಎಂಬ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದ್ದು ಇದು ಸುಳ್ಳು ಎಂದು ನಟಿ ಸ್ಪಷ್ಟೀಕರಿಸಿದ್ದಾರೆ. ಈ ನಡುವೆ ಆಪ್ ಕಿ ಅದಾಲತ್ ಸಂದರ್ಶನದಲ್ಲಿ ಸ್ಟಾರ್ ಡಸ್ಟ್ ನಿಯತಕಾಲಿಕೆಯಲ್ಲಿ ಅರೆ ನಗ್ನ ಫೋಟೋ ಶೂಟ್ ನಲ್ಲಿ ಕಾಣಿಸಿಕೊಂಡಿದ್ದರ ಬಗ್ಗೆ ಸಂದರ್ಶಕ ರೊಬ್ಬರು ಪ್ರಶ್ನೆ ಮಾಡಿದ್ದು ಟಾಪ್ ಲೆಸ್ ಆಗಿ ಫೋಟೋ ತೆಗೆಯಲು ನಿಮ್ಮ ಆಕ್ಷೇಪ ಇರಲಿಲ್ಲವೆ ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ನಟಿ ನಾನು 9ನೇ ತರಗತಿಯಲ್ಲಿ ಓದುತ್ತಿರಬೇಕಾದರೆ ಈ ಫೋಟೋ ಶೂಟ್ ಮಾಡಿಸಿದ್ದರು. ಆಗ ನನಗೆ ಸೆಕ್ಸ್ ಬಗ್ಗೆಯಾಗಲಿ, ನ್ಯೂಡ್ ಫೋಟೋ ಶೂಟ್ ಇದ್ಯಾವುದು ಗೊತ್ತಿರಲಿಲ್ಲ. ಆ ಸಮಯದಲ್ಲಿ ನಾನು ತುಂಬಾ ಮುಗ್ಧಳಾಗಿದ್ದೆ. ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದೆ ಎಂದು ನಟಿ ಹೇಳಿಕೊಂಡಿದ್ದಾರೆ.
mnನಿಯತಕಾಲಿಕೆಯವರು ನನಗೆ ಡೆಮಿ ಮೂರ್ ಅವರ ಚಿತ್ರ ತೋರಿಸಿದ್ದರು. ಆದರೆ ಅದು ನನಗೆ ಅಶ್ಲೀಲ ಎಂದು ಅನಿಸಿಲ್ಲ ಎಂದಿದ್ದಾರೆ. ಸೆಮಿ ನ್ಯೂಡ್ ಫೋಟೋ ಶೂಟ್ ನಾನು ಮಾಡಿದರೂ ಅದರ ಬಗ್ಗೆ ನನಗೆ ಅಷ್ಟಾಗಿ ಗೊತ್ತಿರಲಿಲ್ಲ. ಕಳೆದ 23 ವರ್ಷಗಳಲ್ಲಿ ನಾನು ಯಾವುದೇ ಅಶ್ಲೀಲ ವಿಡಿಯೊ ವೀಕ್ಷಿಸಿಲ್ಲ. ನಾನು ಸೆಮಿ ನ್ಯೂಡ್ ಫೋಟೋಶೂಟ್ ಮಾಡಿದಾಗ ಅದರ ಬಗ್ಗೆ ನನಗೆ ಗೊತ್ತೇ ಇರಲಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ.
ಇದನ್ನು ಓದಿ:Chikkaballapur News: ಯುವಜನ ಮೇಳ, ಯುವ ಸಂಪರ್ಕಸಭೆ ಪುನರ್ ಆರಂಭಿಸಲಿ: ರಾಷ್ಟ್ರೀಯ ಯುವ ಪುರಸ್ಕೃತರ ವೇದಿಕೆ ಒತ್ತಾಯ
ಬಾಲಿವುಡ್ ಘಾಟಕ್ ಸಿನಿಮಾದ ಕೋಯಿ ಜಾಯೆ ತೊಲೇ ಆಯೆ ಐಟಂ ಸಾಂಗ್‌ನಲ್ಲಿ ಅಭಿನಯಿಸಿರುವ ಬಗ್ಗೆ ನಟಿ ಮಾತನಾಡಿದ್ದು ಈ ಸಿನಿಮಾ ದಲ್ಲಿ ನೃತ್ಯ ಮಾಡಲು ನಿರ್ದೇಶಕ ರಾಜ್ ಕುಮಾರ್ ಸಂತೋಷಿ ಅವರು ನನಗೆ ಮನವಿ ಮಾಡಿದ್ದರು ಹಾಗಾಗಿ ಅಭಿನಯಿಸಿದ್ದೇನೆ. ಅಶ್ಲೀಲ ಸಾಂಗ್ ನಲ್ಲಿ ನೃತ್ಯ ಮಾಡುವಾಗ ಅಲ್ಲಿನ ಕೊರಿಯೋಗ್ರಫಿ ನೋಡುತ್ತೇವೆ. ಹೆಜ್ಜೆ ಸರಿಯಾಗಿ ಹಾಕುತ್ತಿದ್ದೇವಾ? ಎಂಬ ಬಗ್ಗೆ ನಮ್ಮ ಗಮನ ಇರುತ್ತದೆ. ಹಾಡಿನ ಒಳಾರ್ಥದ ಬಗ್ಗೆಯಾಗಲಿ ಅದರಲ್ಲಿರುವ ಸಂಭಾಷಣೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನಟಿ ಹೇಳಿಕೆ ನೀಡಿದ್ದಾರೆ.