ಹರಿಯಾಣದ (Hariyana) ಕರ್ನಾಲ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಟಿ ಮೌನಿ ರಾಯ್ (Mouni Roy) ತಾವು ಎದುರಿಸಿದ ತೀವ್ರ ಆತಂಕಕಾರಿ ಅನುಭವದ ಬಗ್ಗೆ ಮಾತನಾಡಿದ್ದಾರೆ. ವೇದಿಕೆಯಲ್ಲಿ ಪ್ರದರ್ಶನ ನೀಡುವಾಗ ಪ್ರೇಕ್ಷಕರು ತಮ್ಮನ್ನು ಅನುಚಿತವಾಗಿ ಮುಟ್ಟಿದರು, ನಿಂದಿಸಿದರು, ಒಪ್ಪಿಗೆಯಿಲ್ಲದೆ ಚಿತ್ರೀಕರಿಸಿದರು ಎಂದು ನಟಿ ಆರೋಪಿಸಿದ್ದಾರೆ. ಅವರ ಈ ಹೇಳಿಕೆಯು ಮತ್ತಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.
ಕರ್ನಾಲ್ ಕಾರ್ಯಕ್ರಮದಲ್ಲಿ ಏನಾಯಿತು?
ಘಟನೆ ಹೇಗೆ ನಡೆಯಿತು ಎಂಬುದನ್ನು ಮೌನಿ ಭಾವನಾತ್ಮಕವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ವೇದಿಕೆ ತಲುಪುವ ಮೊದಲೇ ಕಿರುಕುಳ ಪ್ರಾರಂಭವಾಯಿತು ಎಂದು ಅವರು ಹೇಳಿದರು. ನಟಿಯ ಪ್ರಕಾರ, ವೇದಿಕೆಯ ಕಡೆಗೆ ನಡೆಯುವಾಗ ಛಾಯಾಚಿತ್ರಗಳನ್ನು ಕ್ಲಿಕ್ಕಿಸುವ ನೆಪದಲ್ಲಿ ಹಲವಾರು ಪುರುಷರು ತಮ್ಮ ಸೊಂಟವನ್ನು ಮುಟ್ಟಿದರು.
ಇದನ್ನೂ ಓದಿ: Sarvam Maya OTT : ಕಣ್ಣೀರು ತರಿಸುವ ದೆವ್ವದ ಕಥೆ; ನಿವಿನ್ ಪೌಲಿ ಈ ಹಿಟ್ ಮೂವಿ ಒಟಿಟಿಗೆ ಎಂಟ್ರಿ ಯಾವಾಗ?
ವರ್ತನೇಯೇ ವಿಚಿತ್ರ
"ಕಳೆದ ಬಾರಿ ಕರ್ನಾಲ್‌ನಲ್ಲಿ ಒಂದು ಕಾರ್ಯಕ್ರಮವಿತ್ತು ಮತ್ತು ಅತಿಥಿಗಳ ವರ್ತನೆಯಿಂದ ನನಗೆ ಅಸಹ್ಯವಾಗಿದೆ, ವಿಶೇಷವಾಗಿ ಕೆಲವು ವಯಸ್ಸಾದ ಪುರುಷರು. ಕಾರ್ಯಕ್ರಮ ಪ್ರಾರಂಭವಾದಾಗ ಮತ್ತು ವೇದಿಕೆಯ ಕಡೆಗೆ ನಡೆಯುತ್ತಿದ್ದಂತೆ ಎಲ್ಲಾ ಪುರುಷರು ನನ್ನ ಸೊಂಟದ ಮೇಲೆ ಕೈಗಳನ್ನು ಹಾಕಿ ಚಿತ್ರಗಳನ್ನು ಕ್ಲಿಕ್ಕಿಸಿದರು ಅವರು ಆಕ್ಷೇಪಿಸಿ ತಮ್ಮ ಕೈಗಳನ್ನು ತೆಗೆಯಲು ಕೇಳಿದಾಗ, ಅವರ ವರ್ತನೇಯೇ ವಿಚಿತ್ರವಾಗಿತ್ತು.
ಮೌನಿ ರಾಯ್ ತನ್ನ ಪ್ರದರ್ಶನವನ್ನು ಪ್ರಾರಂಭಿಸಿದ ನಂತರ ಪರಿಸ್ಥಿತಿ ಹದಗೆಟ್ಟಿತು ಎಂದು ಹೇಳಿದರು. ಮುಂದಿನ ಸಾಲಿನಲ್ಲಿ ನಿಂತಿದ್ದ ಇಬ್ಬರು ಪುರುಷರು ಅಶ್ಲೀಲ ಕಾಮೆಂಟ್‌ಗಳು, ಅಶ್ಲೀಲ ಕೈ ಸನ್ನೆಗಳು ಮತ್ತು ಅಶ್ಲೀಲ ನಿಂದನೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮೌನಿ ರಾಯ್ ಬೇಸರ
ಆ ವೇದಿಕೆ ಬಹಳ ಎತ್ತರದಲ್ಲಿ ಇತ್ತು. ಈ ಅಂಕಲ್ಗಳು ಕೆಳಗಿನಿಂದ ವಿಡಿಯೋ ಮಾಡುತ್ತಿದ್ದರು. ಅದನ್ನು ನಿಲ್ಲಿಸಿ ಅಂತ ಹೇಳಲು ಬಂದವರಿಗೆ ಬೈಯ್ದರು. ನಾನು ನನ್ನ ದೇಶ ಮತ್ತು ಸಂಸ್ಕೃತಿಯನ್ನು ಪ್ರೀತಿಸುತ್ತೇನೆ. ಆದರೆ ಇದು? ಸಾಮಾನ್ಯವಾಗಿ ನೆಗೆಟಿವ್ ವಿಚಾರಗಳನ್ನು ನಾನು ಪೋಸ್ಟ್ ಮಾಡಲ್ಲ. ಆದರೆ ಈ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ವಧು-ವರರನ್ನು ಹರಸಲು ನಾವು ಅವರ ಅತಿಥಿಯಾಗಿ ಹೋಗಿರುತ್ತೇನೆ. ಆದರೆ ಅವರು ನಮಗೆ ಕಿರುಕುಳ ನೀಡುತ್ತಾರೆ’ ಎಂದು ಮೌನಿ ರಾಯ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ನನ್ನಂಥವರಿಗೆ ಈ ರೀತಿ ಆಗುತ್ತದೆ ಎಂದರೆ, ಈಗತಾನೇ ಬಂದಿರುವ ನಟಿಯರಿಗೆ ಏನಾಗಿರಬಹುದು ಅಂತ ಊಹಿಸಿ. ನನಗೆ ಕಿರುಕುಳ ಆಗಿದೆ. ಬಹಳ ನೋವಾಗಿದೆ. ಇಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅವರ ಮಗಳ ಜೊತೆ, ಸಹೋದರಿಯರ ಜೊತೆ ಇದೇ ರೀತಿ ಯಾರಾದರೂ ನಡೆದುಕೊಂಡರೆ ಏನು ಮಾಡುತ್ತಾರೆ ಅಂತ ನನಗೆ ಆಶ್ಚರ್ಯ ಆಗುತ್ತಿದೆ’ ಎಂದು ಮೌನಿ ರಾಯ್ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Ram Gopal Varma : ಎ ಆರ್ ರೆಹಮಾನ್ 'ಕೋಮುವಾದಿ' ಹೇಳಿಕೆ; ಈ ಬಗ್ಗೆ ರಾಮ್ ಗೋಪಾಲ್ ವರ್ಮಾ ಹೇಳಿದ್ದೇನು?
ವೃತ್ತಿಪರ ರಂಗದಲ್ಲಿ ಮೌನಿ ರಾಯ್ ಕೊನೆಯ ಬಾರಿಗೆ ಸಂಜಯ್ ದತ್ ಮತ್ತು ಸನ್ನಿ ಸಿಂಗ್ ಜೊತೆಗೆ 'ದಿ ಭೂತ್ನಿ' ಚಿತ್ರದಲ್ಲಿ ಕಾಣಿಸಿಕೊಂಡರು. ನಂತರ ಅವರು ಬೇಹುಗಾರಿಕೆ ಥ್ರಿಲ್ಲರ್ 'ಸಲಾಕಾರ್' ನಲ್ಲಿ ಕಾಣಿಸಿಕೊಂಡರು, ಇದು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತು.