ಇತ್ತೀಚೆಗೆ ಮೋಹನ್ ಲಾಲ್ (Mohan Lal) ಅಮೆರಿಕಾ ಪ್ರವಾಸ ಕೈಗೊಂಡಿದ್ದರು. ತಮ್ಮದೇ 'ನಾರನ್' ಚಿತ್ರದ 'ವೇಲ್ ಮುರುಗ' ಎಂಬ ಹಾಡನ್ನು ಅವರು ಹಾಡಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿತ್ತು. ಅಣ್ಣಾವ್ರ ಹುಟ್ಟುಹಬ್ಬದ ಸಂಭ್ರಮದಲ್ಲೇ ಮೋಹನ್ ಲಾಲ್ ಹಾಡಿರುವ 'ಎರಡು ಕನಸು' (Eradu kanasu) ಚಿತ್ರದ ಹಾಡಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಅಷ್ಟೇ ಅಲ್ಲದೆ ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಈ ವಿಡಿಯೋವನ್ನ ಮೋಹನ್ ಲಾಲ್ ಅವರು, ನಟ ಶಿವರಾಜ್‌ಕುಮಾರ್ (Shiva Rajkumar) ಅವರಿಗೆ ತೋರಿಸಿದ್ದಾರೆ. ಈ ಸಂದರ್ಭದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆದಿದೆ.
ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೋಹನ್‌ಲಾಲ್ ಅವರು ಭಾಗಿ ಆಗಿದ್ದರು. ವೇದಿಕೆ ಮೇಲೆ ಅವರು ಹಾಡು ಹಾಡಿದ್ದಾರೆ. ಅದು ಕೂಡ ರಾಜ್ಕುಮಾರ್ ಮತ್ತು ಮಂಜುಳಾ ನಟನೆಯ ‘ಎರಡು ಕನಸು’ ಸಿನಿಮಾದ್ದು.
ಇದನ್ನೂ ಓದಿ: Toxic Movie: `ಟಾಕ್ಸಿಕ್' ಹಸಿಬಿಸಿ ದೃಶ್ಯ ವಿಚಾರ; ಟೀಕೆಯ ನಂತರ ಯಶ್ ಹೇಳಿದ್ದೇನು?
ರಾಜ್ಕುಮಾರ್ ಜನ್ಮದಿನ. ಈ ವಿಶೇಷ ಸಂದರ್ಭದಲ್ಲಿ ಈ ಹಾಡು ವೈರಲ್ ಆಗಿತ್ತು. ಇದಾದ ಬೆನ್ನಲ್ಲೇ ಇದರ ಮುಂದಿನ ವರ್ಷನ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ‘ನಾನು ಅಣ್ಣಾವ್ರ ಹಾಡನ್ನು ಹಾಡಿದ್ದೀನಿ ಹೇಗಿದೆ ನೋಡಿ’ ಎಂದು ಶಿವಣ್ಣಗೆ ಮೋಹನ್‌ಲಾಲ್ ಹೇಳಿದಂತಿದೆ.
ಶಿವರಾಜ್‌ಕುಮಾರ್ ಹಾಗೂ ಮೋಹನ್‌ಲಾಲ್ ಅವರು ‘ಜೈಲರ್ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ರಜನಿಕಾಂತ್ ಹೀರೋ. ಮೊದಲ ಭಾಗದಲ್ಲಿ ಶಿವಣ್ಣ ಹಾಗೂ ಮೋಹನ್‌ಲಾಲ್ ಅವರದ್ದು ಅತಿಥಿ ಪಾತ್ರ ಆಗಿತ್ತು.
ವೈರಲ್ ವಿಡಿಯೋ
ರಜನಿಕಾಂತ್ ಅವರ 169ನೇ ಸಿನಿಮಾ ಇದಾಗಿದ್ದು ಅನಿರುದ್ಧ್ ರವಿಚಂದ್ರನ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ರಜನಿಕಾಂತ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಕನ್ನಡದಿಂದ ಶಿವರಾಜ್‌ಕುಮಾರ್, ಮಲಯಾಳಂನಿಂದ ಮೋಹನ್‌ಲಾಲ್, ವಿನಾಯಗನ್, ಹಿಂದಿಯಿಂದ ಜಾಕಿ ಶ್ರಾಫ್, ತೆಲುಗಿನಿಂದ ಸುನೀಲ್, ರಮ್ಯಾಕೃಷ್ಣ, ನಾಗಬಾಬು, ತಮ್ಮನ್ನಾ, ತ್ರಿಶಾ ಇನ್ನಿತರು ನಟಿಸಿರುವುದರಿಂದ ಈ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿಯೇ ಇದೆ. ಇನ್ನು ಈ ಚಿತ್ರವೂ ಜೂನ್ 12 ರಂದು ತೆರೆಗೆ ಬರಲು ಸಜ್ಜಾಗಿದೆ.
ಇದನ್ನೂ ಓದಿ: Dr Rajkumar Birthday: ಅಣ್ಣಾವ್ರ ಹಾಡು ಹಾಡಿ ಅಭಿಮಾನಿಗಳ ಮನ ಗೆದ್ದ ಮೋಹನ್‌ಲಾಲ್; ವಿಡಿಯೋ ವೈರಲ್
'ದೃಶ್ಯಂ- 3' ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ಲಾಲೆಟ್ಟನ್ ಸಜ್ಜಾಗಿದ್ದಾರೆ. ಈ ವರ್ಷ 5 ಸಿನಿಮಾಗಳು ಮೋಹನ್ ಲಾಲ್ ಕೈಯಲ್ಲಿವೆ. ಮಮ್ಮುಟ್ಟಿ ಜೊತೆ ನಟಿಸಿರುವ 'ಪೆಟ್ರಿಯಾಟ್' ಸಿನಿಮಾ ಮೇ 1ರಂದು ತೆರೆಗೆ ಬರಲಿದೆ. ಇನ್ನು ಬಹುನಿರೀಕ್ಷಿತ 'ದೃಶ್ಯಂ- 3' ಸಿನಿಮಾ ಮೇ 21ರಂದು ಬಿಡುಗಡೆ ಆಗಲಿದೆ.