ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಕೂದಲನ್ನು ತೆಗೆಸಿದ ಭೂಮಿಕಾ; ಸಂಕಷ್ಟದ ಸಮಯದಲ್ಲೂ ತೂಕದ ಮಾತಿಗೆ ವೀಕ್ಷಕರು ಫಿದಾ

Amruthadhaare: ಭೂಮಿಕಾ ಕ್ಯಾನ್ಸರ್‌ಗೆ (Bhoomika Cancer) ತುತ್ತಾಗಿರೋ ವಿಷಯ ಮನೆಯ ಎಲ್ಲಾ ಸದಸ್ಯರಿಗೂ ಗೊತ್ತಾಗಿದೆ. ಇನ್ನೊಂದೆಡೆ, ಜೈದೇವ್ ಮತ್ತು ಶಕುಂತಲಾಗೂ ಈ ವಿಷಯ ತಿಳಿದಿದ್ದು, ಅವರು ಸಕತ್​ ಖುಷಿಯಾಗಿದ್ದಾರೆ. ತಾವು ಮಾಡಲು ಸಾಧ್ಯವಾಗದ್ದು ವಿಧಿಯೇ ಮಾಡಿಸಿತು ಎಂದು ಇನ್ನಿಲ್ಲದಂತೆ ಗೆದ್ದು ಬೀಗುತ್ತಿದ್ದಾರೆ. ಈ ನಡುವೆ ಭೂಮಿಕಾ ತನ್ನ ಕೂದಲು ತೆಗೆಸಿದ್ದಾಳೆ.

Amruthadhaare: ಸಂಕಷ್ಟದ ಸಮಯದಲ್ಲೂ ಭೂಮಿ ತೂಕದ ಮಾತಿಗೆ ವೀಕ್ಷಕರು ಫಿದಾ!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Aug 4, 2026 10:07 AM

ಅಮೃತಧಾರೆಯ (Amruthadhaare Serial) ಭೂಮಿಕಾ ಕ್ಯಾನ್ಸರ್‌ಗೆ (Bhoomika Cancer) ತುತ್ತಾಗಿರೋ ವಿಷಯ ಮನೆಯ ಎಲ್ಲಾ ಸದಸ್ಯರಿಗೂ ಗೊತ್ತಾಗಿದೆ. ಇನ್ನೊಂದೆಡೆ, ಜೈದೇವ್ (Jaidev) ಮತ್ತು ಶಕುಂತಲಾಗೂ (Shakuntala) ಈ ವಿಷಯ ತಿಳಿದಿದ್ದು, ಅವರು ಸಕತ್​ ಖುಷಿಯಾಗಿದ್ದಾರೆ. ತಾವು ಮಾಡಲು ಸಾಧ್ಯವಾಗದ್ದು ವಿಧಿಯೇ ಮಾಡಿಸಿತು ಎಂದು ಇನ್ನಿಲ್ಲದಂತೆ ಗೆದ್ದು ಬೀಗುತ್ತಿದ್ದಾರೆ. ಈ ನಡುವೆ ಭೂಮಿಕಾ ತನ್ನ ಕೂದಲು ತೆಗೆಸಿದ್ದಾಳೆ.

ಅಳೋದಕ್ಕೆ ಆಗುತ್ತಾ?

ಹೆಡ್‌ ಶೇವ್ ಬಳಿಕ ಎಲ್ಲರ ಮುಂದೆ ಬಂದ ಭೂಮಿಕಾ, ಈ ಹೇರ್‌ಸ್ಟೈಲ್‌ನಲ್ಲಿ ನಾನು ಇಷ್ಟು ಮುದ್ದಾಗಿ ಕಾಣಿಸುತ್ತೇನೆ ಎಂದು ನಿಜಕ್ಕೂ ಅಂದ್ಕೊಂಡಿರಲಿಲ್ಲ. ಕನ್ನಡಿಯಲ್ಲಿ ಮುಖ ನೋಡಿಕೊಂಡು ಅಳೋದಕ್ಕೆ ಆಗುತ್ತಾ? ಬಂದಿರೋದನ್ನು ಎದುರಿಸುತ್ತಾ ಹೋಗುವುದೇ ಜೀವನ ಅಲ್ಲವಾ ಎಂದು ಎಲ್ಲರನ್ನು ಭೂಮಿಕಾ ಸಮಾಧಾನ ಮಾಡಿದ್ದಾಳೆ.

ನೀವು ಮಾತ್ರ ಇಂಥಾ ಟೈಮ್‌ನಲ್ಲಿ ಜೋಕ್ ಮಾಡಲು ಸಾಧ್ಯ ಎಂದು ಹೇಳಿದ್ದಾನೆ ಪಾರ್ಥ್. ಮಗಳು ಮಾರಣಾಂತಿಕ ಕಾಯಿಲೆಗೆ ತುತ್ತಾಗಿರೋ ವಿಷಯ ತಿಳಿದು ಭೂಮಿಕಾ ತಾಯಿ ಗಳಗಳನೇ ಅಳುತ್ತಿದ್ದಾಳೆ. ಅತ್ತೆಯನ್ನು ಸಂತೈಸಿರುವ ಗೌತಮ್, ಈಗ ತಾನೇ ಕಾಯಿಲೆ ವಿರುದ್ಧ ಮೊದಲ ಹೆಜ್ಜೆಯನ್ನಿಟ್ಟಿದ್ದಾಳೆ. ಚಿಕಿತ್ಸೆ ತೆಗೆದುಕೊಳ್ಳಲು ಒಪ್ಪಿಸಿದ್ದೇನೆ. ಈ ಸಮಯದಲ್ಲಿ ಭೂಮಿಕಾಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದ್ದಾನೆ.

ಇದನ್ನೂ ಓದಿ: Salman Khan: 'ನಾನು 16 ಕೆಜಿ ತೂಕ ಇಳಿಸಿಕೊಂಡಿದ್ದೇನೆ': ಸಲ್ಮಾನ್ ಖಾನ್ ವಿಡಿಯೋ ವೈರಲ್‌

ಭೂಮಿಕಾ ಮತ್ತು ಮಲ್ಲಿಯ ಮಾತುಗಳನ್ನು ಶಕುಂತಲಾ ಕೇಳಿಸಿಕೊಂಡಿದ್ದಳು. ಕೂಡಲೇ ಈ ವಿಷಯವನ್ನು ಮಗ ಜೈದೇವ್‌ ಜೊತೆ ಹಂಚಿಕೊಂಡು ಸಿಹಿ ತಿಂದು ಶಕುಂತಲಾ ಸಂಭ್ರಮಿಸಿದ್ದಳು. ಶಕುಂತಲಾ, ಕ್ಯಾನ್ಸರ್ ವಿಷಯವನ್ನು ಭೂಮಿಕಾ ತಾಯಿಗೆ ಫೋನ್ ಮಾಡಿ ತಿಳಿಸಿದ್ದಾಳೆ.

ಮಗಳಿಗೆ ಕ್ಯಾನ್ಸರ್ ಎಂದು ಗೊತ್ತಾಗುತ್ತಿದ್ದಂತೆ ತಾಯಿ ಕುಸಿದಿದ್ದಾಳೆ. ಶಕುಂತಲಾ ಮತ್ತು ಜೈದೇವ್ ತಮ್ಮ ಲಾಭಕ್ಕೆ ಹೇಗೆ ಬಳಸಿಕೊಳ್ತಾರಾ? ಗೌತಮ್ ಪ್ರೀತಿಯಿಂದ ಭೂಮಿಕಾ ತನಗಾದ ಮಾರಣಾಂತಿಕ ಕಾಯಿಲೆಯನ್ನು ಗೆಲ್ಲುತ್ತಾಳಾ ಅಥವಾ ಅಮೃತಧಾರೆ ಸಿನಿಮಾ ರೀತಿಯಲ್ಲಿ ಸೀರಿಯಲ್ ಕೊನೆಯಾಗುತ್ತಾ ಎಂಬುದು ವೀಕ್ಷಕರಲ್ಲಿ ಇರೋ ಕುತೂಹಲ.



ಜೈದೇವ್​ ಮತ್ತು ಶಕುಂತಲಾ ಗೌತಮ್​ ಫ್ಯಾಮಿಲಿಯನ್ನು ಬೀದಿಗೆ ತರುವ ಹುನ್ನಾರ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಅವರಿಬ್ಬರೂ ಹೇಗೋ ತಪ್ಪಿಸಿಕೊಂಡಿದ್ದರು. ಅದರಲ್ಲಿಯೂ ಜೈದೇವ ದಿಯಾಳ ಕೊಲೆ ಮಾಡಿದ್ದು, ಇನ್ನೂ ಯಾರಿಗೂ ಗೊತ್ತಿಲ್ಲ. ಇದೀಗ ಮಲ್ಲಿ ಇನ್ಸ್​ಪೆಕ್ಟರ್​ ಆಗಿರುವ ಹಿನ್ನೆಲೆಯಲ್ಲಿ, ಜೈದೇವ್​ಗೆ ಮುಹೂರ್ತ ಫಿಕ್ಸ್​ ಆಗುವಂತಿದೆ. ಅದೇ ರೀತಿ, ಶಕುಂತಲಾ ಕುತಂತ್ರ ಕೂಡ ಬಯಲು ಮಾಡಿ ಆಕೆಗೂ ಮಗನ ಜೊತೆಗೇ ಜೈಲೂಟ ಹಾಕಿಸುತ್ತಾಳೆ.

ಇದನ್ನೂ ಓದಿ: Amruthdhaare Serial: ವಿಧಿಯ ಸವಾಲಿನೆದುರು ಕುಗ್ಗೋಳಲ್ಲ ಗಟ್ಟಿಗಿತ್ತಿ ಭೂಮಿ! ಭಾವುಕರಾದ ಫ್ಯಾನ್ಸ್

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.