ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Muddu Sose Serial: ವಿದ್ಯಾ- ಭದ್ರನ ಸಂಸಾರ ಸಾವಿತ್ರಿಯ ಕುತಂತ್ರಕ್ಕೆ ಬಲಿ? ವಿಧಿ ಆಟದ ಮುಂದೆ `ಮುದ್ದು ಸೊಸೆʼ ಸೋಲುತ್ತಾಳಾ?

Muddu Sose kannada Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಪ್ರಸಾರವಾಗುತ್ತಿರುವ, ಅತಿ ಹೆಚ್ಚು ವೀಕ್ಷಕರ ಮನಗೆದ್ದಿರುವ 'ಮುದ್ದುಸೊಸೆ' ಧಾರಾವಾಹಿ ಇದೀಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಆರಂಭದಿಂದಲೂ ಕಥಾಹಂದರ ಹಾಗೂ ರೋಚಕ ತಿರುವುಗಳ ಮೂಲಕ ಮನೆಮಾತಾಗಿರುವ ಈ ಸೀರಿಯಲ್‌ನಲ್ಲಿ, ಇದೀಗ ಕಥಾನಾಯಕಿ ವಿದ್ಯಾಳ ಬದುಕನ್ನೇ ಬುಡಮೇಲು ಮಾಡುವಂತಹ ಘಟನೆಯೊಂದು ಸಂಭವಿಸಿದೆ. ಭದ್ರನ ತಂದೆ ಶಿವರಾಮೇಗೌಡ, ಮಗನಿಗೆ ವಿನಂತಿ ಜೊತೆ ಮದುವೆ ಮಾಡಿಸಲು ಮುಂದಾಗಿದ್ದಾನೆ.

ಮುದ್ದು ಸೊಸೆ ಧಾರಾವಾಹಿ

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರತಿದಿನ ಪ್ರಸಾರವಾಗುತ್ತಿರುವ, ಅತಿ ಹೆಚ್ಚು ವೀಕ್ಷಕರ ಮನಗೆದ್ದಿರುವ 'ಮುದ್ದುಸೊಸೆ' (Muddu Sose) ಧಾರಾವಾಹಿ ಇದೀಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಆರಂಭದಿಂದಲೂ ಕಥಾಹಂದರ ಹಾಗೂ ರೋಚಕ ತಿರುವುಗಳ ಮೂಲಕ ಮನೆಮಾತಾಗಿರುವ ಈ ಸೀರಿಯಲ್‌ನಲ್ಲಿ, ಇದೀಗ ಕಥಾನಾಯಕಿ ವಿದ್ಯಾಳ ಬದುಕನ್ನೇ ಬುಡಮೇಲು ಮಾಡುವಂತಹ ಘಟನೆಯೊಂದು ಸಂಭವಿಸಿದೆ. ಭದ್ರನ ತಂದೆ ಶಿವರಾಮೇಗೌಡ (Shivaramegowda), ಮಗನಿಗೆ ವಿನಂತಿ ಜೊತೆ ಮದುವೆ ಮಾಡಿಸಲು ಮುಂದಾಗಿದ್ದಾನೆ. ಅಷ್ಟೇ ಅಲ್ಲದೆ, ಸೊಸೆ ವಿದ್ಯಾಳ ಮುಂದೆ ಎರಡು ಕಠಿಣ ಆಯ್ಕೆಗಳನ್ನು ಇಟ್ಟಿದ್ದಾನೆ. ವಿದ್ಯಾಳ ಈ ಏಕಾಂಗಿ ಹೋರಾಟಕ್ಕೆ ಜಯ ಸಿಗುತ್ತಾ? ವಿಧಿ ಆಟದ ಮುಂದೆ ವಿದ್ಯಾ ಸೋಲುತ್ತಾಳಾ ?

ವಿದ್ಯಾ ಈಗ ಅಗ್ನಿಪರೀಕ್ಷೆಗೆ ಸಿದ್ಧ

"ಕಣ್ಣಿಗೆ ಕಂಡಿದ್ದೆಲ್ಲಾ ಸತ್ಯವಲ್ಲ, ನನ್ನ ಗಂಡನ ಮೇಲಿರುವ ಅಪವಾದ ಸುಳ್ಳು!" – ಈ ಒಂದು ನಂಬಿಕೆಯ ಮೇಲೆ ವಿದ್ಯಾ ಈಗ ಅಗ್ನಿಪರೀಕ್ಷೆಗೆ ಸಿದ್ಧಳಾಗಿದ್ದಾಳೆ. ಟ್ವಿಸ್ಟ್‌ ಮೂಲಕವೇ ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುತ್ತಿರುವ ಈ ಧಾರಾವಾಹಿ, ಇದೀಗ ಕಥೆಯ ದಿಕ್ಕನ್ನೇ ಬದಲಿಸುವಂತಹ 'ಮಹಾ ತಿರುವು' ಪಡೆದುಕೊಂಡಿದೆ. ಕೇವಲ ಸಂಸಾರದ ಕಲಹವಲ್ಲದೆ, ಅಸ್ತಿತ್ವ ಮತ್ತು ಸಂಬಂಧದ ನಡುವಿನ ಸಂಘರ್ಷಕ್ಕೆ ವೇದಿಕೆ ಸಜ್ಜಾಗಿದೆ.

ಇದನ್ನೂ ಓದಿ: Maryaade Ramanna serial: ಅಖಾಡದಲ್ಲಿ ಪಂದ್ಯ ಗೆಲ್ಲೋ ರಾಮಣ್ಣ, ಜಯಮ್ಮನ ಪರೀಕ್ಷೆಯಲ್ಲೂ ಗೆಲ್ತಾನಾ?

ಯಾರೂ ಊಹಿಸದ ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಭದ್ರ ಮತ್ತು ವಿನಂತಿ ಒಂದೇ ಹಾಸಿಗೆ ಹಂಚಿಕೊಂಡ ಸ್ಥಿತಿಯಲ್ಲಿ ಮನೆಯವರಿಗೆ ಕಂಡಿದ್ದಾರೆ. ಇದು ಭದ್ರ ಮತ್ತು ವಿದ್ಯಾಳ ಸುಂದರ ಸಂಸಾರವನ್ನು ಒಡೆಯಲು ಕುತಂತ್ರಿಗಳು ಹಣೆದ ನೀಚ ಪ್ಲಾನ್ ಆಗಿದೆ. ಮನೆಯ ಒಳಗೇ ಇರುವ ಸಾವಿತ್ರಿಯ ದ್ರೋಹದಿಂದಾಗಿ ಇಡೀ ಮನೆಯ ಪರಿಸ್ಥಿತಿ ತಲೆಕೆಳಗಾಗಿದೆ.

ಶಿವರಾಮೇಗೌಡನ ಸವಾಲು

ಈ ಹಠಾತ್ ಬೆಳವಣಿಗೆಯಿಂದ ಕುಪಿತನಾದ ಭದ್ರನ ತಂದೆ ಶಿವರಾಮೇಗೌಡ, ಮಗನಿಗೆ ವಿನಂತಿ ಜೊತೆ ಮದುವೆ ಮಾಡಿಸಲು ಮುಂದಾಗಿದ್ದಾನೆ. ಅಷ್ಟೇ ಅಲ್ಲದೆ, ಸೊಸೆ ವಿದ್ಯಾಳ ಮುಂದೆ ಎರಡು ಕಠಿಣ ಆಯ್ಕೆಗಳನ್ನು ಇಟ್ಟಿದ್ದಾನೆ. ಮೊದಲನೆಯದು ಭದ್ರನಿಗೆ ವಿಚ್ಛೇದನ ನೀಡಿ ದೂರವಾಗುವುದು.

ಇದಕ್ಕೆ ಪ್ರತಿಯಾಗಿ ಶಿವರಾಮೇಗೌಡ ತಮ್ಮ ಒಟ್ಟು ಆಸ್ತಿಯಲ್ಲಿ ಶೇಕಡಾ ಐವತ್ತರಷ್ಟು ಪಾಲನ್ನು ವಿದ್ಯಾಗೆ ನೀಡಲು ಸಿದ್ಧನಿದ್ದಾನೆ. ಎರಡನೆಯದು ಭದ್ರನ ಮೊದಲ ಪತ್ನಿಯಾಗಿಯೇ ಮನೆಯಲ್ಲಿ ಉಳಿಯುವುದು. ಆದರೆ, ಭದ್ರ ಮತ್ತು ವಿನಂತಿಯ ಎರಡನೇ ಮದುವೆಗೆ ವಿದ್ಯಾ ಸಮ್ಮತಿಸಿ, ಮೊದಲ ಪತ್ನಿಯಾಗಿ ಮನೆಯಲ್ಲಿಯೇ ಉಳಿಯಬೇಕು.



ವಿದ್ಯಾಳ ಹೋರಾಟ

ಇಡೀ ಪ್ರಪಂಚವೇ ಭದ್ರನ ಮೇಲೆ ಬೆರಳು ತೋರಿಸುತ್ತಿದ್ದರೂ, ತನ್ನ ಪತಿಯ ಮೇಲೆ ವಿದ್ಯಾಳಿಗೆ ಅಚಲವಾದ ನಂಬಿಕೆಯಿದೆ. ತನ್ನ ಗಂಡನ ವಿರುದ್ಧ ದೊಡ್ಡ ಪಿತೂರಿ ನಡೆದಿದೆ ಎಂಬ ಸತ್ಯವನ್ನು ಅರಿತಿರುವ ವಿದ್ಯಾ, ಆಸ್ತಿ ಅಥವಾ ರಾಜಿ ಯಾವುದಕ್ಕೂ ಬಗ್ಗದೆ ತನ್ನ ಮೌಲ್ಯಗಳಿಗಾಗಿ ನಿಂತಿದ್ದಾಳೆ. ತನ್ನ ಮಾವಯ್ಯನ ನಿರ್ಧಾರದ ವಿರುದ್ಧ ಮತ್ತು ತನ್ನ ಪತಿಯ ಗೌರವವನ್ನು ಕಾಪಾಡಲು ವಿದ್ಯಾ ಈಗ ರಣರಂಗಕ್ಕೆ ಇಳಿದಿದ್ದಾಳೆ.

ತನ್ನ ತಾಳಿಯನ್ನು ಉಳಿಸಿಕೊಳ್ಳುವ ಹೋರಾಟದ ಜೊತೆಗೆ, ಮನೆಯಲ್ಲೇ ಅಡಗಿರುವ ಕುತಂತ್ರಿಗಳ ನಿಜ ಬಣ್ಣವನ್ನು ಬಯಲು ಮಾಡುವ ಗುರುತರ ಜವಾಬ್ದಾರಿ ಈಗ ಅವಳ ಮೇಲಿದೆ.

ಇದನ್ನೂ ಓದಿ: Annayya Kannada Serial: ಪರಶು ಮುಖವಾಡ ಬಯಲಾಗುತ್ತಾ? ರತ್ನಾಗೆ ಮಂಗಳ ಸೂತ್ರದ ಭಾಗ್ಯ ‌ಸಿಗುತ್ತಾ?

ಮುಂದಿನ ದಿನಗಳಲ್ಲಿ ವಿದ್ಯಾ ಕಥೆ ಏನು?

ವಿದ್ಯಾಳ ಈ ಏಕಾಂಗಿ ಹೋರಾಟಕ್ಕೆ ಜಯ ಸಿಗುತ್ತಾ? ವಿಧಿ ಆಟದ ಮುಂದೆ ವಿದ್ಯಾ ಸೋಲುತ್ತಾಳಾ ಅಥವಾ ಸತ್ಯವನ್ನು ಸಾಬೀತುಪಡಿಸಿ ಸಂಸಾರವನ್ನು ಮತ್ತೆ ಒಂದು ಮಾಡುತ್ತಾಳಾ? ಕುತಂತ್ರಿಗಳ ಮುಖವಾಡ ಕಳಚುವ ಆ ರೋಚಕ ಕ್ಷಣಗಳು ಶೀಘ್ರದಲ್ಲೇ ಪ್ರಸಾರವಾಗಲಿವೆ. 'ಮುದ್ದುಸೊಸೆ' - ಪ್ರತಿ ರಾತ್ರಿ 7:30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.

Yashaswi Devadiga

View all posts by this author