ಕೃತಕ ಬುದ್ಧಿಮತ್ತೆಯ ದುರುಪಯೋಗವು ಪ್ರಪಂಚದಾದ್ಯಂತ ಜನರಿಗೆ, ವಿಶೇಷವಾಗಿ ಸೆಲೆಬ್ರಿಟಿಗಳಿಗೆ ಕಳವಳವನ್ನುಂಟು ಮಾಡುತ್ತಿದೆ. ಕಾನೂನು ಮೊಕದ್ದಮೆ ಹೂಡುತ್ತಿರುವ ನಟರ ಸಂಖ್ಯೆ ಹೆಚ್ಚುತ್ತಿದೆ. ಆ ಪಟ್ಟಿಗೆ ಇತ್ತೀಚಿನ ಸೇರ್ಪಡೆ ಮೃಣಾಲ್ ಠಾಕೂರ್ (Mrunal Thakur ) . ಅನುಮತಿಯಿಲ್ಲದೆ ಎಐ ಮೂಲಕ ಸೃಷ್ಟಿಸಿದ ಈ ಫೋಟೊಗಳನ್ನು ತಕ್ಷಣವೇ ತೆಗೆಯದಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ನಟಿ ಎಚ್ಚರಿಸಿದ್ದಾರೆ. ಸೈಬರ್ ಕಿಡಿಗೇಡಿಗಳ (AI deepfakes) ವಿರುದ್ಧ ಸೂಕ್ತ ತನಿಖೆಯಾಗಬೇಕೆಂದು ( AI-generated content) ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಮಂಗಳವಾರ ಇನ್‌ಸ್ಟಾಗ್ರಾಮ್‌ನಲ್ಲಿ ಮೃಣಾಲ್ ಠಾಕೂರ್ ಅವರು ಡೀಪ್‌ಫೇಕ್ ವಿಷಯವನ್ನು ರಚಿಸುವ ಅಥವಾ ಪ್ರಸಾರ ಮಾಡುವ ವಿರುದ್ಧ ಕಠಿಣ ಎಚ್ಚರಿಕೆಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Rakul Preet Singh: ಶೂರ್ಪನಖಿ ಪಾತ್ರ ಆಯ್ಕೆ ಹಿಂದಿನ ಕಾರಣ ಏನು? ರಕುಲ್ ಹೇಳಿದ್ದೇನು?
ಮೃಣಾಲ್ ಸ್ಪಷ್ಟ ಸಂದೇಶ
" ನನ್ನ ಹೋಲಿಕೆಯನ್ನು ಬಳಸಿಕೊಂಡು ಡೀಪ್‌ಫೇಕ್ ರಚಿಸುವುದು ಅಥವಾ ಹಂಚಿಕೊಳ್ಳುವುದು ಕಾನೂನುಬಾಹಿರ ಮತ್ತು ಸ್ವೀಕಾರಾರ್ಹವಲ್ಲ ಈ ರೀತಿಯ ಫೋಟೊ ಹಂಚಿಕೊಳ್ಳುವುದು ಸಂಪೂರ್ಣವಾಗಿ ಕಾನೂನುಬಾಹಿರ. ತಕ್ಷಣವೇ ಈ ಪೋಸ್ಟ್ ಡಿಲೀಟ್ ಮಾಡಬೇಕು. ಇಲ್ಲದಿದ್ದರೆ ಸೈಬರ್ ಪೊಲೀಸ್ ದೂರು ನೀಡುವುದಾಗಿ ಮೃಣಾಲ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಡೀಪ್‌ಫೇಕ್‌ಗಳ ಬಗ್ಗೆ ಮಾತನಾಡಿದ ಹಲವಾರು ಭಾರತೀಯ ಸೆಲೆಬ್ರಿಟಿಗಳಲ್ಲಿ ಮೃಣಾಲ್ ಕೂಡ ಒಬ್ಬರು. ಇತ್ತೀಚಿನ ದಿನಗಳಲ್ಲಿ, ಹಲವಾರು ನಟರು ತಮ್ಮ ಗುರುತು, ಇಮೇಜ್ AI- ದುರುಪಯೋಗದಿಂದ ರಕ್ಷಿಸಿಕೊಳ್ಳಲು ನ್ಯಾಯಾಲಯಗಳ ಮೊರೆ ಹೋಗಿದ್ದಾರೆ
ಅಕ್ಷಯ್ ಕುಮಾರ್, ವರುಣ್ ಧವನ್, ಅನಿಲ್ ಕಪೂರ್, ಶಿಲ್ಪಾ ಶೆಟ್ಟಿ, ಪ್ರೀತಿ ಜಿಂಟಾ, ಕಾರ್ತಿಕ್ ಆರ್ಯನ್, ಸುನೀಲ್ ಶೆಟ್ಟಿ ಮತ್ತು ಹಲವಾರು ತಾರೆಯರು ತಮ್ಮ ಚಿತ್ರಗಳು ಬಳಕೆಯ ವಿರುದ್ಧ ನ್ಯಾಯಾಲಯಗಳ ಮೊರೆ ಹೋಗಿದ್ದಾರೆ.
ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ನಟಿಯರು ಇದೇ ರೀತಿಯ ಡಿಜಿಟಲ್ ಕಿರುಕುಳಕ್ಕೆ ಒಳಗಾಗಿದ್ದರು. ಎಚ್ಚರಿಕೆ ನೀಡಿದ ಮೇಲೆಯೂ ಈ ಚಿತ್ರಗಳು ಜಾಲತಾಣದಲ್ಲಿ ಇವೆ. ಹೀಗಾಗಿ ಮುಂದಿನ ಕಾನೂನು ಕ್ರಮಗಳ ಮೇಲೆ ಎಲ್ಲರ ಕಣ್ಣಿದೆ.
ಡಕೋಯಿಟ್ ಮತ್ತು ಹೈ ಜವಾನಿ ತೋ ಇಷ್ಕ್ ಹೋನಾ ಹೈ ನಂತಹ ಚಿತ್ರಗಳು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದ ಒಂದು ವರ್ಷದ ನಂತರ, ಮೃಣಾಲ್ ಠಾಕೂರ್ ಅವರ ಮುಂದೆ ಕೆಲವು ಯೋಜನೆಗಳಿವೆ.
ಇದನ್ನೂ ಓದಿ: Amruthadhaare Serial: ಕೂದಲನ್ನು ತೆಗೆಸಿದ ಭೂಮಿಕಾ; ಸಂಕಷ್ಟದ ಸಮಯದಲ್ಲೂ ತೂಕದ ಮಾತಿಗೆ ವೀಕ್ಷಕರು ಫಿದಾ
ಪ್ರಸ್ತುತ, ಅವರು ಅಟ್ಲೀ ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ಆಕ್ಷನ್ ಡ್ರಾಮಾ ರಾಕಾದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್, ದೀಪಿಕಾ ಪಡುಕೋಣೆ ಮತ್ತು ರಶ್ಮಿಕಾ ಮಂದಣ್ಣ ಅವರಂತಹ ದೊಡ್ಡ ಹೆಸರುಗಳ ಸಾಲು ಇದೆ.