Popular Indian Stars: ಭಾರತದ ಜನಪ್ರಿಯ ತಾರೆಯರ ಟಾಪ್ 10 ಪಟ್ಟಿಯಲ್ಲಿ ಕನ್ನಡದ ಮೂವರು ಸೆಲೆಬ್ರಿಟಿಗಳು; ರಿಷಬ್ ಶೆಟ್ಟಿಗೆ ಎಷ್ಟನೇ ಸ್ಥಾನ?
IMDb Most Popular Indian Stars of 2025: IMDbಯ ಭಾರತದ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ಹೊಸ ತಾರೆಯರಿಬ್ಬರು ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ. ಶಾರುಖ್ ಖಾನ್ , ಅಮೀರ್ ಖಾನ್, ದೀಪಿಕಾ ಪಡುಕೋಣೆ , ರಜನಿಕಾಂತ್ ಮತ್ತು ರಣಬೀರ್ ಕಪೂರ್ ಅವರಂತಹ ಸೂಪರ್‌ಸ್ಟಾರ್‌ಗಳನ್ನು ಸೋಲಿಸಿ ವಿಜಯಶಾಲಿಗಳಾಗಿ ಹೊರಹೊಮ್ಮಿದ್ದಾರೆ. ಕನ್ನಡದ ಮೂವರು ಸೆಲೆಬ್ರಿಟಿಗಳು ಲಿಸ್ಟ್‌ನಲ್ಲಿ ಇದ್ದಾರೆ. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ರಿಷಬ್ ಶೆಟ್ಟಿ -
ಇಂಟರ್ನೆಟ್ ಮೂವಿ ಡೇಟಾಬೇಸ್ (IMDb) ವರ್ಷಾನುಗಟ್ಟಲೆ ಕೆಲವೊಂದು ಪ್ರಶ್ನೆಗಳು, ಕೆಲವು ಅಧ್ಯಯನದ ಆಧಾರದ ಮೇಲೆ 2025 ರ ಅತ್ಯಂತ ಜನಪ್ರಿಯ ಭಾರತೀಯ (Popular Indian stars of 2025) ತಾರೆಯರ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಈ ಬಾರಿ ಹೊಸ ತಾರೆಯರಿಬ್ಬರು ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ. ಶಾರುಖ್ ಖಾನ್ , ಅಮೀರ್ ಖಾನ್, ದೀಪಿಕಾ ಪಡುಕೋಣೆ , ರಜನಿಕಾಂತ್ ಮತ್ತು ರಣಬೀರ್ ಕಪೂರ್ (Ranbir Kapoor) ಅವರಂತಹ ಸೂಪರ್‌ಸ್ಟಾರ್‌ಗಳನ್ನು ಸೋಲಿಸಿ ವಿಜಯಶಾಲಿಗಳಾಗಿ ಹೊರಹೊಮ್ಮಿದ್ದಾರೆ. ಕಾರಣ ಮೋಹಿತ್ ಸೂರಿ ಅವರ 'ಸೈಯಾರಾ' ಚಿತ್ರದ ಭಾರಿ ಯಶಸ್ಸು. ಇದು ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡ ಅವರನ್ನು ರಾತ್ರೋರಾತ್ರಿ ತಾರಾಪಟ್ಟಕ್ಕೆ ಏರಿಸಿದೆ. ಹಾಗಾದ್ರೆ ರಿಷಬ್ (Rishab Shetty) ಯಾವ ಸ್ಥಾನದಲ್ಲಿ ಇದ್ದಾರೆ?
IMDb 2025 ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರು
ಐಎಮ್‌ಡಿಬಿ ಪಟ್ಟಿಯು 2025ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿಯಲ್ಲಿ ಅಹಾನ್ ಅವರನ್ನು ಮೊದಲ ಸ್ಥಾನದಲ್ಲಿ ಇರಿಸಿದರೆ, ಅವರ ಸಹನಟ ಅನೀತ್ ಅವರನ್ನು ಎರಡನೇ ಸ್ಥಾನದಲ್ಲಿ ಇರಿಸಿದೆ.
ಸೀತಾರೆ ಜಮೀನ್ ಪರ್ ಚಿತ್ರದ ಯಶಸ್ವಿ ವರ್ಷವನ್ನು ಕಂಡ ಸೂಪರ್‌ಸ್ಟಾರ್ ಅಮೀರ್ ಖಾನ್ ಅವರು ಮೂರನೇ ಸ್ಥಾನದಲ್ಲಿ ಇದ್ದಾರೆ. ಟಾಪ್ 10 ರಲ್ಲಿರುವ ಇತರ ಹೊಸ ಹೆಸರುಗಳಲ್ಲಿ ವೆಬ್ ಸರಣಿ 'ದಿ ಬಾಡ್ಸ್ ಆಫ್ ಬಾಲಿವುಡ್' ಮೂಲಕ ಅದ್ಭುತ ಯಶಸ್ಸನ್ನು ಕಂಡ ಲಕ್ಷ್ಯ ಮತ್ತು ಮಲಯಾಳಂ ಬ್ಲಾಕ್‌ಬಸ್ಟರ್ 'ಲೋಕ ಚಾಪ್ಟರ್ ಒನ್' ನಲ್ಲಿ ನಟಿಸಿದ ಕಲ್ಯಾಣಿ ಪ್ರಿಯದರ್ಶನ್ ಸೇರಿದ್ದಾರೆ.
ಕಾಂತಾರ ಚಾಪ್ಟರ್ ಒನ್ ನಲ್ಲಿ ನಟಿಸಿರುವ ರಿಷಬ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ. ರಿಷಬ್‌ಗೆ 10ನೇ ಸ್ಥಾನ, ರುಕ್ಮಿಣಿ ವಸಂತ್‌ಗೆ 9ನೇ ಸ್ಥಾನ ಲಭಿಸಿದೆ. ಅಕ್ಟೋಬರ್ 2ರಂದು ಬಿಡುಗಡೆಯಾದ ಕಾಂತಾರ: ಚಾಪ್ಟರ್ 1 ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿದೆ.
2022ರಲ್ಲಿ ತೆರೆಕಂಡ ಬ್ಲಾಕ್ ಬಸ್ಟರ್ ಚಿತ್ರ ಕಾಂತಾರದ ಪ್ರೀಕ್ವೆಲ್ ಇದಾಗಿದ್ದು, ನಿರ್ದೇಶನದೊಂದಿಗೆ ರಿಷಬ್ ಶೆಟ್ಟಿ ಅವರೇ ನಟಿಸಿದ್ದಾರೆ.
ಹಾಗೇ ಇದರಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಆರನೇ ಸ್ಥಾನ ಮತ್ತು ತ್ರಿಪ್ತಿ ದಿಮ್ರಿ ಎಂಟನೇ ಸ್ಥಾನದಲ್ಲಿ ಇದ್ದಾರೆ.
ಗೌರವಕ್ಕೆ ಅಹಾನ್ ಮತ್ತು ಅನೀತ್ ಪ್ರತಿಕ್ರಿಯೆ
ಈ ವರ್ಷ ಜಾಗತಿಕವಾಗಿ IMDb ಸೈಟ್‌ಗೆ 250 ಮಿಲಿಯನ್‌ಗಿಂತಲೂ ಹೆಚ್ಚು ಸಂದರ್ಶಕರ ಭೇಟಿಗಳ ಆಧಾರದ ಮೇಲೆ ಈ ಪಟ್ಟಿಯನ್ನು ಸಂಗ್ರಹಿಸಲಾಗಿದೆ. 2025 ರ ಅತ್ಯಂತ ಜನಪ್ರಿಯ ಭಾರತೀಯ ನಟ ಎಂಬ ಕಿರೀಟವನ್ನು ಪಡೆದ ಬಗ್ಗೆ ಪ್ರತಿಕ್ರಿಯಿಸಿದ ಅಹಾನ್ ಪಾಂಡೆ, "ಇದು ನನಗೆ ತುಂಬಾ ಖುಷಿಯ ವಿಚಾರ. ನನ್ನ ಮೊದಲ ಚಿತ್ರದೊಂದಿಗೆ 2025 ರ IMDb ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿಯಲ್ಲಿ ನಂ. 1 ಸ್ಥಾನ ಪಡೆಯುವುದು ಒಂದು ಕನಸಾಗಿತ್ತು. ಈಗ ನನಸಾಗಿದೆ. ಜವಾಬ್ದಾರಿಯ ಹೆಚ್ಚಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: OTT Entry Movie: ಕಾಂತಾರ ಸಿನಿಮಾದ ಜೊತೆಗೆ ಸಾಲು ಸಾಲು ಹಿಟ್ ಸಿನಿಮಾ ಒಟಿಟಿಗೆ ಎಂಟ್ರಿ: ಯಾವುದೆಲ್ಲ ಗೊತ್ತಾ?
ಮೋಹಿತ್ ಸೂರಿ ನಿರ್ದೇಶನದ ಸೈಯಾರಾ, ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳಲ್ಲಿ ಒಂದಾಗಿದ್ದು, ವಿಶ್ವಾದ್ಯಂತ ₹ 580 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಇದು ಬಾಲಿವುಡ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ರೊಮ್ಯಾಂಟಿಕ್ ಚಿತ್ರ ಮತ್ತು ಹೊಸಬರು ನಟಿಸಿದ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರ ಎಂಬ ದಾಖಲೆಗಳನ್ನು ಮುರಿಯಿತು. ಅಹಾನ್ ಈಗ ಅಲಿ ಅಬ್ಬಾಸ್ ಜಾಫರ್ ಅವರೊಂದಿಗೆ ಆಕ್ಷನ್ ಚಿತ್ರಕ್ಕೆ ಸಹಿ ಹಾಕಿದ್ದಾರೆ,