ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸದ್ದಿಲ್ಲದೇ ಕರ್ನಾಟಕ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ Obsession; ಮ್ಯಾಜಿಕ್‌ ಮಾಡಿದ 7 ಕೋಟಿ ಬಜೆಟ್‌ನ ಹಾಲಿವುಡ್‌ ಸಿನಿಮಾ!

ಯಾವುದೇ ಸ್ಟಾರ್ ತಾರಾಗಣವಿಲ್ಲದೆ ಕೇವಲ 7 ಕೋಟಿ ಬಜೆಟ್‌ನಲ್ಲಿ ಕರಿ ಬೇಕರ್ ನಿರ್ದೇಶಿಸಿರುವ ಹಾಲಿವುಡ್‌ನ ‘ಅಬ್ಸೆಷನ್’ ಸಿನಿಮಾ ಭಾರತದಲ್ಲಿ 15 ದಿನಗಳಲ್ಲಿ 65+ ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ. ಯಾವುದೇ ಪ್ರಚಾರವಿಲ್ಲದೆ ಕರ್ನಾಟಕದಲ್ಲೂ ದಾಖಲೆ ಪ್ರಮಾಣದ ಗಳಿಕೆಯನ್ನು ಈ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಮಾಡಿದೆ.

ಯಾವುದೇ ದೊಡ್ಡ ತಾರಾಗಣವಿಲ್ಲದೆ, ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಮೂಡಿಬಂದ ಹಾಲಿವುಡ್‌ನ ‘ಅಬ್ಸೆಷನ್’ (Obsession), ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಚಿಂಡಿ ಉಡಾಯಿಸುತ್ತಿದೆ. ದಾಖಲೆ ಕಲೆಕ್ಷನ್ ಮಾಡುತ್ತಾ, ಹೊಸ ದಾಖಲೆಯನ್ನು ಬರೆಯುತ್ತಿದೆ. ಮೂರನೇ ವಾರದಲ್ಲೂ ತನ್ನ ಅಬ್ಬರವನ್ನು ಮುಂದುವರಿಸಿದೆ. ಅಂದಹಾಗೆ, ಈ ಸಿನಿಮಾಗೆ ಕರ್ನಾಟಕದಿಂದಲೂ ಉತ್ತಮ ಗಳಿಕೆ ಸಿಕ್ಕಿದೆ.

ಮೂರನೇ ವಾರದಲ್ಲೂ ಜಾದೂ

ಭಾರತದಲ್ಲಿ ‘ಅಬ್ಸೆಷನ್’ ಸಿನಿಮಾವು ಮೂರನೇ ಶುಕ್ರವಾರವು ಉತ್ತಮ ಪ್ರದರ್ಶನ ಕಂಡಿದ್ದು, ಬರೋಬ್ಬರಿ 3 ರಿಂದ 4 ಕೋಟಿ ರೂಪಾಯಿಗಳನ್ನು ಕಮಾಯಿ ಮಾಡಿದೆ. ವಿಶೇಷವೆಂದರೆ, ಇದು ಚಿತ್ರದ ಎರಡನೇ ಶುಕ್ರವಾರದ ಕಲೆಕ್ಷನ್‌ಗೆ ಸಮನಾಗಿದ್ದು, ವಾರದಿಂದ ವಾರಕ್ಕೆ ಚಿತ್ರದ ಗಳಿಕೆಯಲ್ಲಿ ಯಾವುದೇ ಕುಸಿತ ಕಂಡಿಲ್ಲ.

Obsession: ಬಜೆಟ್‌ 7 ಕೋಟಿ, ಕಲೆಕ್ಷನ್‌ 1 ಸಾವಿರ ಕೋಟಿ! ಚಿತ್ರ ನಿರ್ಮಾಣಕ್ಕೆ ಸುಖಾಸುಮ್ಮನೆ ಹಣ ವ್ಯಯ ಮಾಡೋರಿಗೆ ಈ ಹಾರರ್‌ ಸಿನಿಮಾ ಒಂದೊಳ್ಳೆ ಪಾಠ!

ಭಾರತದಲ್ಲಿ ಬಿಡುಗಡೆಯಾದ ಕೇವಲ 15 ದಿನಗಳಲ್ಲಿ ‘ಅಬ್ಸೆಷನ್’ ಚಿತ್ರದ ಒಟ್ಟು ಗಳಿಕೆ 65+ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ. ಈ ಚಿತ್ರವು ಮೊದಲ ವಾರ 18.55 ಕೋಟಿ ರೂ. ಗಳಿಸಿದ್ದರೆ, ಎರಡನೇ ವಾರದಲ್ಲಿ 31.25 ಕೋಟಿ ರೂ. ಕೊಳ್ಳೆಹೊಡೆದಿತ್ತು. ಮೂರನೇ ವೀಕೆಂಡ್ (ಶನಿವಾರ ಮತ್ತು ಭಾನುವಾರ) ಮುಗಿಯುವಷ್ಟರಲ್ಲಿ ಈ ಸಿನಿಮಾದ ಗಳಿಕೆಯು 75 ಕೋಟಿ ರೂಪಾಯಿ ತಲುಪುವ ನಿರೀಕ್ಷೆಯಿದೆ.

ಕರ್ನಾಟಕದಲ್ಲಿ ಭರ್ಜರಿ ಕಮಾಯಿ

‘ಅಬ್ಸೆಷನ್’ ಸಿನಿಮಾಗೆ ಕರ್ನಾಟಕದಲ್ಲಿ ಯಾವುದೇ ಪ್ರಚಾರ ಮಾಡಲಾಗಿಲ್ಲ, ಅಲ್ಲದೆ, ಈ ಸಿನಿಮಾದಲ್ಲಿ ಯಾವುದೇ ಹೇಳಿಕೊಳ್ಳುವಂತಹ ತಾರೆಯರಿಲ್ಲ. ಆದರೂ ಕರುನಾಡಿನಲ್ಲಿ ಈ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವು ಭರ್ತಿ 13+ ಕೋಟಿ ರೂ. ಕಮಾಯಿ ಮಾಡಿದೆ ಎಂದರೇ ನೀವು ನಂಬಲೇಬೇಕು.

2026ರಲ್ಲಿ 10 ಕೋಟಿ ರೂ. ಮೇಲೆ ಗಳಿಕೆ ಮಾಡಿರುವ ಕನ್ನಡ ಸಿನಿಮಾಗಳನ್ನು ಹುಡುಕಿದರೆ, ಎರಡೋ, ಮೂರೋ ಸಿಗಬಹುದು. ಆದರೆ, ‘ಅಬ್ಸೆಷನ್’ ಸಿನಿಮಾ ಮಾತ್ರ ಕರ್ನಾಟಕದಲ್ಲಿ 13+ ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ. ಈ ವೀಕೆಂಡ್‌ನಲ್ಲಿ ಈ ಗಳಿಕೆಯು 15 ಕೋಟಿ ರೂ. ದಾಟುವುದು ನಿಶ್ಚಿತ.

ಮಂಕಾದ ಬಾಲಿವುಡ್‌ ಸಿನಿಮಾಗಳು

ಇನ್ನು, ಈ ವಾರ ಬಾಲಿವುಡ್‌ನ ನಾಲ್ಕು ಹೊಸ ಸಿನಿಮಾಗಳಾದ ‘ಗವರ್ನರ್’, ‘ಹಾಂಟೆಡ್ 3ಡಿ’, ‘ಭಾರತ್ ಭಾಗ್ಯ ವಿಧಾತಾ’ ಮತ್ತು ‘ಮೈನ್ ವಾಪಸ್ ಆವುಂಗಾ’ ಬಿಡುಗಡೆಯಾಗಿದ್ದರೂ ಸಹ, ‘ಅಬ್ಸೆಷನ್’ ಚಿತ್ರದ ಗಳಿಕೆಯ ವೇಗಕ್ಕೆ ಯಾವುದೇ ಬ್ರೇಕ್ ಬಿದ್ದಿಲ್ಲ. ಶುಕ್ರವಾರದ ಕಲೆಕ್ಷನ್‌ನಲ್ಲಿ ಇದು ಎಲ್ಲಾ ಬಾಲಿವುಡ್ ಚಿತ್ರಗಳನ್ನೂ ಹಿಂದಿಕ್ಕಿ ಮುನ್ನಡೆದಿದೆ. ಅಷ್ಟೇ ಅಲ್ಲದೆ, ಇತ್ತೀಚೆಗಷ್ಟೇ ತೆರೆಕಂಡಿದ್ದ ‘ಪತಿ ಪತ್ನಿ ಔರ್ ವೋ ದೊ’ ಮತ್ತು ‘ಬಂದರ್’ ನಂತಹ ಹಿಂದಿ ಸಿನಿಮಾಗಳ ಒಟ್ಟು ಗಳಿಕೆಯನ್ನೂ ‘ಅಬ್ಸೆಷನ್’ ಸಿನಿಮಾ ಮೀರಿಸಿದೆ.

‘ಅಬ್ಸೆಷನ್’ ಸಿನಿಮಾದ ಕರ್ನಾಟಕದ ಗಳಿಕೆ



ಸದ್ಯದ ಟ್ರೆಂಡ್ ಗಮನಿಸಿದರೆ, ಈ ಸಿನಿಮಾವು ಭಾರತದಲ್ಲೇ 100 ಕೋಟಿ ರೂಪಾಯಿಗಳ ಕ್ಲಬ್ ಸೇರುವುದು ಬಹುತೇಕ ಖಚಿತವಾಗಿದೆ. ಒಂದು ವೇಳೆ 100 ಕೋಟಿ ತಲುಪಿದರೆ, ಇದು ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹಾಲಿವುಡ್ ಸಿನಿಮಾ ಎನಿಸಿಕೊಳ್ಳಲಿದ್ದು, ‘ಪ್ರಾಜೆಕ್ಟ್ ಹೈಲ್ ಮೇರಿ’ (Project Hail Mary - 90 ಕೋಟಿ ರೂ.) ದಾಖಲೆಯನ್ನು ಮುರಿಯಲಿದೆ. 7 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ‘ಅಬ್ಸೆಷನ್’ ಸಿನಿಮಾವನ್ನು ಕರಿ ಬೇಕರ್ (Curry Barker) ನಿರ್ದೇಶಿಸಿದ್ದಾರೆ. ವಿಶ್ವಾದ್ಯಂತ ಈ ಸಿನಿಮಾವು 2,185+ ಕೋಟಿ ರೂ.ಗಳನ್ನ ಬಾಚಿಕೊಂಡಿದೆ.