ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mark Movie: ಕಿಚ್ಚ ಸುದೀಪ್‌ ʻಮಾರ್ಕ್' ಚಿತ್ರದ ಜೊತೆ ಏರ್‌ಟೆಲ್ ಒಪ್ಪಂದ; ಗ್ರಾಹಕರಿಗೆ ಇರೋ ವಿಶೇಷ ಆಫರ್ ಏನು?

Sudeep: ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಚಿತ್ರವನ್ನು ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಈ ಒಪ್ಪಂದದ ಅಂಗವಾಗಿ ಕಿಚ್ಚ ಸುದೀಪ್ ಅವರು ಏರ್‌ಟೆಲ್ ಕರ್ನಾಟಕದ ಸಿಇಒ ರಜನೀಶ್ ವರ್ಮಾ ಅವರನ್ನು ಭೇಟಿ ಮಾಡಿದರು. . ಈ ವರ್ಷದ ಬಹುನಿರೀಕ್ಷಿತ, ಕಿಚ್ಚ ಸುದೀಪ್ಅ ಭಿನಯದ 'ಮಾರ್ಕ್' ಚಿತ್ರದ ಜೊತೆ ಏರ್‌ಟೆಲ್ ಒಪ್ಪಂದ ಮಾಡಿಕೊಂಡಿದೆ.

ಕಿಚ್ಚ ಸುದೀಪ್‌

ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್‌ಟೆಲ್ (Airtel), ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದರ ಜೊತೆ ಅಧಿಕೃತವಾಗಿ ಕೈಜೋಡಿಸಿದೆ. ಈ ವರ್ಷದ ಬಹುನಿರೀಕ್ಷಿತ, ಕಿಚ್ಚ ಸುದೀಪ್ (Sudeep) ಅಭಿನಯದ 'ಮಾರ್ಕ್' (Mark Movie) ಚಿತ್ರದ ಜೊತೆ ಏರ್‌ಟೆಲ್ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದದ ಪ್ರಕಾರ ಕರ್ನಾಟಕದ 60,000 ಅಂಗಡಿಗಳಲ್ಲಿ 10 ಲಕ್ಷ ವಿಶೇಷ 'ಮಾರ್ಕ್' ಚಿತ್ರದ ಪೋಸ್ಟರ್ ಇರುವ ಸಿಮ್ ಪ್ಯಾಕ್‌ಗಳು ಮಾರಾಟವಾಗಲಿದೆ. ಸ್ಪೆಷಲ್ 9 ನಂಬರ್ ಸೀರಿಸ್‌ ಸಿಮ್‌ಗಳು, ರಿಯಾಯಿತಿ ಪ್ಯಾಕ್‌ಗಳು, 100 ಅದೃಷ್ಟಶಾಲಿ ವಿಜೇತರು ಮತ್ತು ಇನ್ನೂ ಸಾಕಷ್ಟು ಸಂಗತಿಗಳಿವೆ. ಈ ಹಿಂದೆ ದಕ್ಷಿಣದ ಕೆಲ ಸಿನಿಮಾಗಳ ಜೊತೆ ಏರ್‌ಟೆಲ್ ಇದೇ ರೀತಿ ಒಪ್ಪಂದ ಮಾಡಿಕೊಂಡಿತ್ತು.

ಇದನ್ನೂ ಓದಿ: Bigg Boss Kannada 12: ಆಡಿದ ಮಾತಿಗೆ ಅಶ್ವಿನಿ ಬಳಿ ಕೈ ಮುಗಿದು ಕ್ಷಮೆ ಕೇಳಿದ ಗಿಲ್ಲಿ

ವಿಶ್ವಾದ್ಯಂತ ಬಿಡುಗಡೆ

ಈ ಅದ್ದೂರಿ ಚಿತ್ರವು ಡಿಸೆಂಬರ್ 25 ರಂದು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.



ಏರ್‌ಟೆಲ್ ಗ್ರಾಹಕರಿಗೆ ವಿಶೇಷ ಆಫರ್:

ಈ ಸಂಭ್ರಮವನ್ನು ಆಚರಿಸಲು ಏರ್‌ಟೆಲ್ "ಮಾರ್ಕ್ ಎಕ್ಸ್‌ಕ್ಲೂಸಿವ್ ಪ್ಯಾಕ್" ಅನ್ನು ಪರಿಚಯಿಸಿದೆ.

* ಇದರ ಅಡಿಯಲ್ಲಿ, ಗ್ರಾಹಕರು ಹೊಸದಾಗಿ ಬಿಡುಗಡೆಯಾದ '9 ಸೀರೀಸ್' (9 series) ನಂಬರ್‌ಗಳಿರುವ ಸಿಮ್ ಕಾರ್ಡ್‌ಗಳನ್ನು ಪಡೆಯಬಹುದು.

* ಅಷ್ಟೇ ಅಲ್ಲದೆ, ಅಭಿಮಾನಿಗಳಿಗಾಗಿ ಒಂದು ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದ್ದು, ಇದರಲ್ಲಿ ಗೆಲ್ಲುವ 100 ಅದೃಷ್ಟಶಾಲಿಗಳಿಗೆ 'ಮಾರ್ಕ್' ಚಿತ್ರದ ಉಚಿತ ಟಿಕೆಟ್‌ಗಳನ್ನು ಬಹುಮಾನವಾಗಿ ನೀಡಲಾಗುವುದು. ಇನ್ನು ಚಿತ್ರದಲ್ಲಿ ಅರ್ಜುನ್ ಮಾರ್ಕಂಡೆ ಎಂಬ ಪಾತ್ರದಲ್ಲಿ ಸುದೀಪ್ ನಟಿಸಿದ್ದಾರೆ.

ಪಾತ್ರಕ್ಕಾಗಿ ಗುಂಗುರು ಕೂದಲಿನಲ್ಲಿ ಸ್ಪೆಷಲ್ ಹೇರ್ ಸ್ಟೈಲ್ ಮಾಡಿಸಿಕೊಂಡು ಮಿಂಚಿದ್ದಾರೆ. ಚಿತ್ರೀಕರಣ ಮುಗಿದರೂ ಅದೇ ಹೇರ್‌ಸ್ಟೈಲ್ ಮುಂದುವರೆಸುತ್ತಿದ್ದಾರೆ. 'ಮ್ಯಾಕ್ಸ್' ಬಳಿಕ 'ಬಿಲ್ಲ ರಂಗ ಬಾಷ' ಚಿತ್ರವನ್ನು ಸುದೀಪ್ ಆರಂಭಿಸಿದ್ದರು. ಒಂದು ಶೆಡ್ಯೂಲ್ ಬಳಿಕ 'ಮಾರ್ಕ್' ಚಿತ್ರ ಶುರುವಾಗಿತ್ತು.

ಈ ಒಪ್ಪಂದದ ಅಂಗವಾಗಿ ಕಿಚ್ಚ ಸುದೀಪ್ ಅವರು ಏರ್‌ಟೆಲ್ ಕರ್ನಾಟಕದ ಸಿಇಒ ರಜನೀಶ್ ವರ್ಮಾ ಅವರನ್ನು ಭೇಟಿ ಮಾಡಿದರು.

ಇದನ್ನೂ ಓದಿ: Bigg Boss Kannada 12: ವುಮೆನ್ ಕಾರ್ಡ್​ ಪ್ಲೇ ಮಾಡಿದ ಅಶ್ವಿನಿ ಗೌಡಗೆ ಕಿಚ್ಚನ ಖಡಕ್‌ ಕ್ಲಾಸ್‌!

ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಚಿತ್ರವನ್ನು ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ.

Yashaswi Devadiga

View all posts by this author