ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Manasa Manohar: ಗಂಡು ಮಗುವಿಗೆ ತಾಯಿಯಾದ ನಟಿ ಮಾನಸ ಮನೋಹರ್ ; ಫೋಟೋ ವೈರಲ್

Manasa Manohar:‌ ಜೀ ಕನ್ನಡʼ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʻಜೊತೆ ಜೊತೆಯಲಿʼ ಧಾರಾವಾಹಿಯಲ್ಲಿ ʻಮೀರಾʼ ಎಂಬ ಪಾತ್ರದಲ್ಲಿ ಕಾಣಿಸಿಕೊಂಡು ಫೇಮಸ್‌ ಆದವರು ನಟಿ ಮಾನಸಾ ಮನೋಹರ್‌ . ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನೀಲೂ ಪಾತ್ರದ ಮೂಲಕ ಮಿಂಚಿದ ನಟಿ ಮಾನಸ ಮನೋಹರ್ ಇದೀಗ ಗಂಡು ಮಗುವಿಗೆ ತಾಯಿಯಾಗಿದ್ದಾರೆ.

ಮಾನಸ ಮನೋಹರ್‌

ʻಜೀ ಕನ್ನಡʼ ವಾಹಿನಿಯಲ್ಲಿ (Zee Kannada) ಪ್ರಸಾರವಾಗುತ್ತಿದ್ದ ʻಜೊತೆ ಜೊತೆಯಲಿʼ ಧಾರಾವಾಹಿಯಲ್ಲಿ ʻಮೀರಾʼ ಎಂಬ ಪಾತ್ರದಲ್ಲಿ ಕಾಣಿಸಿಕೊಂಡು ಫೇಮಸ್‌ ಆದವರು ನಟಿ ಮಾನಸಾ ಮನೋಹರ್‌ (manasa manohar) . ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನೀಲೂ ಪಾತ್ರದ ಮೂಲಕ ಮಿಂಚಿದ ನಟಿ ಮಾನಸ ಮನೋಹರ್ ಇದೀಗ ಗಂಡು (Baby Boy) ಮಗುವಿಗೆ ತಾಯಿಯಾಗಿದ್ದಾರೆ. ಮಗುವಿನೊಂದಿಗೆ ಫೋಟೊವನ್ನು ಸಹ ಹಂಚಿಕೊಂಡಿದ್ದಾರೆ.

ಪೋಸ್ಟ್‌ ಏನು?

ಮಾನಸ ಮನೋಹರ್ ಈ ಕುರಿತು ತಮ್ಮ ಸಂತಸವನ್ನು ಹಂಚಿಕೊಂಡಿದ್ದು, ನಮ್ಮ ಅತ್ಯಂತ ಅಮೂಲ್ಯವಾದ ಮ್ಯಾನಿಫೆಸ್ಟೇಶನ್ ಇಲ್ಲಿದೆ. ಇಟ್ಸ್ ಬಾಯ್. ‘1.5.2026’ ಎಲ್ಲಾ ಗೊಂದಲಗಳ ನಡುವೆ ಇದು ನಮ್ಮ ಅತ್ಯಂತ ಪ್ರೀತಿಯ ದಿನವಾಗಿರುತ್ತದೆ. ನನ್ನ ತಂದೆ ಹೇಗೋ ಈ ಮುದ್ದಾದ ಪುಟ್ಟ ರೂಪದಲ್ಲಿ ನಮ್ಮ ಜೀವನಕ್ಕೆ ಮರಳಿದ್ದಾರೆಂದು ನನಗೆ ಅನಿಸುತ್ತದೆ - ನನ್ನ - ಬೀ ಎಂದು ಮಾನಸ ಮನೋಹರ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Shilpa Shetty : ಶಿಲ್ಪಾ ಶೆಟ್ಟಿಗೆ ಗಂಭೀರ ಗಾಯ: ಕಾಲು ಮೂಳೆ ಮುರಿತ

ನಟಿ ಮಾನಸ ಮನೋಹರ್ ದಂಪತಿಗೆ ಕನ್ನಡ ಕಿರುತೆರೆ ಹಿರಿತೆರೆಯ ಹಲವಾರು ನಟ ನಟಿಯರು ಶುಭಾಶಯ ಕೋರಿದ್ದಾರೆ. ತಾಯಿ ಮಗು ಆರೋಗ್ಯದಿಂದ ಇರಲಿ ಎಂದು ಆಶೀರ್ವದಿಸಿದ್ದಾರೆ.

ಮಾನಸ ಆಸ್ಪತ್ರೆಯ ಬೆಡ್ ಮೇಲೆ ಇರುವಂತಹ ಫೋಟೊಗಳು, ತಂದೆ ಪ್ರೀತಮ್ ಮಗುವನ್ನು ಹಿಡಿದಿರುವಂತಹ ಫೋಟೊ, ಅಮ್ಮನ ಎದೆ ಮೇಲೆ ಮಗು ಮಲಗಿರುವ ಫೋಟೊ ವೈರಲ್‌ ಆಗಿದೆ.

2024ರ ನವಂಬರ್ ತಿಂಗಳಲ್ಲಿ ಮಾನಸ ಮನೋಹರ್ ಬ್ಯುಸಿನೆಸ್ ಮ್ಯಾನ್ ಆಗಿರುವ ಪ್ರೀತಂ ಚಂದ್ರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದು ಅವರ ಎರಡನೇ ವಿವಾಹವಾಗಿತ್ತು.



'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್‌ನಲ್ಲಿ ನಟಿಸುತ್ತಿದ್ದಾರೆ. ಸಿದ್ದೇಗೌಡ ಅತ್ತಿಗೆಯ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ಶಾಂಭವಿ' ಧಾರಾವಾಹಿಯಲ್ಲಿಯೂ ಮಾನಸ ಮನೋಹರ್ ನಟಿಸಿದ್ದಾರೆ.

ನಟನೆಯ ಜೊತೆ ಜೊತೆಗೆ ವೈವಾಹಿಕ ಜೀವನವನ್ನೂ ಎಂಜಾಯ್ ಮಾಡುತ್ತಿದ್ದಾರೆ. 'ಅಶ್ವಿನಿ ನಕ್ಷತ್ರ', 'ಶುಭ ವಿವಾಹ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಶುಭ ವಿವಾಹದ ಊರ್ಮಿಳಾ ಪಾತ್ರ ವೀಕ್ಷಕರ ಅಚ್ಚು ಮೆಚ್ಚಿನ ಧಾರಾವಾಹಿ.

ಇದನ್ನೂ ಓದಿ: Vijay Raghavendra: ವಿಜಯ ರಾಘವೇಂದ್ರ `ಶ್ರೀಮತಿ ಸಿಂಧೂರ' ಮೂವಿ; ಟೀಸರ್ ಮತ್ತು ಹಾಡುಗಳು ಬಿಡುಗಡೆ

ಮಾನಸಾ ಮನೋಹರ್ ಕನ್ನಡ ಜೊತೆಗೆ ತೆಲುಗು ಧಾರಾವಾಹಿಗಳಲ್ಲೂ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ.

Yashaswi Devadiga

View all posts by this author