Mass Jathara OTT Release: ಒಟಿಟಿಗೆ ಎಂಟ್ರಿ ಕೊಡ್ತಿದೆ ಶ್ರೀಲೀಲಾ - ರವಿತೇಜ ಸಿನಿಮಾ, ಯಾವಾಗ? ಸ್ಟ್ರೀಮಿಂಗ್ ಎಲ್ಲಿ?
OTT Movie: ಟಾಲಿವುಡ್ ನಟ ಮಾಸ್ ಮಾಹಾರಾಜ ರವಿ ತೇಜ ಅಭಿನಯದ ʻಮಾಸ್ ಜಾತರ ಚಿತ್ರʼ ಒಟಿಟಿಗೆ ಎಂಟ್ರಿ ಕೊಡಲಿದೆ. ಸಿನಿಮಾ ರಿಲೀಸ್ ಆದ ಮೇಲೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು. ಚಿತ್ರ ಉತ್ತಮ ಪ್ರದರ್ಶನ ನೀಡದಿರಲು ಪ್ರಮುಖ ಕಾರಣವೆಂದರೆ ಬಿಡುಗಡೆಯಾದ ನಂತರ ಅಂತರ್ಜಾಲದಲ್ಲಿ ಸಿಕ್ಕ ನಕಾರಾತ್ಮಕ ವಿಮರ್ಶೆಗಳು. ಇದೀಗ ಒಟಿಟಿ ರಿಲೀಸ್ ಡೇಟ್ ಅನೌನ್ಸ್ ಆಗಿದೆ.
ಬಿಗ್ ಬಾಸ್ ಕನ್ನಡ -
ಒಟಿಟಿ ಪ್ರಿಯರಿಗೆ ಸಿಹಿ ಸುದ್ದಿ ಇದೆ. ಟಾಲಿವುಡ್ ನಟ ಮಾಸ್ ಮಾಹಾರಾಜ ರವಿ ತೇಜ (Ravi Teja) ಅಭಿನಯದ ʻಮಾಸ್ ಜಾತರ ಚಿತ್ರʼ (Mass Jathara Movie) ಒಟಿಟಿಗೆ ಎಂಟ್ರಿ ಕೊಡಲಿದೆ. ಸಿನಿಮಾ ರಿಲೀಸ್ ಆದ ಮೇಲೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು. ಈ ಚಿತ್ರದಲ್ಲಿ ಕನ್ನಡತಿ ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ, ಆದರೆ ಜನಪ್ರಿಯತೆಯ ಹೊರತಾಗಿಯೂ, ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿತು. ಯಾವ ಒಟಿಟಿಗೆ ಎಂಟ್ರಿ? ಸ್ಟ್ರೀಮಿಂಗ್ ಯಾವಾಗಿನಿಂದ?
ನಕಾರಾತ್ಮಕ ವಿಮರ್ಶೆಗಳು
ಸಿನಿಮಾ ರಿಲೀಸ್ ಆದ ಬಳಿಕ ನೆಗೆಟಿವ್ ವಿಮರ್ಶೆಗಳು ಬಂದವು. ಚಿತ್ರ ಉತ್ತಮ ಪ್ರದರ್ಶನ ನೀಡದಿರಲು ಪ್ರಮುಖ ಕಾರಣವೆಂದರೆ ಬಿಡುಗಡೆಯಾದ ನಂತರ ಅಂತರ್ಜಾಲದಲ್ಲಿ ಸಿಕ್ಕ ನಕಾರಾತ್ಮಕ ವಿಮರ್ಶೆಗಳು. ಇದೀಗ ಒಟಿಟಿ ರಿಲೀಸ್ ಡೇಟ್ ಅನೌನ್ಸ್ ಆಗಿದೆ.
ಇದನ್ನೂ ಓದಿ: Dharmendra Punjabi Films OTT: ಬಾಲಿವುಡ್ ಹೀಮ್ಯಾನ್‌ನ ಬೆಸ್ಟ್ ಪಂಜಾಬಿ ಚಲನಚಿತ್ರಗಳಿವು; ಯಾವ ಒಟಿಟಿಯಲ್ಲಿದೆ?
ಸ್ಟ್ರೀಮಿಂಗ್ ಎಲ್ಲಿ?
ಶುಕ್ರವಾರ, ನವೆಂಬರ್ 28, 2025 ರಂದು ಪ್ರಥಮ ಪ್ರದರ್ಶನಗೊಳ್ಳಲಿದೆ ಎಂದು ನೆಟ್‌ಫ್ಲಿಕ್ಸ್ ಘೋಷಿಸಿದೆ. ರವಿತೇಜ ಅವರ ಇತ್ತೀಚಿನ ಚಿತ್ರವು ಅಕ್ಟೋಬರ್ 31, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಸಾಮಾನ್ಯವಾಗಿ, ಚಲನಚಿತ್ರದ ಡಿಜಿಟಲ್ ಪ್ರೀಮಿಯರ್ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 60 ರಿಂದ 90 ದಿನಗಳ ನಂತರ ಬರುತ್ತದೆ.
Ee massodu mee intiki jathara ni theeskosthunnadu! 🔥 pic.twitter.com/Fhc3TpTqL3
— Netflix India South (@Netflix_INSouth) November 25, 2025
ಆದರೆ ಚಿತ್ರವು ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ OTT ಬಿಡುಗಡೆಗೆ ಸಿದ್ಧವಾಗಿದೆ. ರವಿತೇಜ ಅವರ ಈ ಸಿನಿಮಾ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಮಾತ್ರ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಇದರರ್ಥ ಪ್ರೇಕ್ಷಕರು ಅದರ ಹಿಂದಿ ಆವೃತ್ತಿಗಾಗಿ ಹೆಚ್ಚು ಸಮಯ ಕಾಯಬೇಕಾಗುತ್ತದೆ.
ಇದನ್ನೂ ಓದಿ: Bigg Boss Kannada 12: ಅಶ್ವಿನಿ ಸೈಲೆಂಟ್ ಇರೋದೇ ಗಿಲ್ಲಿಗೆ ಸಮಸ್ಯೆ ಅಂತೆ! ಧನುಷ್ ಹೇಳಿಕೆಗೆ ಫ್ಯಾನ್ಸ್ ಕೆಂಡ
ಮಾಸ್ ಜಾತರ ಸಿನಿಮಾ ಬಹು ಕೋಟಿಯಲ್ಲಿಯೇ ರೆಡಿ ಆಗಿದೆ. 90 ಕೋಟಿ ಬಜೆಟ್ ಅಲ್ಲಿಯೇ ಈ ಚಿತ್ರ ನಿರ್ಮಾಣಗೊಂಡಿದೆ. ಚಿತ್ರದಲ್ಲಿ ಮಸ್ತ್ ರೋಲ್ ಅನ್ನೇ ಮಾಡಿದ್ದಾರೆ. ಹಳ್ಳಿ ಹುಡುಗಿಯ ಪಾತ್ರವೇ ಇದಾಗಿದೆ. ರವಿ ತೇಜ ಆ್ಯಕ್ಷನ್‌ಗಳೂ ಜೋರಾಗಿಯೇ ಇವೆ. ಆ್ಯಕ್ಷನ್ ಪ್ರಿಯರಿಗೆ ಈ ಚಿತ್ರ ಹೇಳಿ ಮಾಡಿಸಿದಂತೇನೆ ಇದೆ. ಭೀಮ್ಸ್ ಸೆಸಿರೊಲಿಯೊ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ವಿಧು ಅಯ್ಯಣ್ಣ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ.